ಪರೀಕ್ಷಾ ಶುಲ್ಕ ಸರ್ಕಾರವೇ ಭರಿಸಲಿ

 

ಕಲಬುರಗಿ,ಮೇ.20-ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರಕಾರಿ ಪದವಿ ಮಹಾವಿದ್ಯಾಲಯ ಹಾಗೂ ಖಾಸಗಿ ಮಹಾವಿದ್ಯಾಲಯಗಳಿಗೆ ಜುಲೈ ತಿಂಗಳಲ್ಲಿ ಜರುಗಲಿರುವ ಬಿ.ಎ., ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಮ್, ಬಿ.ವಿ.ಎ., ಬಿ.ಎಫ್.ಎ ಹಾಗೂ ಬಿ.ಎಸ್.ಡಬ್ಲ್ಯೂ 2,4,6ನೇ ಸೆಮಿಸ್ಟರ್ ಕ್ಲಸ್ಟರ್ ಪರೀಕ್ಷೆಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ಅಧ್ಯಕ್ಷ ಹಣಮಂತ ಎಸ್.ಎಚ್ ಮತ್ತು ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಇಸಬಾ ಒತ್ತಾಯಿಸಿದ್ದಾರೆ.

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣ ಅವರಿಗೆ ಮನವಿಪತ್ರ ಸಲ್ಲಿಸಿರುವ ಅವರು, ಆದಕಾರಣ, ಕೊರೊನಾ ಲಾಕ್ ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಸಾಲಿನ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ವಿಶ್ವವಿದ್ಯಾಲಯವು ಆನ್‍ಲೈನ್ ತರಗತಿ ನಡೆಸುತ್ತಿದ್ದು ಎಲ್ಲಾ ವಿದ್ಯಾರ್ಥಿಗಳ ಹತ್ತಿರ ಸ್ಮಾರ್ಟ್‍ಫೋನ್ ಹಾಗೂ ಇತರೆ ಹಲವಾರು ಸಮಸ್ಯೆಗಳಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಕೆಲವು ತಿಂಗಳುಗಳ ಕಾಲ ಕಾಲೇಜುಗಳನ್ನು ಪ್ರಾರಂಭಿಸಿ ತರಗತಿಗಳನ್ನು ನಡೆಸಬೇಕು. ಮತ್ತು ಕೆಲವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದುವೇಳೆ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳು ಕಟ್ಟಿದ್ದರೆ ಅದನ್ನು ಮರುಪಾವತಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ಮುಂಜಾಗೃತವಹಿಸಬೇಕು. ಹಾಗೂ ವಿದ್ಯಾರ್ಥಿಗಳಿಗೆ  ಸಾಮಾಜಿಕ ಅಂತರ, ಸ್ಯಾನೀಟೈಸರ್, ಮಾಸ್ಕ್ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Share

Leave a Comment