ಪರಂಪರೆಯ ಪ್ರಜ್ಞೆಯ ಕೊರತೆಯೇ ವರದಿಗಳಲ್ಲಿನ ನೈಜತೆ ಕುಸಿಯಲು ಕಾರಣ: ಸಮೀಉಲ್ಲಾ

ಬಳ್ಳಾರಿ, ಜು.1: ಸೂತ್ರ ಬದ್ದ ಕಮರ್ಷಿಯಲ್ ಸಿನಿಮಾದಂತೆ ಇಂದು ಮಾಧ್ಯಮ ಕ್ಷೇತ್ರ ಸಾಗುತ್ತಿದೆ. ದೃಶ್ಯಮಾಧ್ಯಮ ಅನೇಕ ಅವಾಂತರಗಳಿಂದ ಸಾಗಿದೆ. ಟಿಆರ್ ಪಿ ಮತ್ತು ಪತ್ರಿಕೆಗಳ ಪ್ರಸಾರದ ಹಿಂದೆ ಬಿದ್ದು ಸಾಮಾಜಿಕ ಹೊಣೆಗಾರಿಕೆ ಮರೆಯಗತೊಡಗಿದೆ. ಹೊಸ ತಲೆಮಾರಿನ ಮಾಧ್ಯಮ ಪ್ರತಿನಿಧಿಗಳಲ್ಲಿನ ಪರಂಪರೆಯ ಪ್ರಜ್ಞೆಯ ಕೊರತೆ ವರದಿಯ ನೈಜತೆ ಕುಸಿಯುವಂತೆ ಮಾಡಿದೆಂದು ಹಿರಿಯ ಪತ್ರಕರ್ತ ಬಿ.ಸಮೀಉಲ್ಲಾ ಅವರು ಅಭಿಪ್ರಾಯಪಟ್ಟರು.
ಅವರು ಇಂದು‌ ನಗರದ ಪತ್ರಿಕಾ ಭವನದಲ್ಲಿ ಬಳ್ಳಾರಿ ಪತ್ರಕರ್ತರ ಬಳಗದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾಧ್ಯಮದ ಇಂದಿನ ಸ್ಥಿತಿಗತಿಗಳ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಬಿಸಿಲು, ಗಣಿಧೂಳು ಹೆಚ್ಚು ಹಾಗೆ ಮಾಧ್ಯಮದ ಕಾವು ಸಹ ಬಳ್ಳಾರಿಯಲ್ಲಿ ಹೆಚ್ಚು. ಸೋನಿಯಾ ಅವರ ಸ್ಪರ್ಧೆಯ ದಿನಗಳಿಂದ ಹೈ ಹೋಲ್ಟೇಜ್ ಜಿಲ್ಲೆಯಾಗಿ,
ರಾಜಧಾನಿಗಿಂತಲೂ ಹೆಚ್ಚು ಇಲ್ಲಿನ ವರದಿಗಳಿಗೆ ಮಾನ್ಯತೆ ಬಂದಿತ್ತು. ಅದಕ್ಕೆ ಕಾರಣ ಇಲ್ಲಿನ ರಾಜಕೀಯ ಸ್ಥಿತ್ಯಂತರ ಜೊತೆಗೆ ಅಕ್ರಮ ಗಣಿಗಾರಿಕೆ ಆಗಿರಬಹುದೆಂದರು.
ಡಿಜಿಟಲ್ ಮಾದರಿಯ ಹೊಸ ಮಾಧ್ಯಮದವರಿಗೆ ಚಳುವಳಿಯ, ಪರಂಪರೆಯ ಪ್ರಜ್ಞೆ ಇಲ್ಲದಾಗಿದೆ. ಅದರಿಂದಾಗಿ ವ್ಯಕ್ತಿಯ ಆಲೋಚನೆಯೇ ಪ್ರಾಮುಖ್ಯತೆ ಅಗುತ್ತಿರುವುದರಿಂದ ಸಾಮಾಜಿಕ ಜವಾಬ್ದಾರಿಯಿಂದ ದೂರ ಹೋದಂತೆ ಕಾಣುತ್ತಿದೆ‌. ಅದಕ್ಕಾಗಿ ಹೊಸ ತಲೆಮಾರು ಇದರ ಬಗ್ಗೆ ಯೋಚಿಸಬೇಕಿದೆ.
ಗಾಂಧೀಜಿ ಚಿತ್ರಕ್ಕೆ ಅವಮಾನ ಮಾಡಿದ ಘಟನೆ ಮತ್ತು ಗೋಡ್ಸೆ ಸಿದ್ದಾಂತವನ್ನು ಒಪ್ಪಿದ ಘಟನೆಗಳ ಬಗ್ಗೆ ಖಂಡಿಸಿದ ಧ್ವನಿ ಹೆಚ್ಚಾಗಿ ಮಾಧ್ಯಮಗಳಲ್ಲಿ ಬರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಮಾಧ್ಯಮಗಳು ಹೆಚ್ವು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ಎಂದರು.
ಮಾಧ್ಯಮಗಳು ಆಯ್ದ ಸಿದ್ದಾಂತದ ಪ್ರಚಾರಕರಾದಂತಿರುವುದು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ.
ಪತ್ರಿಕಾ ದಿನಾಚರಣೆ ಆತ್ಮಾವಲೋಕನ ಮಾಡಿಕೊಳ್ಳುವ ಪರಿಸ್ಥಿತಿಯನ್ನು ತಂದಿದೆ. ಇದಕ್ಕೆ ಮಾಧ್ಯಮ ವ್ಯಾಪಾರೀಕರಣ ಆಗಿರುವುದಾಗಿದೆ .
ಮಾನವೀಯತೆ ಮಾಯವಾಗಿದೆ. ಸುದ್ದಿ ಸರಕಾಗಿದೆಯೇ ಹೊರತು ಸಾಮಾಜಿಕ ಕಳಕಳಿಯನ್ನು ಕಳೆದುಕೊಂಡಿದೆ. ಇದು ಸುಧಾರಣೆ ಆಗಬೇಕಿದೆಂದರು.
ವಿಶ್ವದ ಅತಿ ದೊಡ್ಡ ಪ್ರಜಾಸತ್ತತೆಯ ದೇಶ ಭಾರತದಲ್ಲಿ 2019 ರಲ್ಲಿ ಮಾಧ್ಯಮದವರ ಸ್ಥಿತಿ 140 ನೇ ಸ್ಥಾನದಲ್ಲಿದೆ. ಅಂದರೆ ಮಾಧ್ಯಮದವರ ಬದುಕು ಹೇಗಿರಬಹುದು ಎಂದು ಊಹಿಸಿ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಕಣ್ಣು ಕಿವಿಯಾಗಿರಬೇಕಾದ ಮಾಧ್ಯಮ. ಮಧ್ಯಮಗಳ ‌ಮಾಲಿಕತ್ವದ ಕಂಪನಿಯ ನಿಯಮಗಳಿಂದ, ರಾಷ್ಟ್ರೀಯವಾದ, ಪತ್ರಿಕಾ ಸ್ವಾತಂತ್ರ್ಯ ಕುಸಿಯುತ್ತಿರುವುದಕ್ಕೆ ಕಾರಣ ಎನ್ನಬಹುದು.
ಭವಿಷ್ಯತ್ತಿನಲ್ಲಿ ಪತ್ರಕರ್ತರು ಒಂದು ಸಿದ್ದಾಂತದ ಪ್ರಚಾರಕಾರಾಗುವಂತೆ ಪರಿಸ್ಥಿತಿ ಬರಬಹುದೆಂದು ಅಭಿಪ್ರಾಯಪಟ್ಟರು.
ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

Leave a Comment