ಪರಿಸರ ಸಂರಕ್ಷಣೆಗೆ ಜನರ ಸಹಭಾಗಿತ್ವ ಅವಶ್ಯ

ಲಕ್ಷ್ಮೇಶ್ವರ,ಜೂ12: ತಾಲೂಕಿನ ಯಳವತ್ತಿ ಗ್ರಾಮದಲ್ಲಿ  ಗ್ರಾಮ್ಭಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಚ ಭಾರತ ಮಿಷನ್( ಗ್ರಾಮೀಣ), ಜಿಪಂ, ತಾಪಂ, ಗ್ರಾಪಂ ಹಾಗೂ ಇನ್ನಿತರೇ ಇಲಾಖೆಗಳ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಸ್ವಚ್ಚಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಅವರು, ಇತ್ತೀಚಿನ ದಿನಗಳಲ್ಲಿ ಬರಗಾಲದ ಭವಣೆ ಎದುರಿಸುತ್ತಿದ್ದು ಇದನ್ನು ಹೋಗಲಾಡಿಸಲು ಪರಿಸರ ಸಂರಕ್ಷಣೆ ಅಸ್ತ್ರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಕೈಗೊಳ್ಳುವ ಪರಿಸರ ಸಂರಕ್ಷಣೆಯ ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಮತ್ತು ಸಹಭಾಗಿತ್ವ ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ವೈ. ಗುರಿಕಾರ ಅವರು ಕಳೆದ 1 ದಶಕದಿಂದ ರಾಜ್ಯ ಬರಗಾಲದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸಿಕೊಳ್ಳಲು ಸರ್ಕಾರಗಳು ಅನೇಕ ಯೋಜನೆಗಳ ಮುಖಾಂತರ ಶ್ರಮಿಸುತ್ತಿದೆ. ಬರಗಾಲಕ್ಕೆ ಪರಿಹಾರವಾಗಿ ಜನರಿಗೆ ಉದ್ಯೋಗ, ಅರಣ್ಣೀಕರಣ, ಮಳೆ ನೀರು ಮತ್ತು ಮಣ್ಣಿನ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಇದನ್ನು ಮನಗಂಡು ಪ್ರಸಕ್ತ ವರ್ಷವನ್ನು ಜಲವರ್ಷ ಎಂದು ಹಾಗೂ ಸ್ವಚ್ಚತೆಯ ಅರಿವು ಮೂಡಿಸಲು ಸ್ವಚ್ಚಮೇವ ಜಯತೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷೆ ಜನ್ನತಬೀ ಗುಮ್ಮನವರ, ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಜಿಪಂ ಸದಸ್ಯೆ ದೇವಕ್ಕ ಲಮಾಣಿ, ಹುಸೇನಬೀ ಅತ್ತಿಗೇರಿ, ಕುಬೇರಪ್ಪ ಶಿಗ್ಲಿ, ಆರ್.ಬಿ. ಅಜ್ಜನಗೌಡರ, ವಿರುಪಾಕ್ಷಪ್ಪ ಮೇಟಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್, ಅನಿವಾಶ ಗೋಡಖಿಂಡಿ, ಎಸ್.ಬಿ.ಹೊಸಳ್ಳಿ, ಎಫ್.ಎಂ.ನಧಾಪ್, ಹೆಚ್.ಬಿ. ರಡ್ಡೇರ, ಜಿ.ಎಲ್. ಬಾರಾಟಕ್ಕಿ, ಪಿಡಿಓ ಪ್ರವೀಣ ಗೋಣೆಮ್ಮನವರ ಮತ್ತಿತರರಿದ್ದರು. ಎಂ.ಜಿ. ಉಪ್ಪಿನ ನಿರೂಪಿಸಿದರು. ಬಳಿಕ ಶಾಲಾ ಕಾಲೇಜುಗಳ ಆವರಣ, ರೈತರ ಬದುವುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು.

Leave a Comment