ಪರೀಕ್ಷೆ ಭಯ: ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ತುಮಕೂರು. ಮಾ. ೧೩- ನಗರದ ವಿದ್ಯಾವಾಹಿನಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಗಣಿತ ವಿಷಯ ಪರೀಕ್ಷೆ ನಡೆದಾಗ ಪ್ರಶ್ನೆ ಪತ್ರಿಕೆ ನೋಡಿ ಹೆದರಿದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದ ಮೇಲೆ ಹತ್ತಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿತ್ತು.

ಹೀಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವಿದ್ಯಾರ್ಥಿ ಮಹೇಶ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಭಾನುಪ್ರಕಾಶ್ ಎಂದು ತಿಳಿದಿದೆ.

ಮೂತ್ರ ವಿಸರ್ಜನೆಗೆ ಹೊರ ಹೋದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಬಳಿಕ ಪ್ರಚಾರ್ಯರು ಹಾಗೂ ಸಿಬ್ಬಂದಿ ಮನವೊಲಿಸಿ ಕರೆತಂದು ಧೈರ್ಯ ಹೇಳಿದರು ಎನ್ನಲಾಗಿದೆ.

Leave a Comment