ಪದಕಪಟ್ಟಿ ಭಾರತಕ್ಕೆ 3ನೇ ಸ್ಥಾನ

ಗೋಲ್ಡ್‌ಕೋಸ್ಟ್, ಏ. ೧೫- ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 26 ಚಿನ್ನ, 20 ಬೆಳ್ಳಿ, ಹಾಗೂ 20 ಕಂಚಿನ ಪದಕಗಳೊಂದಿಗೆ ಒಟ್ಟು 69 ಪದಕಗಳನ್ನು ಭಾರತ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕ್ರೀಡಾಕೂಟಕ್ಕಿಂತ ಗೋಲ್ಡ್‌ಕೋಸ್ಟ್‌ನಲ್ಲಿ ಭಾರತ ಹೆಚ್ಚಿನ ಪದಕಗಳಿಸಲು ಸಫಲವಾಗಿದೆ. ಆದರೆ 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಒಟ್ಟು 69 ಪದಗಳನ್ನು ಗಳಿಸಿತ್ತು. ಇಂದು ಅಂತ್ಯಗೊಂಡ‌ ಕ್ರೀಡಾಕೂಟದಲ್ಲಿ ಭಾರತ ನೀಡಿರುವ ಎರ‌ಡನೇ ಉತ್ತಮ ಪ್ರದರ್ಶನವಾಗಿದೆ.

ಗ್ಲಾಸ್ಗೋದಲ್ಲಿ ನಡೆದ ಕ್ರೀಡಾಕೂಟದಲ್ಲಿ 15 ಚಿನ್ನ, 30 ಬೆಳ್ಳಿ, ಹಾಗೂ 19 ಕಂಚಿನ ಪದಕಗಳೊಂದಿಗೆ ಒಟ್ಟು 64 ಪದಕಗಳನ್ನು ಗಳಿಸಿತ್ತು.

ಅದೇ ರೀತಿ ದೆಹಲಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ 600 ಮಂದಿ ಅತ್ಯಂತ ಬಲಿಷ್ಠ 600 ಅಧ್ಲೀಟ್‌ಗಳು ಪಾಲ್ಗೊಂಡಿದ್ದ ತಂಡದಲ್ಲಿ ಕನಿಷ್ಠ ಪದಕಗಳನ್ನು ಭಾರತ ಗಳಿಸಿತ್ತು.

ಈ ಬಾರಿಯ ಕ್ರೀಡಾಕೂಟದಲ್ಲಿ ಶೂಟಿಂಗ್‌ನಲ್ಲಿ 16 ಪದಕಗಳನ್ನು ಗಳಿಸಿ ಭಾರತದ ಶೂಟರ್‌ಗಳು ಅದ್ವಿತೀಯ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಜಿತು, ರಾಯ್, ಅನಿಶ್ ಭನ್ವಾಲ್, ಸಂಜೀವ್ ರಾಜ್‌ಪುತ್, ಮನುಭಕರ್, ಹೀನಾ ಸಿಂಧು, ತೇಜಸ್ವಿನಿ ಸಾವಂತ್, ಶ್ರೇಯಸಿಸಿಂಗ್ ಚಿನ್ನಗೆದ್ದರೆ, ಸಿಧು, ಮೆಹೂಲಿ ಘೋಷ್, ಅಂಜುಮ್ ಮೌದ್ಗಿಲ್ ಬೆಳ್ಳಿ ಹಾಗೂ ಓಂ. ಮಿಥಾರಾವಾಲ್, ರವಿಕುಮಾರ್, ಅಂಕುರ್ ಮಿತ್ತಲ್ ಅಪೂರ್ವ ಚಾಂಡೆಲಾ ಕಂಚಿನ ಪದಕ ಗೆದ್ದಿದ್ದಾರೆ.

 ಶೂಟಿಂಗ್ ನಂತರ ಕುಸ್ತಿಯಲ್ಲಿ 12, ವೇಟ್ ಲಿಫ್ಟಿಂಗ್‌ನಲ್ಲಿ ಭಾರತ 9 ಪದಕಗಳನ್ನು ಗಳಿಸಿದೆ.

ಒಟ್ಟಾರೆ ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾಕ್ಕೆ ಮೊದಲ ಸ್ಥಾನ, ಇಂಗ್ಲೆಂಡ್‌ಗೆ 2ನೇ ಸ್ಥಾನ ಮತ್ತು ಭಾರತ ಮೂರನೇ ಸ್ಥಾನ ಆಕ್ರಮಿಸಿಕೊಂಡಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟ
ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಆಸ್ಟ್ರೇಲಿಯಾ 80 58 59 197
ಇಂಗ್ಲೆಂಡ್ 45 45 46 136
ಭಾರತ 26 20 20 66

Leave a Comment