ಪದವೀಧರ ಕ್ಷೇತ್ರಕ್ಕೆ ಚುನಾವಣೆ ಹಿನ್ನೆಲೆ; ಜೆಡಿಎಸ್ ಸಭೆ

ಬೆಂಗಳೂರು, ಅ 18- ಪದವೀಧರ ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪಕ್ಷದ ಮುಖಂಡರ ಜೊತೆ ಸಭೆ ನಡೆ ಆರಂಭಿಸಿದ್ದಾರೆ.

ಜೆ.ಪಿ ಭವನದಲ್ಲಿ ಸಭೆಯಲ್ಲಿ ಶಾಸಸಕರಾದ ಗುಬ್ಬಿ ಶ್ರೀನಿವಾಸ್, ಸತ್ಯನಾರಾಯಣ, ಪರಿಷತ್ ಸದಸ್ಯರಾದ ಶರವಣ, ಬಿ. ಎಂ ಫಾರೂಕ್, ಮರಿತಿಬ್ಬೇಗೌಡ, ಚೌಡರೆಡ್ಡಿ ತೂಪಲ್ಲಿ, ರಮೇಶ್ ಗೌಡ, ಅಪ್ಪಾಜಿಗೌಡ, ಕೆ.ಟಿ ಶ್ರೀಕಂಠೇಗೌಡ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸೇರಿದಂತೆ ಮಾಜಿ ಶಾಸಕರು ಭಾಗಿ‌ಯಾಗಿದ್ದು, ಮೇಲ್ಮನೆ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ, ಭೋಜೇಗೌಡ, ಸೇರಿದಂತೆ ಹಲವರು ಸದಸ್ಯರು ಗೈರಾಗಿದ್ದಾರೆ.

ಶಾಸಕಾಂಗ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಮೇಲಿನ ಸಿಟ್ಟಿನಿಂದ ಸಭೆಗೆ‌ ವಿಧಾನ ಪರಿಷತ್ ನ ಕೆಲ ಸದಸ್ಯರು‌ ಗೈರಾಗಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಪರಿಷತ್ ಸದಸ್ಯರ ಅಸಮಾಧಾನ ಶಮನ ಮಾಡುವ ಬಗ್ಗೆ ಹಾಗೂ ಪದವೀಧರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಮಹತ್ವದ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

 

Leave a Comment