ಪದ್ಮಾವತಿಗೆ ಕೊಂಚ ರಿಲೀಪ್

ನವದೆಹಲಿ,ನ ೯- ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿಗೆ ಕೊಂಚ ರಿಲೀಪ್ ದೊರೆದಂತಾಗಿದೆ.

ಒಂದಲ್ಲ ಒಂದು ಸಂಕಷ್ಟದಲ್ಲಿದ್ದ ಪದ್ಮಾವತಿ ಚಿತ್ರದ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿ, ಪಿಐಎಲ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇನ್ನೂ ಪ್ರಮಾಣ ಪತ್ರ ನೀಡಲ್ಲ, ಸೆನ್ಸಾರ್ ಮಂಡಳಿ ಸ್ವಾಯತ್ತ ಮಂಡಳಿಯಾಗಿದೆ. ಅದರ ಕೆಲಸದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಚಿತ್ರದಲ್ಲಿ ಪದ್ಮಾವತಿಯನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ. ಇದು ರಜಪೂತ ಹಾಗೂ ಕರನಿ ಸೇನೆ ವಿರೋಧಕ್ಕೆ ಕಾರಣವಾಗಿದೆ. ಚಿತ್ರ ತೆರೆಗೆ ಬಂದರೆಎ ವಿವಾದ ದೊಡ್ಡದಾಗುವ ಸಾಧ್ಯತೆಯಿದೆ. ಹಾಗಾಗಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂದು ರಾಜಸ್ತಾನ ಮೂಲದ ವ್ಯಕ್ತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪದ್ಮಾವತಿ ಟ್ರೈಲರ್‌ನಲ್ಲಿ ಪದ್ಮಾವತಿ ಪಾತ್ರಧಾರಿ ದೀಪಿಕಾ ಘೋಮರ್ ನೃತ್ಯ ಮಾಡಿದ್ದಾಳೆ. ಆದರೆ ರಾಜಸ್ತಾನದ ರಾಣಿಯರು ಘೋಮರ್ ನೃತ್ಯ ಮಾಡುತ್ತಿರಲಿಲ್ಲ. ಹಾಗೆ ಮುಖವನ್ನು ತೋರಿಸುತ್ತಿರಲಿಲ್ಲ. ಚಿತ್ರದಲ್ಲಿ ರಜಪೂತ ಸಮುದಾಯದ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

Leave a Comment