ಪತ್ರಿಕಾ ಛಾಯಾಚಿತ್ರಗ್ರಾಹಕರ ವಿರುದ್ಧ ಪ್ರಕರಣ ದಾಖಲು: ಚಂದ್ರಬಾಬು ನಾಯ್ಡು ಖಂಡನೆ

ಅಮರಾವತಿ, ಜ 24 – ಪೌಢಶಾಲೆ ತರಗತಿ ಕೊಠಡಿಯಲ್ಲಿ ಪೊಲೀಸ್ ಸಿಬ್ಬಂದಿ  ಬಟ್ಟೆಗಳನ್ನು ಒಣಗಿಸಿದ್ದರ ಛಾಯಾಚಿತ್ರಗಳನ್ನು ತೆಗೆದಿದ್ದಕ್ಕಾಗಿ ಪತ್ರಿಕಾ ಛಾಯಾಚಿತ್ರಗ್ರಾಹಕರ ವಿರುದ್ಧ ಮಂದಾಡಂ ಗ್ರಾಮದ ಪೆÇಲೀಸರು ಪ್ರಕರಣ ದಾಖಲಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಖಂಡಿಸಿದ್ದಾರೆ.

ಶಾಲೆಯ ಕೊಠಡಿಯಲ್ಲಿ  ಪೆÇಲೀಸ್ ಸಿಬ್ಬಂದಿ ಬಟ್ಟೆಗಳನ್ನು ಒಣಗಿಸುವ ಚಿತ್ರಗಳನ್ನು ತೆಗೆದಿದ್ದಕ್ಕಾಗಿ ನಿರ್ಭಯಾ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳ ಅಡಿ ಪೆÇಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ನಾಯ್ಡು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸರ ಈ ಕ್ರಮವನ್ನು ಖಂಡಿಸಿರುವ ಅವರು, ಆಡಳಿತಾರೂಢ ವೈಎಸ್ ಆರ್ ಸಿಪಿ ಸರ್ಕಾರ ಸತ್ಯವನ್ನು ಬಹಿರಂಗಪಡಿಸದಂತೆ ಮಾಧ್ಯಮಗಳನ್ನು ಹೆದರಿಸುತ್ತಿದೆ ಆರೋಪಿಸಿದರು.

“ವೈಎಸ್ ಆರ್ ಸಿಪಿ’ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ನಿರ್ಬಯಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ. ಎರಡು ತೆಲುಗು ಸುದ್ದಿ ವಾಹಿನಿಗಳನ್ನು ಸ್ಥಗಿತಗೊಳಿಸುವುದಾಗಿಯೂ ಬೆದರಿಕೆ ಹಾಕಿದೆ.  ಅಧಿವೇಶನವನ್ನು ನೇರ ಪ್ರಸಾರ ಮಾಡುವುದಕ್ಕೆ ಮೂರು ತೆಲುಗು ಸುದ್ದಿ ವಾಹಿನಿಗಳು ನಿರ್ಬಂಧಿಸಲಾಗಿದೆ.’ ಎಂದು ನಾಯ್ಡು ದೂರಿದ್ದಾರೆ.

ಟುನಿ ಪಟ್ಟಣದಲ್ಲಿ ತೆಲುಗು ದಿನ ಪತ್ರಿಕೆಯ ವರದಿಗಾರನನ್ನು ಹತ್ಯೆ ಮಾಡಲಾಗಿದ್ದು, ವೈಎಸ್ ಆರ್ ಸಿಪಿ ಶಾಸಕರೊಬ್ಬರು ಪತ್ರಿಕೆಯ ಸಂಪಾದಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಈವರೆಗೆ ಈ ಪ್ರಕರಣಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಆಂಧ್ರಪ್ರದೇಶದಲ್ಲಿ ಮಾಧ್ಯಮಗಳು ಅಪಾಯದಲ್ಲಿವೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚಂದು ಜನಾರ್ಧನ್ ಮತ್ತು ಭಾರತೀಯ ಪತ್ರಕರ್ತ ಒಕ್ಕೂಟದ ಉಪಾಧ್ಯಕ್ಷ ಅಂಬತಿ ಅಂಜನೇಯುಲು ವಿವಿಧ ಪತ್ರಕರ್ತರ ಸಂಘಗಳ ಮುಖಂಡರ ನೇತೃತ್ವದಲ್ಲಿ ಡಿಜಿಪಿ ಗೌತಮ್ ಸಾವಂಗ್ ಅವರನ್ನು ಭೇಟಿ ಮಾಡಿ ಮಾಧ್ಯಮ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

Leave a Comment