ಪರಿಷತ್ ಚುನಾವಣೆ ಬಿಜೆಪಿಗೆ ಮುಖಭಂಗ

ವಿಜಯಪುರ: ಗೌಡ್ರು ವರ್ಸಸ್ ಗೌಡ್ರು ಎಂಬಂತೆ ತೀವ್ರ ಪೈಪೋಟಿ ಏರ್ಪಟ್ಟಿದೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೆದ್ದು ಬೀಗಿದ್ದು, ಚುಣಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಬಸನಗೌಡಾ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲರು. ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಗಳ ವಿಧಾನಪರಿಷತ್ ಚುನಾವಣೆ ತಮ್ಮ ಸಹೋದರನನ್ನು ಗೆಲ್ಲಿಸೋ ಮೂಲಕ ನಾನೇ ಕಿಂಗ್ ಮೇಕರ್ ಎಂದು ಬೀಗಿದ್ದಾರೆ.ವಿಜಯಪುರ- ಬಾಗಲಕೋಟ ಅವಳಿ  ಜಿಲ್ಲೆಗಳ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತೀವ್ರ ಪ್ರತಿಷ್ಠೆಯಾಗಿ ಪರಿಗಣಿಸಿದ್ದವು. ಮಾಜಿ ಸಚಿವ ಎಂ.ಬಿ.ಪಾಟೀಲ ತಮ್ಮ ಸಹೋದರ ಸುನೀಲಗೌಡರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸೋವಲ್ಲಿ ಯಶಸ್ವಿಯಾಗದ್ರು, ಇನ್ನೂ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ತಮ್ಮ ಬೆಂಬಲಿಗ ಗೂಳಪ್ಪ ಶೆಟಗಾರ ಗೆ ಬಿಜೆಪಿ ಟಿಕೆಟ್ ಕೊಡಿಸೋ ಮೂಲಕ ರಣಕಹಳೆ ಮೊಳಗಿಸಿದ್ದರು.ತೀವ್ರ ‘ಹಣಾ’ ಹಣಿ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸುನೀಲಗೌಡ ಪಾಟೀಲ ೨೦೪೦ ಮತಗಳ ಅಂತರದಿಂದ ಬಿಜೆಪಿಯ

ಶೆಟಗಾರರನ್ನು ಸೋಲಿಸುವ ಮೂಲಕ ಗೂಳಿ ಸವಾರಿ ಮಾಡಿದ್ದಾರೆ. ಸುನೀಲಗೌಡಾ ಪಾಟೀಲ ೪,೮೧೯ ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ ೨, ೭೭೯ ಮತಗಳನ್ನು ಪಡೆದರೆ, ಇನ್ನೂ ಐದು ಜನ ಪಕ್ಷೇತರ ಅಭ್ಯರ್ಥಿ ಗಳು ಕೇವಲ ೫೯ ಮತಗಳನ್ನು ಪಡೆಯುವದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಒಟ್ಟು ೮.೧೧೧ ಮತಗಳು ಚಲಾವಣೆಯಾಗಿದ್ದು ಅದ್ರಲ್ಕಿ ೪೫೪ ಮತಗಳು ತಿರಸ್ಕೃತವಾಗಿವೆ. ಫಲಿತಾಂಶ ಹೊರ ಬಿಳುತ್ತಲೇ ಎಂ.ಬಿ‌.ಪಾಟೀಲ ಸಹೋದರರ ಬೆಂಬಲಿಗ್ರು ಹಾಗೂ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿ ಗುಲಾಲ್ ಎರಚಾಟದಲ್ಲಿ ತೊಡಗಿದರು. ತಮ್ಮ ಜಯದ ಸುದ್ದಿ ತಿಳಿಯುತ್ತಲೇ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸುನೀಲಗೌಡ ಪಾಟೀಲ ಮಾತನಾಡಿ, ಇದು ಮೈತ್ರಿಕೂಟ ಸರಕಾರದ ಜಯ, ಜನ ಬಿಜೆಪಿ ಯನ್ನು ತಿರಸ್ಕರಿಸಿದ್ದಾರೆ, ಕನಿಷ್ಠ ಎರಡು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದೇವೆ, ಇದು ಕಾಂಗ್ರೆಸ್ ಪಕ್ಷದ ಜಯ, ಮುಂಬರುವ ಲೋಕಸಭಾ ಚುನಾವಣೆ ದಿಕ್ಸೂಚಿ ಈ ಫಲಿತಾಂಶ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ ಇದು ಲೋಕಸಭಾ ಚುನಾವಣಾ ದಿಕ್ಸೂಚಿ, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ, ಶಾಸಕ ಯತ್ನಾಳ ರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲಾ, ಅವರು ಕರೆದರು ಬಿಜೆಪಿಗೆ ಹೋಗುವುದಲ್ಲಾ ಎಂದರು.

ಇನ್ನೂ ಬೆಳಿಗ್ಗೆಯಿಂದಲೆ ಮತ ಎಣಿಕೆ ಕೇಂದ್ರದಲ್ಲಿ ಠಿಕಾಣಿ ಹೂಡಿದ್ದ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಲೀಡ್ ಇರುವದರಿಂದ ಅಲ್ಲಿಂದ ಹೊರನಡೆದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ಬಿಜೆಪಿಯಿಂದ ಸ್ಪರ್ದೆ ಮಾಡಿದ್ದೆ, ಪಕ್ಷದ ಎಲ್ಲಾ ಶಾಸಕರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ, ಮತದಾರರ ತೀರ್ಪನ್ನು ಸ್ವಾಗತಿಸುತ್ತೇನೆ, ಬಿಜೆಪಿಯ ಸೋಲಿಗೆ ಜಿಲ್ಲೆಯಲ್ಲಿ ನ ಬಿಜೆಪಿ ಭಿನ್ನಾಭಿಪ್ರಾಯ ಕಾರಣವಲ್ಲಾ  ಎಂದರು.

ಒಟ್ಟಿನಲ್ಲಿ ಅಧಿಕಾರವಿರಲಿ ಬಿಡ್ಲಿ ನಾನು ಪವರ್ ಪುಲ್ ಎಂದು ಹೇಳ್ತಾ ಇದ್ದ ಎಂ.ಬಿ.ಪಾಟೀಲ ಮತ್ತೆ ತಮ್ಮ ಸಹೋದರ ನನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡೋ ಮೂಲಕ ನಾನೇ ಕಿಂಗ್ ಮೇಕರ್ ಎಂದು ಬೀಗ್ತಾ ಇರೋದು ಮಾತ್ರ ಸತ್ಯ.

Leave a Comment