ಪತ್ನಿ ಕೊಲೆ ಮಾಡಿದ ಪತಿಗೆ ಜೈಲು ಶಿಕ್ಷೆ

 

ಕಲಬುರಗಿ,ಅ.16-ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಮತ್ತು 5000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಶಹಾಬಜಾರ ಸ್ವಾದಿಗಲ್ಲಿಯ ನಾಗರಾಜ ಅಲಿಯಾಸ್ ನಾಗಣ್ಣ ತಂದೆ ಮಲ್ಲಿಕಾರ್ಜುನ ಹಂಗರಗಿ ಶಿಕ್ಷೆಗೆ ಗುರಿಯಾದ ಆರೋಪಿ.

ಶಹಾಬಜಾರ ಸ್ವಾದಿಗಲ್ಲಿಯ ನಾಗರಾಜ ಅಲಿಯಾಸ್ ನಾಗಣ್ಣ ಹಂಗರಗಿ ತನ್ನ ಪತ್ನಿ ಅಂಬಿಕಾ ಅಲಿಯಾಸ್ ಕವಿತಾ ಅವರಿಗೆ ನನಗೆ ಸಾಲಾ ಆಗಿದೆ ತವರು ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ. ಇದೇ ವಿಷಯಕ್ಕೆ 3.4.2013 ರಂದು ರಾತ್ರಿ 11 ಗಂಟೆ ಸುಮಾರಿಗೆ ಪತ್ನಿಗೆ ಹೊಡೆ-ಬಡೆ ಮಾಡಿ ನೇಣು ಹಾಕಿ ಕೊಲೆ ಮಾಡಿದ್ದ.

ಈ ಸಂಬಂಧ ಚೌಕ್ ಪೊಲೀಸ್ ಠಾಣೆಯ ಪಿಐ ಬಿ.ಬಿ.ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಚಪ್ಪ ತಾಳಿಕೋಟೆ ಅವರು ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 5000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಅಂಜನಾ ಚವ್ಹಾಣ ವಾದ ಮಂಡಿಸಿದ್ದರು.

Leave a Comment