ಪತ್ನಿಯೊಂದಿಗೆ ಜಗಳ ಪತಿ ನೇಣು

ಬೆಂಗಳೂರು, ಅ. ೨೪- ಪತ್ನಿಯೊಂದಿಗಿನ ಜಗಳದಿಂದ ಬೇಸತ್ತು ಪತಿ ನೇಣಿಗೆ ಶರಣಾಗಿರುವ ದುರ್ಘಟನೆ ಮಹದೇವಪುರದ ಸರಸ್ವತಿ ನಗರದಲ್ಲಿ ನಡೆದಿದೆ.
ಸರಸ್ವತಿ ನಗರದ ಮೊದಲ ಕ್ರಾಸ್‌ನ ಶಶಿಕುಮಾರ್ (20) ಆತ್ಮಹತ್ಯೆ ಮಾಡಿಕೊಂಡವರು. ಗಾರೆ ಕೆಲಸ ಮಾಡಿಕೊಂಡಿದ್ದ ಶಶಿಕುಮಾರ್ ಕೆಲ ದಿನಗಳ ಹಿಂದೆ ವಿವಾಹವಾಗಿದ್ದರು.
ವಿವಾಹದ ನಂತರ ಕೆಲದಿನಗಳ ಕಾಲ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಜಗಳದಿಂದ ಬೇಸತ್ತ ಶಶಿಕುಮಾರ್ ನಿನ್ನೆ ರಾತ್ರಿ ಪತ್ನಿ ಹೊರಗೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ.
ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾರುಗಳಿಗೆ ಬೆಂಕಿ
ಹೆಗ್ಗನಹಳ್ಳಿಯ ಶ್ರೀಗಂಧದ ಕಾವಲು ಬಳಿ ಮನೆ ಮುಂದೆ ನಿಲ್ಲಿಸಿದ್ದ ಇಂಡಿಕಾ, ಇಟಿಯೋಸ್ ಸೇರಿ, 3 ಕಾರುಗಳಿಗೆ ನಿನ್ನೆ ಮಧ್ಯರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ದೂರು ದಾಖಲಿಸಿರುವ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Leave a Comment