ಪರಿಸರ ಸ್ನೇಹಿ ಗ್ರೀನ್‌ಬಗ್ ತಯಾರಿಸಿ ಗಮನಸೆಳೆದ ದಂಪತಿ

ಅಮೆಜಾನ್‌ನಲ್ಲೂ ಮಾರಾಟ

ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ನಿಷೇಧಕ್ಕೆ ಕರೆಕೊಟ್ಟಿದ್ದು, ಇತ್ತ ಉದ್ಯಾನನಗರಿಯ ದಂಪತಿಗಳು ೨೦೨೫ರಲ್ಲಿಯೇ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಗ್ರೀನ್‌ಬಗ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟು ಸೈಎನಿಸಿಕೊಂಡಿದ್ದಾರೆ.

ಇಡೀ ದೇಶ ಇದೀಗ ಪ್ಲಾಸ್ಟಿಕ್‌ದಿಂದಾಗುವ ದುಷ್ಪರಿಣಾಮ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದೆ. ಆದರೆ ನಗರದ ದಂಪತಿ ಜ್ಯೋತಿ ಪಹಾದ್ ಸಿಂಗ್ ಮತ್ತು ಅರುಣ್ ಬಾಲಚಂದ್ರನ್ ತಮ್ಮ ಮನೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬ್ಯಾಗ್‌ಗಳಿಗೆ ಪರ್ಯಾಯವನ್ನು ೨೦೧೫ರಲ್ಲಿಯೇ ಗ್ರೀನ್‌ಬಗ್‌ನ್ನು ಜನರಿಗೆ ಪರಿಚಯಿಸಿದ್ದರು.

ಆ ಸಮಯದಲ್ಲಿ ಪರಿಸರ ಸ್ನೇಹಿ ಬ್ಯಾಗ್‌ಗಳ ಪರಿಕಲ್ಪನೆ ಇನ್ನೂ ಪ್ರಾರಂಭಿಕ ಹಂತದಲ್ಲಿತ್ತು ಮತ್ತು ಈ ದಂಪತಿ ದೀರ್ಘಬಾಳಿಕೆಯ, ಪರಿಸರ ಸ್ನೇಹಿ ತ್ಯಾಜ್ಯ ವಿಲೇವಾರಿಯ ಅಗತ್ಯವನ್ನು ಅರ್ಥ ಮಾಡಿಕೊಂಡಿದ್ದರು. ಅವರು ದಿನಪತ್ರಿಕೆಗಳನ್ನೇ ಬಳಸಿಕೊಂಡು ಉತ್ಪನ್ನ ಸೃಷ್ಟಿಸಿದ್ದರು. ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ತರಲು ಜ್ಯೋತಿ ಮತ್ತು ಅರುಣ್ ಈ ಉತ್ಪನ್ನದ ಉತ್ಪಾದನೆಯಲ್ಲಿ ದುರ್ಬಲ ವರ್ಗದ ಮಹಿಳೆಯರಲ್ಲಿ ತೊಡಗಿಸುವ ಮೂಲಕ ಅವರಿಗೆ ಉತ್ತಮ ಜೀವನೋಪಾಯ ಕಂಡುಕೊಳ್ಳಲು ಶಕ್ತಿ ನೀಡಿ ಇದೀಗ ಗಮನ ಸೆಳೆದಿದ್ದಾರೆ.

ಕೈಗಳಲ್ಲಿ ತಯಾರಿಸಲಾಗುವ ಗುಡಿ ಕೈಗಾರಿಕೆಯ ಉತ್ಪನ್ನವಾದ ಗ್ರೀನ್‌ಬಗ್‌ಗೆ ಈ ತ್ಯಾಜ್ಯದ ಬ್ಯಾಗ್‌ಗಳ ತಕ್ಷಣದ ಉತ್ಪಾದನೆಗೆ ತರಬೇತಿ ನೀಡುವುದು ಅಗತ್ಯವಾಗಿತ್ತು. ಬಿನ್ ಲೈನರ್‌ಗಳ ತರಬೇತಿ ಮತ್ತು ಉತ್ಪಾದನೆಗೆ ಸಾಮಷ್ಟು ಸಮಯವಿದ್ದಲ್ಲಿ ವಿಸ್ತಾರ ಮಾರುಕಟ್ಟೆಯ ಲಭ್ಯತೆ ಸಾಧ್ಯವಾಗುತ್ತಿತ್ತು. ಗ್ರೀನ್‌ಬಗ್ ಮಹಿಳೆಯರೊಂದಿಗೆ ಕೆಲಸ ಮಾಡುವ ಮೂಲಕ ಅವರಿಗೆ ಹೆಚ್ಚುವರಿ ಪೂರಕ ವರಮಾನ ಲಭ್ಯವಾಗುವಂತೆ ಮಾಡಿತು. ಕಳೆದ ೪ ವರ್ಷಗಳಿಂದ ಗ್ರೀನ್‌ಬಗ್ ಸುಮಾರು ೪೦೦ ಮಹಿಳೆಯರಿಗೆ ಈ ಉತ್ಪನ್ನಗಳ ಉತ್ಪಾದನೆಯ ತರಬೇತಿ ನೀಡಿದೆ.

ಅಮೆಜಾನ್‌ನಲ್ಲಿ ಮಾರಾಟ ಹೆಚ್ಚಳ
೨೦೧೭ರಲ್ಲಿ ಗ್ರೀನ್‌ಬಗ್ ಅಮೆಜಾನ್ ಇಂಡಿಯಾದ ಆನ್‌ಲೈನ್ ಮಾರಾಟದ ಪ್ಲಾಟ್‌ಫಾರಂ ಅನ್ನು ಅಮೆಜಾನ್ ಸಹೇಲಿ ಕಾರ್ಯಕ್ರಮದ ಅಡಿಯಲ್ಲಿ ಸೇರಿದ್ದು ಇದು ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಮತ್ತು ಅಮೆಜಾನ್.ಇನ್ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿ ಮಾರಾಟ ಮಾಡಲು ನೆರವಾಗುತ್ತದೆ. ಅಮೆಜಾನ್‌ನಲ್ಲಿ ಪಟ್ಟಿಯಾದ ನಂತರ ಈ ಸ್ಟಾರ್ಟಪ್ ಆರ್ಡರ್‌ಗಳು ಮತ್ತು ಮಾರಾಟದಲ್ಲಿ ಹೆಚ್ಚಳ ಕಂಡಿತು. ಪ್ರಾರಂಭಿಕವಾಗಿ ಪುಟ್ಟ ಯೋಜನೆಯಾಗಿ ಪ್ರಾರಂಭಗೊಂಡ ಗ್ರೀನ್‌ಬಗ್ ಅಪಾರವಾಗಿ ಬೆಳೆದಿದ್ದು ದೇಶದ ಬಹುತೇಕ ಎಲ್ಲ ರಾಜ್ಯಗಳಿಗೂ ಲಭ್ಯ ಹಾಗೂ ಸೇವೆ ಒದಗಿಸುತ್ತಿದೆ.

೨೦೧೭ರ ನವೆಂಬರ್‌ನಲ್ಲಿ ಪ್ರಾರಂಭವಾದ ಅಮೆಜಾನ್ ಸಹೇಲಿ ಮಹಿಳಾ ಉದ್ಯಮಿಗಳಿಂದ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಈ ಕಾರ್ಯಕ್ರಮದ ಭಾಗವಾಗಿ ಅಮೆಜಾನ್ ಮಹಿಳಾ ಉದ್ಯಮಿಗಳಿಗೆ ನೆರವಾಗಲು ವಿಸ್ತಾರ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳನ್ನು ನಿರ್ವಹಿಸುವ ಮೂಲಕ ಆನ್‌ಲೈನ್ ಮಾರಾಟದ ತಿಳಿವಳಿಕೆ ನೀಡುತ್ತದೆ ಮತ್ತು ಅವರಿಗೆ ಅಮೆಜಾನ್.ಇನ್‌ನಲ್ಲಿ ವ್ಯಾಪಾರ ವೃದ್ಧಿಸಲು ಬೇಕಾದ ಕೌಶಲ್ಯಗಳು ಮತ್ತು ಸಾಮರ್ಥ್ಯಗಳ ಮೂಲಕ ನೆರವಾಗುತ್ತದೆ. ಇಂದಿನವರೆಗೆ ಅಮೆಜಾನ್ ಸಹೇಲಿ ದೇಶದ ೧೦೦೦೦೦ ಮಹಿಳಾ ಉದ್ಯಮಿಗಳಿಗೆ ಉಡುಪು, ಕಛೇರಿ ಉತ್ಪನ್ನಗಳು, ಹ್ಯಾಂಡ್‌ಬ್ಯಾಗ್‌ಗಳು, ದಿನಸಿ ಮತ್ತು ಕಿಚನ್ ಅಕ್ಸೆಸರಿ ಮತ್ತು ಆಭರಣ ಮಾರಾಟ ಮಾಡಲು ನೆರವಾಗಿದೆ. ಹೆಚ್ಚಿನ ವಿವರಗಳಿಗೆ ತಿತಿತಿ.ಚಿmಚಿzoಟಿ.iಟಿ/sಚಿheಟi

Leave a Comment