ಪರಿಸರ ಸ್ನೇಹಿ ಗೌರಿ – ಗಣೇಶ ಮೂರ್ತಿಗೆ ಹೆಚ್ಚಿದ ಬೇಡಿಕೆ

ಮಣ್ಣಿನ ಮೂರ್ತಿ ತಯಾರಿಕೆಗೆಂದೇ ಸಂಘ ಸ್ಥಾಪನೆ
ಮೈಸೂರು, ಸೆ. 12, ಎಲ್ಲರ ಕಣ್ಮನ ಸೆಳೆಯುವ ಹಾಗೇ ಸಾಲು ಸಾಲಾಗಿ ಜೋಡಿಸಿರುವ ಗಣಪತಿ ಮೂರ್ತಿಗಳು, ಕುತೂಹಲದಿಂದ ಗಣಪತಿ ವೀಕ್ಷಿಸುತ್ತಿರುವ ಜನರು, ನಮಗೆ ಪರಿಸರ ಸ್ನೇಹಿ ಗಣಪತಿಯೇ ಬೇಕು ಅಂತ ಖರೀದಿಯಲ್ಲಿ ತೊಡಗಿರುವ ಜನರು ಇದೆಲ್ಲಾ ಕಂಡು ಬಂದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನ ಅಶೋಕ ರಸ್ತೆ, 5 ಕ್ರಾಸ್, ಕುಂಬಾರಗೇರಿಯಲ್ಲಿ.
ಗಣೇಶನ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ವಿಘ್ನ ವಿನಾಶಕನ ಸ್ವಾಗತಕ್ಕೆ ಈಗಾಗಲೇ ಅರಮನೆ ನಗರಿ ಮೈಸೂರಿನ ಜನತೆ ಸಿದ್ಧರಾಗಿದ್ದಾರೆ. ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಬಹುದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿವೆ. ಜೇಡಿ ಮಣ್ಣಿನ ಗಣಪತಿ ಮೂರ್ತಿ ತಯಾರಿಸಿ, ಗ್ರಾಹಕರಿಗೆ ವಿತರಿಸಲೆಂದೇ ಮೈಸೂರಲ್ಲಿ ಒಂದು ಸಂಘ ಸ್ಥಾಪನೆಯಾಗಿರುವುದು ಗಮನ ಸೆಳೆಯುತ್ತಿದೆ. ಮೈಸೂರಿನಲ್ಲಿ ಕಳೆದ 40 ವರ್ಷಗಳಿಂದ ಪುಟ್ಟಸ್ವಾಮಿ ಎಂಬುವರು ಪರಿಸರ ಗಣಪತಿ ತಯಾರಿಕೆಯಲ್ಲಿ ತೊಡಗಿದ್ದಾರೆ.
ಗಣೇಶ ಚತುರ್ಥಿ ಆರಂಭವಾಯಿತೆಂದರೆ ಸಾಕು ಹಳ್ಳಿ ಹಳ್ಳಿಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಥರಾವರಿ ಗಣಪನ ಮೂರ್ತಿಗಳನ್ನು ಕೂರಿಸಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿ, ಗಾಢ ಬಣ್ಣಗಳಿಂದ ತುಂಬಿದ್ದ ಗಣಪನ ಮೂರ್ತಿಗಳು ಪರಿಸರಕ್ಕೆ ಅಪಾಯಕಾರಿ. ಇವುಗಳಿಂದ ಬಿಡುಗಡೆಯಾಗುವ ರಸಾಯನಿಕಗಳು ಶುದ್ಧ ನೀರನ್ನು ಕಲುಷಿತಗೊಳಿಸಿ ಜಲಚರಗಳ ಸಾವಿಗೆ ಕಾರಣವಾಗುತ್ತವೆ. ಈ ಹಿನ್ನಲೆಯಲ್ಲಿ ಪರಿಸರ ಸ್ನೇಹಿ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿಯನ್ನು ತಯಾರು ಮಾಡಲಾಗುತ್ತಿದೆ. ಇದಕ್ಕೆಂದೇ ಮೈಸೂರಲ್ಲಿ ಜೇಡಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕಾ ಸಂಘವೊಂದು ತಲೆ ಎತ್ತಿದೆ.
ಜೇಡಿ ಮಣ್ಣೇ ಕಚ್ಚಾ ವಸ್ತು:
ಜೇಡಿ ಮಣ್ಣಿನಿಂದ ಮಾಡುವ ಮೂರ್ತಿ ಹಾಗೂ ಗಿಡಮೂಲಿಕೆಗಳಿಂದ ತಯಾರಾಗುವ ನೈಸರ್ಗಿಕ ಬಣ್ಣದ ಲೇಪನದಿಂದ ಮಾಡುವುದೇ ಪರಿಸರ ಸ್ನೇಹಿ ನೈಸರ್ಗಿಕ ಗಣಪ. ಇತ್ತೀಚಿನ ದಿನಗಳಲ್ಲಿ ಪೇಪರ್ ಗಣಪತಿ, ಪ್ಲಾಸ್ಟರ್ ಪ್ಯಾರೀಸ್ ಗಣಪತಿಗೆ ಮಾರು ಹೋಗುತ್ತಿರುವ ಜನರ್ರು.ಅದರ ಮಧ್ಯದಲ್ಲಿಯೇ ಪುಟ್ಟಸ್ವಾಮಿ
ಪರಿಸರ ಸ್ನೇಹಿ ಗಣಪತಿ ತಯಾರು ಮಾಡುತ್ತಿದ್ದಾರೆ. ತಂದೆ ಹೇಳಿಕೊಟ್ಟ ಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಪುಟ್ಟಸ್ವಾಮಿ. ಗಣಪತಿ ಹಬ್ಬ ಶುರುವಾಗುವ 4 ರಿಂದ 5 ತಿಂಗಳ ಹಿಂದಿನಿಂದಲೇ ಗಣಪತಿ ತಯಾರಿಕೆಯಲ್ಲಿ ತೊಡಗುತ್ತಾರೆ. ಜೇಡಿ ಮಣ್ಣನ್ನು ಮಾತ್ರ ಬಳಸಿ ಪರಿಸರ ಗಣಪತಿಯನ್ನು ತಯಾರು ಮಾಡುತ್ತಿದ್ದಾರೆ. ಜೇಡಿ ಮಣ್ಣಿನ ಜೊತೆ ನೀರನ್ನು ಬೆರಸಿ ಗಣಪತಿ ತಯಾರಿಕೆ ಮಾಡಿ, ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದಾರೆ.
ಸೀಸ ರಹಿತ ಬಣ್ಣ, ಜೇಡಿ ಮಣ್ಣಿನಿಂದ ಮಾಡಿರುವ ಬಣ್ಣರಹಿತ ಗಣಪ ಹಾಗೂ ಬಣ್ಣ ಲೇಪಿತ ಗಣಪನ ಮೂರ್ತಿಯನ್ನು ಇಷ್ಟಪಡದ ವ್ಯಕ್ತಿಗಳೂ ನೈಸರ್ಗಿಕ ಗಣಪನನ್ನು ಕೊಂಡುಕೊಳ್ಳುತ್ತಿದ್ದಾರೆ. ಪರಿಸರ ಸ್ನೇಹಿ ಗಣಪತಿಗೆ ವಾಟರ್ ಕಲರ್ ಬಣ್ಣ ಹಚ್ಚಲಾಗುತ್ತದೆ. ಯಾವುದೇ ಇತರೆ ಬಣ್ಣವನ್ನು ಪರಿಸರ ಗಣಪತಿಗೆ ಹಚ್ಚುವುದಿಲ್ಲಾ. ಅರ್ಧ ಅಡಿಯಿಂದ ಮೂರುವರೆ ಅಡಿಯತನಕ ಗಣಪತಿ ತಯಾರು ಮಾಡಿದ್ದೇವೆ.
ಗಂಡಬೇರುಂಡ, ಮೈಸೂರು ಪೇಟ, ಹಂಸ, ಶಂಖು, ದಿಂಬು, ಹಸು, ಕೃಷ್ಣ ಗಣಪತಿ ಸೇರಿದಂತೆ ವಿವಿಧ ಬಗೆಯ ಗಣಪತಿ ತಯಾರಿಕೆಯಾಗಿದೆ.ತವರೆ ಹೂವಿನ ಮೇಲೆ ಕುಳಿತಿರುವ ಗಣಪತಿ ಹೆಚ್ಚು ಸೇಲ್ ಆಗುತ್ತಿದೆ. 100 ರೂಪಾಯಿಯಿಂದ 10 ಸಾವಿರದವರೆಗೂ ಗಣಪತಿಯನ್ನು ಮಾರಾಟ ಮಾಡಲಾಗುತ್ತಿದೆ.
ಪುಟ್ಟಸ್ವಾಮಿರವರ ಕುಶಲ ಕಲೆಯಲ್ಲಿ 500ಕ್ಕೂ ಹೆಚ್ಚು ಮೂರ್ತಿಗಳು ಒಂದಕ್ಕಿಂತ ಒಂದು ಚೆಂದವಾಗಿ ಬಗೆಬಗೆಯೆ ವಿನ್ಯಾಸದಲ್ಲಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದೆ.
ಗಣಪತಿ ಮೂರ್ತಿ ತಯಾರಿಕೆಯನ್ನೇ ಕಸುಬಾಗಿ ಮೈಗೂಡಿಸಿಕೊಂಡಿರುವ ಪುಟ್ಟಸ್ವಾಮಿ ಕುಟುಂಬ ಗ್ರಾಹಕರ ಅಭಿರುಚಿಗೆ ತಕ್ಕಂತೆ ಗಣಪತಿ ತಯಾರಿಸುತ್ತಾ ಬಂದಿದೆ. ಇಲ್ಲಿ ತಯಾರು ಮಾಡುವ ಗಣಪತಿ ಮೂರ್ತಿಗೆ ಬಹಳ ಬೇಡಿಕೆ ವ್ಯಕ್ತವಾಗಿದೆ.

Leave a Comment