ಪರಿಸರ ರಕ್ಷಣೆ ಆಂದೋಲನವಾಗಿ ಮಾರ್ಪಡಬೇಕು-ಮುರಾರಿ

ಧಾರವಾಡ ಜೂ.6-: ಹೆಚ್ಚುತ್ತಿರುವ ಜಾಗತಿಕ ತಾಪಮಾನ ಎದುರಿಸುವ ನಿಟ್ಟಿನಲ್ಲಿ ಪರಿಸರ ರಕ್ಷಣೆ ಆಂದೋಲನವಾಗಿ ಮಾರ್ಪಡಬೇಕು ಎಂದು ನಿವೃತ್ತ ನ್ಯಾಯಾಧೀಶ ಎ.ಪಿ.ಮುರಾರಿ ಅಭಿಪ್ರಾಯಪಟ್ಟರು.
ಬುಧವಾರ ಇಲ್ಲಿನ ಸಪ್ತಾಪೂರದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಚಾಣಕ್ಯ ಕರಿಯರ್ ಅಕಾಡೆಮಿ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಚತೆ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮರಗಳ ಪೋಷಣೆಯ ಕೊರತೆ, ಕಾಡುಗಳ ನಾಶ ಇನ್ನಿತರ ಕಾರಣಗಳಿಂದ ಕಳೆದ 2-3 ದಶಕಗಳಲ್ಲಿ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಕಂಡುಬಂದಿದೆ.
ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ಮತ್ತು ಇತರ ಸಂಘಟನೆಗಳು ತೋರಿಸುತ್ತಿರುವ ಪರಿಸರ ಕಾಳಜಿ ಮಾದರಿಯಾಗಿದೆ ಎಂದು ಅವರು ಹೇಳಿದರು.ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ ಗುಡ್ಡದ, ಮನೋವೈದ್ಯ ಡಾ.ಆನಂದ ಪಾಂಡುರಂಗಿ, ಜ್ಞಾನಧಾರೆ ಕರಿಯರ್ ಅಕಾಡೆಮಿಯ ಮಂಜುನಾಥ ಜಿ., ಪೂರ್ಣಾ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಸಿ.ಹಾದಿಮನಿ, ಹೆಸ್ಕಾಂ ವಲಯಾಧಿಕಾರಿ ನಾಗಾರ್ಜುನ ಪಿ.,ನಿವೃತ್ತ ಶಿಕ್ಷಕ ಎಸ್.ಬಿ.ಮುದಿಗೌಡರ, ಗುತ್ತಿಗೆದಾರ ಶರಣಗೌಡರ ಅತಿಥಿಗಳಾಗಿ ಆಗಮಿಸಿದ್ದರು. ಸಮಾಜ ಸೇವಕ ಪ್ರಭು ಥಾಂವಶಿ ಅಧ್ಯಕ್ಷತೆವಹಿಸಿದ್ದರು.
ಜಯನಗರ ಕ್ರಾಸ್‍ನಿಂದ ಶಾರದಾ ಸ್ಕೂಲ್ ರಸ್ತೆಯ ಮಾರ್ಗವಾಗಿ ಮಿಚಿಗನ್ ಕಂಪೌಂಡ ಮೈದಾನದವರೆಗೆ ವಿವಿಧ ಸಂಘಟನೆಗಳ ಸದಸ್ಯರಿಂದ ಸ್ವಚ್ಚತೆ ಕೈಕೊಂಡು ನಂತರ ಸಸಿ ನೆಡಲಾಯಿತು.
ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಬಳಿಕ ಹೆಚ್ಚು ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಅತಿಥಿಗಳು ಪುಸ್ತಕಗಳ ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಹೇಮಂತ ಎಸ್.ಎಕ. ಪ್ರಾರ್ಥಿಸಿ, ನಿರೂಪಿಸಿದರು. ಬಸವರಾಜ ಕಟ್ಟಿ ಸ್ವಾಗತಿಸಿದರು. ಮಹಾಂತೇಶ ಮಿರ್ಜೆ ವಂದಿಸಿದರು. ಮಲ್ಲಿಕಾರ್ಜುನ ಥಾಂವಶಿ, ರಾಜು ಬೆಳವಡಿ, ತಾಜ್ ನವಲೂರ, ಪ್ರಶಾಂತ ತಳವಾರ, ಕೃಷ್ಣಾ ಚವ್ಹಾಣ, ಹರೀಶ ಬಿಜಾಪೂರ, ಬಸವರಾಜ ಹಾನಗಲ್,  ಅನಿಲ್  ಸಾಂಬ್ರಾಣಿ, ಮಂಜುನಾಥ್ ಹೊಸಟ್ಟಿ, ಬಸವರಾಜ  ಅರಳಿಕಟ್ಟಿ  ಇನ್ನಿತರರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.

Leave a Comment