ಪರಿಸರ ಸ್ವಚ್ಚತೆಯಿಂದ ಸುಖೀ ಸಮಾಜ ನಿರ್ಮಾಣ

ಹೊಸದುರ್ಗ.ಜ.31; ನಾವು ನಮ್ಮ ಸುತ್ತಮುತ್ತಲ ಪರಿಸರವನ್ನ ಸ್ವಚ್ಚಗಾಗಿಡಬೇಕು,ಪರಸರ ಸ್ವಚ್ಚತೆಯಿಂದ ಸುಖೀ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೊಸದುರ್ಗ ಜೆ,ಎಂ,ಎಫ್,ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜೆ.ದಿನೇಶ್ ಕರೆ ನೀಡಿದರು. ಅವರು ಪುರಸಭೆ ಹೊಸದುರ್ಗ,ತಾಲ್ಲೂಕು ಆರೋಗ್ಯ ಇಲಾಖೆ,ಕಾನೂನು ಸೇವಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಅಂಗವಾಗಿ ಸ್ಚಚ್ಚತಾ ಆಂದೋಲನ ಕಾರ್ಯಕ್ರಮಕ್ಕೆ ಹಸಿರು ನಿಶಾನಿ ತೋರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಸರವನ್ನ ಸ್ವಚ್ಚವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಪರಿಸರವನ್ನ ಸ್ವಚ್ಚವಾಗಿಟ್ಟುಕೊಂಡರೆ ಯಾವ ಕಾಯಿಲೆಗಳೂ ಬರುವುದಿಲ್ಲಾ, ನಮ್ಮ ಜವಾಬ್ದಾರಿಗಳನ್ನು ಅರಿತು ಸರ್ವರೂ ಕೆಲಸ ಮಾಡಬೇಕಿದೆ ಸ್ವಚ್ಚತೆಯ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಪಾರವಾದ ಕನಸನ್ನ ಇಟ್ಟುಕೊಂಡಿದ್ದಾರೆ. ಅವರ ಕನಸು ನನಸು ಮಾಡಬೇಕಾದರೆ ಸ್ವಚ್ಚತೆಯ ವಿಚಾರದಲ್ಲಿ ಪ್ರತಿಯೋಬ್ಬರಲ್ಲೂ ಜಾಗೃತಿ ಹಾಗೂ ಅರಿವು ಮೂಡಬೇಕು ಎಂದರು.

ಈ ವೇಳೆ ಜೆ,ಎಂ,ಎಫ್,ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀಕಾಂತ್,ಪುರಸಭಾ ಮುಖ್ಯಾಧಿಕಾರಿ ಮಹಂತೇಶ್,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಮಹಂತೇಶ್,ಪುರಸಭಾ ಅಧ್ಯಕ್ಷ ಹೆಚ್.ಪಿ.ಉಮೇಶ್,ಸದಸ್ಯರುಗಳಾದ ಡಿ.ವಿ.ಅಂಜನ್ ಕುಮಾರ್,ಕೆ.ವಿ.ಸ್ವಾಮಿ,ದಳವಾಯಿ ವೆಂಕಟೇಶ್, ಎಇಇ.ರವೀಶ್,ಭಾವನಾಮೂರ್ತಿ,ಡಾ:ರಾಘವೇಂದ್ರ ಪ್ರಸಾದ್,ಆನಂದಪ್ಪ,ಆರೋಗ್ಯ ನಿರೀಕ್ಷಕ ಕಲೀಂವುಲ್ಲಾ,ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್,ಕಲ್ಮಠ್,ಕಾರ್ಯದರ್ಶಿ ಟಿ.ರಮೇಶ್,ಸಿಡಿಪಿಓ ಲೋಕೇಶ್ ಹಾಗೂ ಸರ್ಕಾರಿ ಪಾಲಿಟೆಕ್ನಕ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment