ಪಾಕಿಸ್ತಾನಕ್ಕಿಂತ ಭಾರತ ಅತ್ಯಂತ ಬಲಿಷ್ಟ ತಂಡ: ಕಪಿಲ್‌ದೇವ್‌

ಚೆನ್ನೈ, ಜೂ 15 – ಭಾನುವಾರ ನಡೆಯುವ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಲಿದೆ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಭವಿಷ್ಯ ನುಡಿದರು.

ತಾವೊಬ್ಬ ಭಾರತೀಯನಾಗಿ ಈ ಮಾತು ಹೇಳುತ್ತಿಲ್ಲ. ಪಾಕಿಸ್ತಾನ ತಂಡಕ್ಕಿಂತ ಭಾರತ ಬಲಿಷ್ಟವಾಗಿದೆ. ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮವಾಗಿದೆ. ಒಂದು ವೇಳೆ ಪಾಕ್ ವಿರುದ್ಧ ಭಾರತ 10 ಪಂದ್ಯಗಳಲ್ಲಿ ಆಡಿದ್ದೇ ಆದಲ್ಲಿ ಅದರಲ್ಲಿ ಏಳು ಪಂದ್ಯಗಳಲ್ಲಿ ಖಂಡಿತ ಜಯ ಸಾಧಿಸಲಿದೆ. ಆದರೆ, ಭಾನುವಾರದ ಪಂದ್ಯ ಏನಾಗುತ್ತದೆ ಎಂದು ಭಗವಂತನಿಗೇ ಗೊತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

” ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ನನ್ನೊಂದಿಗೆ ಹೋಲಿಕೆ ಮಾಡಲ್ಲ. ಅವರು ಅದ್ಭುತ ಆಟಗಾರ ಜತೆಗೆ ವಿಶ್ವದ ನಂ.1 ಆಟಗಾರ. ನಮ್ಮ ತಂಡಕ್ಕೆ ಕೊಹ್ಲಿ ನಾಯಕನಾಗಿರುವುದು ನಮ್ಮ ಹೆಮ್ಮೆ” ಎಂದು ತಿಳಿಸಿದರು.

ಇದೇ ವೇಳೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್‌ ಬುಮ್ರಾ ಅವರನ್ನು 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಶ್ಲಾಘಿಸಿದರು.

” ಮೊದಲ ಬಾರಿ ಜಸ್ಪ್ರೀತ್‌ ಬುಮ್ರಾ ಅವರನ್ನು ನೋಡಿದ್ದಾಗ ಅವರ ಪ್ರತಿಭೆ ಹಾಗೂ ಸಾಮಾರ್ಥ್ಯದ ಬಗ್ಗೆ ತಿಳಿದಿರಲಿಲ್ಲ. ಅವರೊಬ್ಬ ಅದ್ಭುತ ಪ್ರತಿಭಾವಂತ ಎಂದು ಆ ಮೇಲೆ ಅರಿವಾಯಿತು. ಕಡಿಮೆ ಅಂತರದಿಂದ ಓಡಿ ಬಂದು ಅಷ್ಟೊಂದು ವೇಗವಾಗಿ ಬೌಲಿಂಗ್‌ ಮಾಡುವುದು ಸುಲಭವಲ್ಲ. ಬುಮ್ರಾ ಇನ್ನು ಐದು ವರ್ಷ ಫಿಟ್‌ ಆಗಿರಲಿ ಎಂದು ಆಶಿಸುತ್ತೇನೆ” ಎಂದು ಕಪಿಲ್‌ದೇವ್‌ ಹೇಳಿದರು.

Leave a Comment