ಪರಿಷತ್: ಬಿಜೆಪಿ ಸಭಾತ್ಯಾಗ

ಬೆಂಗಳೂರು, ಫೆ. ೧೧- ಶಾಸಕರೊಬ್ಬರಿಗೆ ಹಣದ ಆಮಿಷ ನೀಡಿದ್ದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಡಳಿತ ಪಕ್ಷದ ಸದಸ್ಯರಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಭಿತ್ತಿ ಪತ್ರ ಪ್ರದರ್ಶಿಸಿ ಧರಣಿ ನಡೆಸಿದ ಅಪರೂಪದ ಪ್ರಸಂಗ ನಡೆಯಿತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ 2 ಬಾರಿ ಸದನ ಮುಂದೂಡಿ ಮತ್ತೆ ಕಲಾಪ ಆರಂಭಗೊಂಡಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಮುಂದೂವರೆಸಿದರು.ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ, ಗದ್ದಲ ನಡೆಯಿತು.

ಆಡಳಿತ ಪಕ್ಷದ ಸದಸ್ಯರು ಧರಣಿ ನಡೆಸಿದ ಹಿನ್ನಲೆಯಲ್ಲಿ ಪ್ರತಿಪಕ್ಷದ ಸದಸ್ಯರು ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭಾ ತ್ಯಾಗ ನಡೆಸಿ, ಆಡಳಿತ ಪಕ್ಷದ ಸದಸ್ಯರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೂ ಮುನ್ನ ಸದನ ಸಮಾವೇಶ ಗೊಳ್ಳುತ್ತಿದ್ದಂತೆ ಪ್ರತಿ ಪಕ್ಷ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.

ಈ ನಡುವೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿದ್ದಾಗಲೇ ಮಧ್ಯೆ ಪ್ರವೇಶಿಸಿದ ಆಡಳಿತ ಪಕ್ಷದ ನಾಯಕಿ ಜಯಮಾಲಾ ಈ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆಯಿತು.

ಈ ಹಂತದಲ್ಲಿ ಮಾತನಾಡಿದ ಸಭಾನಾಯಕಿ ಜಯಮಾಲಾ ಆಡಳಿತ ಪಕ್ಷದ ಸದಸ್ಯರು, ಧರಣಿ ಬಿಟ್ಟು ವಾಪಸ್ಸು ಬನ್ನಿ, ಚರ್ಚೆ ಮಾಡೋಣ ಎಂದು ಹೇಳುತ್ತಿದ್ದಂತೆ ಪ್ರತಿ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಈ ಹಂತದಲ್ಲಿ ಜಯಮಾಲಾ ಮಾಡಬಾರದನ್ನು ಮಾಡಿ ಪಲಾಯನ ವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ವಿರೋಧ ಪಕ್ಷದ ಸದಸ್ಯರು ಹೋದರೆ ಹೋಗಲಿ, ಮೊದಲು ಸಭಾ ನಾಯಕರ ಅಭಿಪ್ರಾಯ ಕೇಳಿ, ಆ ನಂತರ ಎಲ್ಲಾ ಸದಸ್ಯರಿಗೂ ಅವಕಾಶ ಮಾಡಿ ಕೊಡಿ. ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸಿ, ಶಾಸಕರ ಬಗ್ಗೆ ಜನ ಆದಿ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ನಮ್ಮನ್ನು ಬಸ್ ಸ್ಟ್ರಾಂಡ್ ಬಸವಿಯರ ತರ ನೋಡುತ್ತಿದ್ದಾರೆ ಎಂದರು.

ಆದಿ ಬೀದಿಯಲ್ಲಿ ಹೋಗುವವರು 25ಕ್ಕೆ ಖರೀದಿ ಯಾಗಿದ್ದೀರಾ 10ಕ್ಕೆ ಖರೀದಿಯಾಗಿದ್ದೀರಾ ಎಂದು ಮಾತನಾಡಿಕೊಳ್ಳುವಂತಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನೇ ಅಸ್ಥಿರ ಮಾಡುವ ಇಂತಹ ಪ್ರಯತ್ನಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಜೆಡಿಎಸ್ ಕಾಂಗ್ರೆಸ್ ನ ಹಲವು ಸದಸ್ಯರು ಧ್ವನಿ ಗೂಡಿಸಿ ಈಗಲೇ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಆಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಚರ್ಚೆ ನಡೆಸಲು ನೋಟೀಸ್ ನೀಡಿದ್ದಿರಿಯೇ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ್ದ ಜೆಡಿಎಸ್ ನ ಭೋಜೇ ಗೌಡ ಕಾಂಗ್ರೆಸ್ ನ ಐವಾನ್ ಡಿಸೋಜ ಸೇರಿದಂತೆ ಹಲವು ಸದಸ್ಯರು ಪೀಠದ ಬಗ್ಗೆಯೇ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಸ್ವಯಂ ಪ್ರೇರಿತವಾಗಿ ನೀವೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಮತ್ತೆ ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.

ಬಸವರಾಜ ಹೊರಟ್ಟಿ, ಸೇರಿದಂತೆ ಹಲವು ಸದಸ್ಯರ ಆಗ್ರಹದ ಹಿನ್ನಲೆಯಲ್ಲಿ ನೋಡೋಣ ಎಂದು ಹೇಳಿ ಸಭಾಪತಿಗಳು ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Leave a Comment