ಪಲಗುಲ ನಾಗರಾಜ ಕವನ ದಾಖಲೆ

ರಾಯಚೂರು.ಸೆ.07- ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಕೃಷಿಯ ಕಲರವ ಪಲಗುಲು ನಾಗರಾಜ ಅವರು ನಿರಂತರ 200 ದಿನಗಳಲ್ಲಿ 200 ಕವನ ಬರೆದು ದಾಖಲೆ ನಿರ್ಮಿಸಿದ್ದಾರೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜೆ.ಎಲ್.ಈರಣ್ಣ ಅವರು ತಿಳಿಸಿದ್ದಾರೆ.
ಅವರಿಂದು ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ನಾಗರಾಜ ಯಶಸ್ವಿಯಾಗಿದ್ದಾರೆ. ಕವನಗಳಲ್ಲಿ ಹಸಿವು, ನೋವು, ಬಡತನ, ಭ್ರಷ್ಟಾಚಾರ, ವಿರಹ, ಸರಸ, ಆದರ್ಶ, ಧಾರ್ಮಿಕ, ವೈಚಾರಿಕ, ಹೀಗೆ ಅವರ ಹಲವಾರು ಕವನಗಳು ಸಾಮಾಜಿಕ ಜಾಲತಾಣದಲ್ಲಿ ಮೇರುಗು ಚೆಲ್ಲಿದೆ. ದಿನಕ್ಕೊಂದು ಕವನ ನಿರಂತರಾಗಿ ಚಾಚುತಪ್ಪದೇ ಕವನ ಬರೆಯುವಲ್ಲಿ ನಿರಂತರಾಗಿರುವ ಪಲಗುಲ ನಾಗರಾಜ ಅವರು ರಾಯಚೂರು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಚಾಪು ಮೂಡಿಸಿದ್ದಾರೆ.
ಪಲಗುಲ ನಾಗರಾಜ ಅವರು ಮಾತನಾಡಿ, ಜನರು ಮೊಬೈಲ್‌ಗೆ ಮಾರುಹೋಗಿರುವುದರಿಂದ ಕ್ಷಣಾರ್ಧದಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆಂದರು. ವಾಟ್ಸಾಪ್, ಫೇಸ್ ಬುಕ್ ಮುಖಾಂತರ ದಿನಕ್ಕೊಂದಕ್ಕೆ 8,000 ಜನರನ್ನು ತಲುಪುತ್ತಿವೆ. ಪ್ರತಿದಿನ ನೂರಾರು ಅಭಿಪ್ರಾಯಗಳು, ಮೆಚ್ಚುಗೆಗಳು ಬರುತ್ತಿವೆಂದರು.
ಈ ಸಂದರ್ಭದಲ್ಲಿ ಭೀಮನಗೌಡ ಇಟಗಿ ಉಪಸ್ಥಿತರಿದ್ದರು.

Leave a Comment