ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ

ಬೆಂಗಳೂರು, ಜ 18 – ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ ‘ಜೇಮ್ಸ್’ ನಾಳೆ ಭಾನುವಾರ ಲಾಂಚ್ ಆಗುತ್ತಿದ್ದು, ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಶುಭಾರಂಭ ಮಾಡಲಿದೆ. ದೇವಸಂದ್ರ ಲೇ ಔಟ್ ನ ರಾಮಯ್ಯ ಆಸ್ಪತ್ರೆ ಎದುರಿನ ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ

ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಇದು ಅವರ 4ನೇ ಸಿನಿಮಾ ಆಗಿದೆ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಸಿನಿಮಾಗೆ ನಿರ್ದೇಶಿಸುತ್ತಿರುವುದು ವಿಶೇಷ ವಾಗಿದ್ದು, ಕಿಶೋರ್ ಪ್ರೊಡಕ್ಷನ್ಸ್ ಸಿನಿಮಾದ ನಿರ್ಮಾಣ ಮಾಡುತ್ತಿದೆ.  ಈ ಹಿಂದೆಯೇ ಸಿನಿಮಾದ ಸಣ್ಣ ಟೀಸರ್ ವೊಂದು ಬಿಡುಗಡೆಯಾಗದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದಿರುವ ‘ಜೇಮ್ಸ್’ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.

ಸದ್ಯ ‘ಯುವರತ್ನ’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಬ್ಯುಸಿ ಇದ್ದಾರೆ. ಈ ಸಿನಿಮಾ ಇದೇ ವರ್ಷ ಬಿಡುಗಡೆ ಆಗುತ್ತಿದೆ. ಈ ಚಿತ್ರದ ನಂತರ ‘ಜೇಮ್ಸ್’ ಸಿನಿಮಾ ಬರುತ್ತದೆ. ‘ಜೇಮ್ಸ್’ ಟೈಟಲ್ ಈಗಾಗಲೇ ದೊಡ್ಡ ಕುತೂಹಲ ಸೃಷ್ಟಿಸಿದೆ.

Leave a Comment