ಪತ್ನಿ ಕೊಂದ ಪತಿ

ಕಲಬುರಗಿ,ಆ.9- ವೈಮನಸಿನಿಂದಾಗಿ ಪತಿಯೊಬ್ಬ ಖಾರಾ ಕುಟ್ಟುವ ಹಾರಿಯಿಂದ ತಲೆಗೆ ಹೊಡೆದು ಪತ್ನಿಯ ಕೊಲೆ ಮಾಡಿದ ಘಟನೆ ನಗರದ ಹೀರಾಪುರ ಬಡಾವಣೆಯಲ್ಲಿ ತಡರಾತ್ರಿ ನಡೆದಿದೆ.

ಸುನೀತಾ ಅಲಿಯಾಸ್ ಸವಿತಾ (35) ಕೊಲೆಯಾದ ಮಹಿಳೆ.

ಪತಿ ಸಂತೋಷ ಅಣ್ಣಾರಾವ ಬಮ್ಮಳಗಿ ನೀಡುತ್ತಿದ್ದ ಕಿರುಕುಳ ಸಹಿಸದೆ ಸುನೀತಾ ಅಲಿಯಾಸ್ ಸವಿತಾ ಕಳೆದ ಐದಾರು ತಿಂಗಳ ಹಿಂದೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದ ಸಂತೋಷ ಪತ್ನಿ ಮೇಲಿನ ಹಳೆಯ ವೈಮನಸಿನಿಂದಾಗಿ ಜಗಳ ತೆಗೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ದಂಪತಿಗೆ 4 ವರ್ಷ ಹಾಗೂ 11 ವರ್ಷದ ಎರಡು ಗಂಡು ಮಕ್ಕಳಿವೆ. ಸುದ್ದಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment