ಪದ್ಮಾವತಿಗೆ ಗಂಗಮ್ಮನ ಗಾನ

’ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ’ ಎಂದು ಹೇಳುತ್ತ ಸಿನಿ ರಸಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವಿಕ್ರಂ ಆರ್ಯ ಈಗ ಮತ್ತೆ ಪದ್ಮಾವತ್ ಮೂಲಕ ಮತ್ತೊಮ್ಮೆ ತೆರೆಮೇಲೆ ಬರುತ್ತಿದ್ದಾರೆ.

ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಹೇಳುವಂತ ಕಥಾ ಹಂದರವನ್ನು ಹೊಂದಿರುವ ಚಿತ್ರದಲ್ಲಿ ಹಳ್ಳಿಗಾಡಿನ ಗಾನ ಕೋಗಿಲೆ ಕೊಪ್ಪಳದ ಗಂಗಮ್ಮ ೩ ಹಾಡುಗಳಿಗೆ ದನಿಯಾಗಿದ್ದಾರೆ.

ಒಂದು ಹೆಣ್ಣು ಗರ್ಭವತಿಯಾದ ಸಂಧರ್ಭದಲ್ಲಿ ಆಕೆಗೆ ಸೀಮಂತ ಮಾಡುವ ಸನ್ನಿವೇಶದಲ್ಲಿ ಬರುವ  ’ಹಚ್ಚಿರೆ ಹರಿಶಿನವ…. ಪೂಸೀರೇ ಗಂಧಾವಾ…..” ಹಾಗೂ “ಕುಹೂ ಕುಹೂ ಕೋಗಿಲೆ ಒಮ್ಮೆ ಕೂಗಬಾರದೆ” ಎಂಬ ಎರಡು ಹಾಡುಗಳಿಗೆ ಗಂಗಮ್ಮ  ಧ್ವನಿಯಾದರು.

ಮೊದಲ ಚಿತ್ರಕ್ಕೆ ಉಪೇಂದ್ರ ಪುನೀತ ಅವರಿಂದ ಹಾಡು ಆಡಿಸಿದ್ದರು.  ಅಪ್ಪಟ ಗ್ರಾಮೀಣ ಕಂಠದ ಅವಶ್ಯಕತೆ ಇದ್ದುದ್ದರಿಂದ ಗಂಗಮ್ಮ ಅವರಾದ ಚಿತ್ರದಲ್ಲಿ ಒಟ್ಟು ೩ ಹಾಡುಗಳನ್ನು ಹಾಡಿಸಿದ್ದಾರೆ. ದಿನೇಶ್ ಕುಮಾರ್  ಸಂಗೀತ ಸಂಯೋಜನೆಯಲ್ಲಿ ಒಟ್ಟು ೮ ಹಾಡುಗಳು ಚಿತ್ರದಲ್ಲಿದ್ದು ಪ್ರೇಮ್ ಸಾಯಿ, ಹರೀಶ್ ಜಿ ರಾವ್ ಸಾಹಿತ್ಯ ಬಸಿದಿದ್ದಾರೆ.

ಮಿಥುನ್ ಚಂದ್ರಶೇಖರ್  ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.   ದಾಮೋದರ್ ರಾವ್ ಹಾಗೂ ನಾಮದೇವ ಭಟ್ಟರು  ಚಿತ್ರವನ್ನು ನಿರ್ಮಿಸಿದ್ದಾರೆ. ಶೋಹೆಬ್ ಅಹಮದ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.ಶಿವಮೊಗ್ಗ ಹೊಸನಗರ ಹಾಗೂ ಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರಿಕರಣ ನಡೆಸಲಾಗಿದೆ.  ಸದ್ಯ ರೀರೆಕಾರ್ಡಿಂಗ್ ಹಂತದಲ್ಲಿರುವ ಪದ್ಮಾವತಿ ಚಿತ್ರದ ಆಡಿಯೋ ಅನಾವರಣ ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿದೆ.  ವಿಕ್ರಂ ಆರ್ಯಾ, ಸಾಕ್ಷಿ ಮೇಘನ, ದಾಮೋದರ್ ರಾವ್, ರಾಘವ ಕಲಾಲ್, ಕೀರ್ತಿ ಎನ್ ಮುಂತಾದವರು  ಚಿತ್ರದಲ್ಲಿ ನಟಿಸಿದ್ದಾರೆ.

Leave a Comment