ಪದೇ ಪದೇ ಶೀತ ಅನಾರೋಗ್ಯದ ಲಕ್ಷಣ

ಶೀತ, ಜ್ವರ, ಕೆಮ್ಮು, ಕಫ ಮೊದಲಾದವು ವಾಸ್ತವವಾಗಿ ರೋಗಗಳೇ ಅಲ್ಲ, ಬದಲಿಗೆ ನಮ್ಮ ದೇಹವನ್ನು ಸತತವಾಗಿ ಪ್ರವೇಶಿಸಿ ಧಾಳಿಯಿಡುವ ವೈರಸ್ಸು, ಬ್ಯಾಕ್ಟೀರಿಯಾಗಳ ವಿರುದ್ಧ ನಮ್ಮ ರೋಗ ನಿರೋಧಕ ವ್ಯವಸ್ಥೆ ಆಗಿದೆ.

ಸಾಮಾನ್ಯವಾಗಿ ಕಾಡುವ ಶೀತ ಎಂದರೆ ನಮ್ಮ ಮೂಗು, ಬಾಯಿಯ ಮೂಲಕ ಗಾಳಿಯಲ್ಲಿ ಹಾರಾಡುವ ವೈರಸ್ಸುಗಳು ಒಳಗಿನ ತೇವ ಪ್ರದೇಶಗಳಿಗೆ ಆವರಿಸಿ ಇಲ್ಲಿಂದ ಒಳನುಸುಳಲು ಯತ್ನಿಸಿದರೆ ಈಗ ಒಳಗಿನ ತೇವವನ್ನು ಹೆಚ್ಚಿಸಿ ಆ ದ್ರವದ ಮೂಲಕ ವೈರಸ್ಸುಗಳನ್ನು ಹೊರಹಾಕುವುದು ನಮ್ಮ ರಕ್ಷಣಾ ವ್ಯವಸ್ಥೆ ಅನುಸರಿಸುವ ಕ್ರಮವಾಗಿದೆ.

ಪ್ರತಿಬಾರಿ ವೈರಸ್ಸು ಎದುರಾದಾಗ ಈ ಕ್ರಮವನ್ನು ಅನುಸರಿಸಿ ರೋಗ ನಿರೋಧಕ ವ್ಯವಸ್ಥೆ ಇದಕ್ಕೆ ಪ್ರತಿಭಂಧಕ ಲಸಿಕೆಯನ್ನು ದೇಹದಲ್ಲಿಯೇ ಉತ್ಪದಿಸಿ ಬಿಡುತ್ತದೆ. ಹಾಗಾಗಿ ಇದೇ ವೈರಸ್ಸು ಮುಂದಿನ ಬಾರಿ ಆವರಿಸಿದರೆ ನಮಗೆ ಶೀತವಾಗುವುದಿಲ್ಲ. ಸತತವಾಗಿ ಭಿನ್ನವಾದ ವೈರಸ್ಸುಗಳಿಂದ ಶೀತ ಎದುರಾದ ಬಳಿಕ ದೇಹ ಹೆಚ್ಚು ಹೆಚ್ಚು ಸಬಲತೆ ಪಡೆಯುತ್ತಾ ಹೋಗುವ ಕಾರಣ ವೃದ್ದರಿಗೆ ಶೀತವಾಗುವುದು ಕಡಿಮೆ. ಆದರೆ ಇವರು ಬೇರೆ ಸ್ಥಳಕ್ಕೆ ಹೋದಾಗ ಅಥವಾ ಬೇರೆ ಸ್ಥಳದಿಂದ ಹೊಸ ವೈರಸ್ಸನ್ನು ಹೊತ್ತು ತಂದ ವ್ಯಕ್ತಿಯ ಸೀನಿನಿಂದ ಇವರಿಗೂ ಶೀತವಾಗಬಹುದು.

ಆದರೆ ಶೀತ ಯಾವುದೇ ಇರಲಿ, ಇದಕ್ಕೆ ಮದ್ದು ತೆಗೆದುಕೊಂಡರೂ ಇಲ್ಲದಿದ್ದರೂ ಸುಮಾರು ಒಂದು ವಾರ ಆವರಿಸಿ ಬಳಿಕ ತಾನಾಗಿಯೇ ಕಡಿಮೆಯಾಗುತ್ತದೆ. ಆದರೆ ಒಂದು ವೇಳೆ ಒಂದು ವಾರಕ್ಕೂ ಹೆಚ್ಚು ಕಾಲ ಶೀತ ಮುಂದುವರೆಯುತ್ತಾ, ಕಡಿಮೆಯಾಗುವ ಲಕ್ಷಣವನ್ನೇ ತೋರದೇ ಇದ್ದರೆ ಮಾತ್ರ ಇದು ಅನಾರೋಗ್ಯದ ಲಕ್ಷಣ  ವೈರಸ್ಸಿನ ಧಾಳಿಯ ಹೊರತಾಗಿ ಬೇರೆಯೇ ತೊಂದರೆ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಆದಷ್ಟೂ ಬೇಗನೇ ಈ ಕಾರಣವನ್ನು ಅರಿತು ಚಿಕಿತ್ಸೆ ಪ್ರಾರಂಭಿಸಿದರೆ ಬೇಗನೇ ಚೇತರಿಸಿಕೊಳ್ಳಬಹುದು.

ಕುಂಠಿತವಾದ ಕಬ್ಬಿಣದ ಮಟ್ಟ ನಮ್ಮ ದೇಹದ ಕಾರ್ಯನಿರ್ವಹಣೆಗೆ ಹಲವಾರು ಖನಿಜಗಳೂ ಬೇಕಾಗಿದ್ದು ಇದರಲ್ಲಿ ಕಬ್ಬಿಣದ ಅಂಶ ಪ್ರಮುಖವಾಗಿದೆ. ನಮ್ಮ ರಕ್ತ ಆಮ್ಲಜನಕ ಹಾಗೂ ಅಗತ್ಯ ಪೋಷಕಾಂಶಗಳನ್ನು ದೇಹದ ಪ್ರತಿ ಜೀವಕೋಶಕ್ಕೂ ತಲುಪಿಸುವ ಕೆಲಸ ಮಾಡುತ್ತದೆ. ಈ ಕೆಲಸಕ್ಕೆ ಹೀಮೋಗ್ಲೋಬಿನ್ ಅವಶ್ಯವಾಗಿದೆ ಒಂದು ವೇಳೆ ಕಬ್ಬಿಣದ ಕೊರತೆಯಾದರೆ ರಕ್ತ ಆಮ್ಲಜನಕ ಕೊಂಡೊಯ್ಯುವ ಕ್ಷಮತೆಯೂ ಕಡಿಮೆಯಾಗುತ್ತದೆ. ಇದೂ ಸತತ ಶೀತ ಮುಂದುವರೆಯಲು ಕಾರಣವಾಗಿದೆ.

ಒಂದು ವೇಳೆ ದೇಹದ ತುದಿಭಾಗಗಳಾದ ಹಸ್ತ ಅಥವಾ ಪಾದಗಳು ಮಾತ್ರವೇ ತಣ್ಣಗಾಗಿದ್ದು ಇತರ ಭಾಗಗಳು ಬೆಚ್ಚಗಿದ್ದರೆ ಇದು ರಕ್ತಪರಿಚಲನೆ ಕುಂಠಿಗೊಂಡಿರುವ ಸೂಚನೆಯಾಗಿದೆ. ಕೆಲವೊಮ್ಮೆ ಬಲ ಅಥವಾ ಎಡಭಾಗ ಮಾತ್ರವೇ ತಣ್ಣಗಿರುವಂತೆ ಅನ್ನಿಸಿದರೆ ಇದು ಅಥೆರೋಸ್ಕ್ಲೆರೋಸಿಸ್ ಎಂಬ ಹೃದಯಸಂಬಂಧಿ ತೊಂದರೆಯಾಗಿದ್ದು ಇವರಿಗೂ ಸತತ ಶೀತ ಕಾಡುತ್ತಿರುತ್ತದೆ ಆರೋಗ್ಯ ತಜ್ಞರ ಪ್ರಕಾರ ಈ ಅವಧಿಯಲ್ಲಿ ದೇಹದಲ್ಲಿ ಡೋಪಮೈನ್ ಎಂಬ ರಸದೂತ ಕಡಿಮೆಯಾಗುವುದರಿಂದ ತಣ್ಣನೆಯ ಗಾಳಿ ಶೀತವಾಗಲು ಪ್ರಚೋದಿಸುತ್ತದೆ.

ಒಂದು ವೇಳೆ ಸೂಕ್ತ ಸಮಯದಲ್ಲಿ ಸಾಕಷ್ಟು ನಿದ್ದೆ ಪಡೆಯದೇ ಇದ್ದರೆ ಇದು ಸಹಾ ಸತತ ಶೀತಕ್ಕೆ ಕಾರಣವಾಗಬಹುದು. ನಮ್ಮ ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಮೆದುಳಿನ ನಿಯಂತ್ರಣಾ ವ್ಯವಸ್ಥೆ ನಿದ್ರಾರಾಹಿತ್ಯದ ಪರಿಣಾಮದಿಂದ ಶಿಥಿಲಗೊಳ್ಳುತ್ತದೆ ಹಾಗೂ ಅಗತ್ಯವಿದ್ದಷ್ಟು ಶಾಖವನ್ನು ಉತ್ಪಾದಿಸದೇ ಹೋಗುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯೂ ಬಾಧೆಗೊಳಗಾಗಿ ಶೀತದ ಜೊತೆಗೇ ನಿದ್ದೆಮಂಪರು ಸಹಾ ಆವರಿಸುತ್ತದೆ.

ಹಾಗಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಶೀತ ಮುಂದುವರೆಯುತ್ತಾ, ಕಡಿಮೆಯಾಗುವ ಲಕ್ಷಣವನ್ನೇ ತೋರದೇ ಇದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ

Leave a Comment