ಪತ್ನಿಗೆ ಹಲ್ಲೆ: ಪತಿ

ವಿರುದ್ಧ ಹತ್ಯೆಯತ್ನ ಕೇಸ್

ಬದಿಯಡ್ಕ, ಮೇ ೧೯- ಪತ್ನಿಗೆ ಗಂಭೀರ ಹಲ್ಲೆಗೊಳಿಸಿ ಪರಾರಿಯಾಗಿರುವ ಪತಿಯ ವಿರುದ್ಧ ಬದಿಯಡ್ಕ ಪೊಲೀಸರು ಹತ್ಯೆಯತ್ನ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಬಾರಡ್ಕದ ಬಾಡಿಗೆ ಮನೆಯಲ್ಲಿ ವಾಸಿಸುವ ಗೀತಾ (೩೨) ಎಂಬವರು ಹಲ್ಲೆಗೀಡಾಗಿದ್ದು ಇವರು  ಗಂಭೀರ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರು ಕಾಡಮನೆ ಮಾಡತ್ತಡ್ಕ ಅಂಗನವಾಡಿಯ ಶಿಕ್ಷಕಿ ಕೂಡ ಆಗಿದ್ದಾರೆ. ಇವರಿಗೆ ಪತಿ ರಾಘವ (೪೦) ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಮೊನ್ನೆ ರಾತ್ರಿ ಮನೆಗೆ ಬಂದ ರಾಘವ ವಿನಾಕಾರಣ ಪತ್ನಿ ಗೀತಾರಿಗೆ ಹಲ್ಲೆಗೈದುದಾಗಿ ದೂರಲಾಗಿದೆ. ಈ ಹಿಂದೆ ಕಾಡಮನೆಯಲ್ಲಿ ವಾಸಿಸುತ್ತಿದ್ದ ಈ ದಂಪತಿ ಬಳಿಕ ಬಾರಡ್ಕದ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ್ದರು. ಕಳೆದ ಎರಡು ವರ್ಷಗಳಿಂದ ಇವರ ಮಧ್ಯೆ ವಿರಸ ಉಂಟಾಗಿದ್ದು ಸಂಬಂಧಿಕರು, ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಿದ್ದರು. ಈ ಮಧ್ಯೆ ಮೊನ್ನೆ ರಾತ್ರಿ ಮನೆಗೆ ಬಂದ ರಾಘವ ಪತ್ನಿ ಗೀತಾರಿಗೆ ಗಂಭೀರ ಹಲ್ಲೆಗೊಳಿಸಿದ್ದಾನೆನ್ನಲಾಗಿದೆ. ಬಳಿಕ ಈತ ತಲೆಮರೆಸಿಕೊಂಡಿದ್ದಾನೆಂದೂ ದೂರಲಾಗಿದೆ. ರಾಘವ್ ವಿರುದ್ಧ ಹತ್ಯೆಯತ್ನ ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment