ಪದೇ ಪದೇ ಆಯಾಸ ಮಧುಮೇಹದ ಲಕ್ಷಣ

ನಾವು ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಆಯಾಸವಾಗದೆ ಇರದು. ಇದಕ್ಕೆ ಕಾರಣಗಳು ಹುಡುಕುತ್ತಾ ಹೋದರೆ ಹಲವು ಅಂಶಗಳು ಕಾಣಸಿಗುತ್ತವೆ.ಆರೋಗ್ಯ ಉತ್ತಮವಾಗಿದ್ದರೂ ವಿಪರೀತ ಕೆಲಸ ಮಾಡಿದಾಗ ಸಹಜವಾಗಿಯೇ ದಣಿವಾಗುತ್ತದೆ. ಮಾನಸಿಕ ಒತ್ತಡವಿದ್ದಾಗಲೂ ಸುಸ್ತಾಗುತ್ತದೆ. ಯಾವುದೇ ಕಾರಣವಿಲ್ಲದೇ ಪದೇ ಪದೇ ಸುಸ್ತಾಗುತ್ತಿದ್ದರೆ ಇಲ್ಲವೆ ಆಯಾಸವಾಗುತ್ತಿದ್ದರೇ ಇದು ಅನಾರೋಗ್ಯದ ಸೂಚನೆಯೂ ಆಗಿರಬಹುದಲ್ಲವೆ ! ಜ್ವರ, ಅಥವಾ ಯಾವುದೇ ಕಾಯಿಲೆಯಿಂದಾಗಿ ಎಲ್ಲರಲ್ಲೂ ಮೊದಲು ಕಂಡು ಬರುವುದು ಸುಸ್ತು.

ಉದಾಹರಣೆಗೆ ತೀವ್ರ ತಲೆ ನೋವಿನಿಂದ ಬಳಲುತ್ತಿದ್ದರೆ ಈ ವೇಳೆ ದಣಿಯುವಂತಹ ಯಾವುದೇ ಕೆಲಸಗಳು ಮಾಡದಿದ್ದರೂ ಸುಸ್ತಾಗುತ್ತದೆ. ಹೃದಯ ಸಂಬಂಧಿ ರೋಗಿಗಳು, ಕ್ಯಾನ್ಸರ್ ಮತ್ತು ಮಧು ಮೇಹ ಇರುವವರಿಗೂ ಸುಸ್ತು ಕಾಣಿಸಿಕೊಳ್ಳುತ್ತದೆ. ಸತತವಾಗಿ ಸುಸ್ತು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ಈ ರೀತಿಯ ಸುಸ್ತು ಹಲವಾರು ಕಾಯಿಲೆಗಳಿಗೆ ಸಮಾನ ಲಕ್ಷಣವಾಗಿದೆ. ಸುಸ್ತು ಆವರಿಸುವ ಕಾಯಿಲೆಗೆ ಕಾರಣ ಕಂಡುಕೊಳ್ಳುವುದು ವೈದ್ಯರಿಗೂ ಸವಾಲೇ ಸರಿ. ಮಧು ಮೇಹ ಎಂದರೆ ಸಾಮಾನ್ಯವಾಗಿ ಜೀವ ರಾಸಾಯನಿಕ ಅಸ್ವಸ್ಥತೆಯಾಗಿದ್ದು,

ಇದು ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕುರಿತು ನಡೆಸಿರುವ ಅಧ್ಯಯನಗಳ ಪ್ರಕಾರ, ಒಂದು ವೇಳೆ ವ್ಯಕ್ತಿಯೊಬ್ಬರಿಗೆ ಮಧುಮೇಹ ಆವರಿಸಿದ್ದರೆ ಇದರಿಂದ ದಿನದ ಒಂದು ನಿರ್ದಿಷ್ಟ ಸಮಯದಲ್ಲಿ ಹೆಚ್ಚಾಗಿ ಸುಸ್ತಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅದರಂತೆ ಬೇರೆ ಯಾವುದೇ ಕಾರಣವಿಲ್ಲದಿದ್ದರೂ ದಿನದ ಒಂದೇ ಸಮಯದಲ್ಲಿ ಸುಸ್ತಾಗುತ್ತಿದ್ದರೆ ಮಧುಮೇಹ ಇರುವುದನ್ನು ಸ್ಪಷ್ಟ ಪಡಿಸುತ್ತದೆ.

holy-basil-tea-tulsi-tea-1

ಪದೇ ಪದೇ ಕಾಡುವ ಮೂತ್ರ ಸಮಸ್ಯೆಗೆ ಟಿಪ್ಸ್

ಕೆಲವರಿಗೆ ಪದೇ ಪದೇ ಮೂತ್ರ ಬಂದಂತಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಈ ತೊಂದರೆ ಸಾರ್ವಜನಿಕ ಪ್ರದೇಶದಲ್ಲಿ ಮುಜುಗರ ತರಿಸುವುದಲ್ಲದೆ ಕಿರಿಕಿರಿಯನ್ನುಂಟು ಮಾಡುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗುವವರು ಚಿಂತೆ ಮಾಡಬೇಕಾಗಿಲ್ಲ. ಮನೆ ಮದ್ದಿನಿಂದ ನಿಮ್ಮ ಈ ಹೇಳಿಕೊಳ್ಳಲಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಂದು ಚಮಚ ತುಳಸಿ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಮೊಸರು ದೇಹಕ್ಕೆ ನ್ಯೂಟ್ರಿಷನ್ ನೀಡುತ್ತದೆ.

ಅಲ್ಲದೆ ಮೂತ್ರಪಿಂಡಕ್ಕೆ ಸಂಬಂಧಪಟ್ಟ ಸೋಂಕನ್ನು ನಿವಾರಣೆ ಮಾಡುತ್ತದೆ. ಆಹಾರದಲ್ಲಿ ಮೊಸರನ್ನು ಬಳಸಿದರೆ ಉಪಯುಕ್ತ. ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ತೆಯ್ದು, ಪ್ರತಿದಿನ ನೀರಿನ ಜೊತೆ ಎರಡು ಬಾರಿ ಸೇವನೆ ಮಾಡುವುದರಿಂದ ಮೂತ್ರ ಸಮಸ್ಯೆ ಕಡಿಮೆಯಾಗುತ್ತದೆ.

ಸಿಹಿಗುಂಬಳಕಾಯಿಯ ಬೀಜವನ್ನು ಬೆಳಿಗ್ಗೆ ಮತ್ತು ರಾತ್ರಿ ತಿನ್ನುವುದರಿಂದ ಪದೇ ಪದೇ ಮೂತ್ರಕ್ಕೆ ಹೋಗುವುದು ನಿಲ್ಲುತ್ತದೆ. ನೇರಳೆ ಹಣ್ಣಿನ ರಸವನ್ನು ನೀರಿನ ಜೊತೆ ಪ್ರತಿದಿನ ಸೇವನೆ ಮಾಡುವುದು ಒಳ್ಳೆಯದು. ಮೆಂತ್ಯೆಯಲ್ಲಿರುವ ನ್ಯೂಟ್ರಿಷನ್, ಫೈಬರ್ ಹಾಗೂ ಮಿನರಲ್ ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ.  ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣದ ಅಂಶ ಹಾಗೂ ನ್ಯೂಟ್ರಿಷಿಯನ್ ಮೂತ್ರಪಿಂಡವನ್ನು ಆರೋಗ್ಯ ವಾಗಿರಿಸುತ್ತದೆ.

ಊಟದಲ್ಲಿ ಇದನ್ನು ಬಳಸಿದರೆ ರಾತ್ರಿ ಪದೇ ಪದೇ ಹೊರಗೆ ಹೋಗುವುದು ತಪ್ಪುತ್ತದೆ.

Leave a Comment