ಪನಾಮ ಫುಟ್ಬಾಲ್‌ ತಂಡದ ಮಧ್ಯಂತರ ಕೋಚ್‌ ಆಗಿ ಡೆಲಿ ವಾಲ್ಡೆಸ್‌ ನೇಮಕ

ಪನಾಮ, ಫೆ 12 – ಮಾಜಿ ಪ್ಯಾರಿಸ್‌ ಸೈಂಟ್‌ ಜರ್ಮನ್‌ ಸ್ಟೈಕರ್‌ ಡೆಲಿ ವಾಲ್ಡೆಸ್‌ ಅವರು ಪನಾಮ ಫುಟ್ಬಾಲ್‌ ರಾಷ್ಟ್ರೀಯ ತಂಡದ ಮಧ್ಯಂತರ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.

 

ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ ಬಳಿಕ ಪನಾಮ ತಂಡದ ಕೋಚ್‌ ಸ್ಥಾನದಿಂದ ಕೊಲಂಬಿಯಾದ ಹೆರ್ನನ್‌ ಡ್ಯಾರಿಯೊ ಗೊಮೆಜ್‌ ನಿರ್ಗಮಿಸಿದ್ದರು. ಅವರ ಸ್ಥಾನಕ್ಕೆ ಹಂಗಾಮಿ ತರಬೇತುದಾರರಾಗಿ ಗ್ಯಾರಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಅವರ ಸ್ಥಾನಕ್ಕೆ 51 ವರ್ಷದ ವಾಲ್ಡೆಸ್‌ ಆಗಮಿಸಿದ್ದಾರೆ ಎಂದು ಪನಾಮ ಫುಟ್ಬಾಲ್‌ ಒಕ್ಕೂಟ ಮಾಹಿತಿ ನೀಡಿದೆ.

 

“ಮುಂದಿನ ಮಾರ್ಚ್‌ ಅಂತ್ಯದಲ್ಲಿ ನಡೆಯುವ ಫಿಫಾ ಸ್ನೇಹಯುತ ಪಂದ್ಯಗಳಿಗಾಗಿ ಪನಾಮ ತಂಡದ ಮಧ್ಯಂತರ ತಾಂತ್ರಿಕ ನಿರ್ದೇಶಕರಾಗಿ ಡೆಲಿ ವಾಲ್ಡೆಸ್‌ ಅವರು ನೇಮಕಗೊಂಡಿದ್ದಾರೆ” ಎಂದು ಎಫ್‌ಎಫ್‌ಪಿ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

 

ಡೆಲಿ ವಾಲ್ಡೆಸ್‌ ಅವರು 44 ಬಾರಿ ಪನಾಮ ರಾಷ್ಟ್ರೀಯ ತಂಡವನ್ನು 1991 ರಿಂದ 2005ರ ಅವಧಿಯಲ್ಲಿ ಪ್ರತಿನಿಧಿಸಿದ್ದು, 2010 ರಿಂದ 2013 ರ ಅವಧಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

Leave a Comment