ಪತ್ತೆದಾರಿಯ ರೋಚಕ ಕಹಾನಿ

ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಪುತ್ರ ನಟ ನವೀನ್ ಕೃಷ್ಣ ನಿರ್ದೇಶಕರಾಗಿ ಕಿರುತೆರೆ ಯತ್ತ ಮುಖ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅಪರಾಧ
ತನಿಖಾ ಧಾರಾವಾಹಿಯ ಮೂಲಕ ರೋಚಕ ಕಹಾನಿಯನ್ನು ಕಟ್ಟಿಕೊಡಲು ಮುಂದಾಗಿದ್ದಾರೆ.

ನವೀನ್ ಕೃಷ್ಣ ಹೊಸ ಸಾಹಸ
ನಟ ನಿರ್ದೇಶಕ ನವೀನ್
ಕೃಷ್ಣ, ಪತ್ತೇದಾರಿ
ಪ್ರತಿಭಾ ಮೂಲಕ
ಕಿರುತೆರೆಯಲ್ಲಿ ರೋಚಕ
ಕಹಾನಿಯೊಂದನ್ನು
ಕಟ್ಟಿಕೊಡಲು ಮುಂದಾಗಿ
ದ್ದಾರೆ. ಪ್ರತಿಭಾವಂತ ಹೆಣ್ಣು
ಮಗಳ ಕಥೆ ಹೊಂದಿದೆ.
ಅದುವೇ ‘ಪತ್ತೆದಾರಿ ಪ್ರತಿಭಾ‘ ಮೂಲಕ. ಇತ್ತೀಚೆಗಷ್ಟೇ ‘ಪುಷ್ಪಕ ವಿಮಾನ‘ ಚಿತ್ರ ನಿರ್ಮಾಪಕರಾಗಿ ಬಡ್ತಿ ಪಡೆದ ಎ.ಆರ್. ವಿಖ್ಯಾತ್, ಪತ್ತೆದಾರಿ ಪ್ರತಿಭಾ ಮೂಲಕ ಕಿರುತೆರೆಗೂ ನಿರ್ಮಾಪಕರಾಗಿ ಪ್ರವೇಶ ಪಡೆದಿದ್ದಾರೆ. ಪತ್ತೆದಾರಿ ಪ್ರತಿಭಾ ಆಗಿ ನಟಿ ಶರ್ಮಿಳಾ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಮಾನ್ಯ ಗೃಹಿಣಿಯೊಬ್ಬಳು ತನ್ನ ಸೂಕ್ಷ್ಮವಾದ ಗ್ರಹಿಕೆ, ಜಾಣ್ಮೆ ಮತ್ತು ಬುದ್ಧಿವಂತಿಕೆ ನಡೆಯಿಂದ ಹೇಗೆ ಪತ್ತೆದಾರಿಕೆ ನಡೆಸುತ್ತಾಳೆ ಎನ್ನುವುದರ ಸುತ್ತಾ ಇಡೀ ಕಥೆ ರೋಚಕಕತೆ ಪಡೆದು ಕೊಂಡಿದೆ. ಅಡುಗೆ ಮನೆಯಲ್ಲಿ ಸಾಮಾನ್ಯ ಗೃಹಿಣಿಯಾಗಿ ಕಲಿತ  ಪಾಠಗಳನ್ನೇ ಬಳಸಿ ಕಠಿಣವಾದ, ಬಿಡಿಸಲಾಗದ ಪೊಲೀಸ್ ಅಪರಾಧ
ಪ್ರಕರಣಗಳನ್ನು ಈ ಪ್ರತಿಭಾ ಬಗೆಹರಿಸುತ್ತಾಳೆ.
ಒಬ್ಬ ಗೃಹಿಣಿಯಾಗಿ ಮನೆಯ ಜವಾಬ್ದಾರಿಯನ್ನೂ ನಿಭಾಯಿಸುತ್ತಾ, ಅಪರಾಧ ಲೋಕದ ಕೇಸುಗಳನ್ನು ಕೂಡ ಲೀಲಾಜಾಲವಾಗಿ ಬಗೆಹರಿಸುವ ಬುದ್ಧಿವಂತ  ಹೆಣ್ಣೊಬ್ಬಳಕಥೆಯಿದು. ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬ ಸಂದೇಶವನ್ನು ಕೂಡ ಈ ಧಾರಾವಾಹಿಯ ಮೂಲಕ  ನಿರ್ದೇಶಕ ವೀನ್ ಕೃಷ್ಣ ಅವರು ಹೇಳಹೊರಟಿದ್ದಾರೆ. ಕನ್ನಡಕಿರುತೆರೆಯಲ್ಲೇ ಮೊದಲ ಬಾರಿಗೆ ಈಮಾದರಿಯ ಕಥೆ ಪ್ರಸಾರವಾಗುತ್ತಿದೆ. ಪತ್ತೆದಾರಿ ಪ್ರತಿಭಾಳಾಗಿ ನಟಿ ಶರ್ಮಿಳಾ ಕಾಣಿಸಿಕೊಂಡಿದ್ದು ಉಳಿದಂತೆ ವಲ್ಲಭ್ ಸೂರಿ, ಪೃಥ್ವಿರಾಜ್, ಪಿ.ಡಿ. ಸತೀಶ್‌ಚಂದ್ರ ಮುಂತಾದವರು ಅಭಿನಯಿಸಿದ್ದಾರೆ. ಪತ್ತೆದಾರಿ ಪ್ರತಿಭಾ, ಏಪ್ರಿಲ್ ೩ರ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮ ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.  ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದ ಕಿರುತೆರೆ ವೀಕ್ಷಕರ ಮನೆ-
ಮನಗಳನ್ನು ತಲುಪಿದ್ದ ಜೀ ಕನ್ನಡ ವಾಹಿನಿ
ಇತ್ತೀಚೆಗಷ್ಟೇ ವೀಕೆಂಡ್ ವಿಥ್ ರಮೇಶ್‌ನಂಥ
ಅತಿಥಿಗಳ ಮನದಾಳದ ನೆನಪುಗಳನ್ನು
ಮರುಕಳಿಸುವಂತ ಕಾರ್ಯಕ್ರಮ ಆರಂಭಿಸಿತ್ತು.
ಈಗ ವಿಭಿನ್ನ ಶೈಲಿಯ
ಪತ್ತೇದಾರಿ ಧಾರಾವಾಹಿಯನ್ನು ಕನ್ನಡಿಗರಿಗಾಗಿ
ಅರ್ಪಿಸುತ್ತಿದೆ.
ವಿಭಾಗದಲ್ಲಿ ಸರಿಗಮಪ ಕಾಮಿಡಿ
ಕಿಲಾಡಿಗಳು, ಡ್ರಾಮಾ ಜೂನಿಯಱ್ಸ್,
ಮಹಾದೇವಿ, ನಾಗಿಣಿ, ಅಂಜಲಿ ಹಾಗೂ
ಜೋಡಿಹಕ್ಕಿ ಬಳಿಕ ‘ಪತ್ತೇದಾರಿ ಪ್ರತಿಭಾ‘
ಮೂಲಕ ಮಹಿಳಾ ಪ್ರತಿಭಾವಂತೆಯ
ಕಥೆಯನ್ನು ಹೇಳಹೊರಟಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಬಿಬಿಎಂಪಿ
ಕಸದ ವಾಹನದಲ್ಲಿ ಕೊಂಡೊಯ್ದು ಅವಮಾನಗೊಳಿಸಿರುವುದನ್ನು ಖಂಡಿಸಿ ಕೆಪಿಸಿಸಿ
ಮಹಿಳಾ ಸಮಿತಿಯ ಪರಿಶಿಷ್ಟ ಜಾತಿ ಉಪ ಸಂಚಾಲಕಿ ಮಗ್ಗೇಶ್ವರಿ ಕಂದನ್ ಅವರು
ಬೆಂಬಲಿಗರೊಂದಿಗೆ ಪಾಲಿಕೆ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬೆಂಗಳೂರು, ಮಾ. ೩೧- ಸಂವಿಧಾನ
ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ
ಪ್ರತಿಮೆಯನ್ನು ಬಿಬಿಎಂಪಿ ಕಸದ
ವಾಹನದಲ್ಲಿ ಕೊಂಡೊಯ್ದು
ಅವಮಾನಗೊಳಿಸಿದ್ದಾರೆ ಎಂದು
ಆರೋಪಿಸಿ ಕರ್ನಾಟಕ ಪ್ರದೇಶ
ಮಹಿಳಾ ಕಾಂಗ್ರೆಸ್ ಸಮಿತಿಯ
ಬೆಂಗಳೂರು ಮಹಾನಗರ ಪರಿಶಿಷ್ಟ
ಜಾತಿ ಉಪ ಸಂಚಾಲಕಿ ಮಗ್ಗೇಶ್ವರಿ
ಕಂದನ್ ಮತ್ತು ಅವರ ಬೆಂಬಲಿಗರು
ಬಿಬಿಎಂಪಿ ಕೇಂದ್ರಕಚೇರಿಯ ಮುಂದೆ
ಪ್ರತಿಭಟನೆ ನಡೆಸಿದರು.
ಛಲವಾದಿ ಪಾಳ್ಯದಲ್ಲಿ ಇರುವ
ವಜ್ರೇಶ್ವರಿ ಸಾಮಿಲ್ ಪಕ್ಕದಲ್ಲಿ
ಬಿಬಿಎಂಪಿಗೆ ಸೇರಿದ ಜಾಗದಲ್ಲಿ
ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಅದಕ್ಕೆ
ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ
ಸಲ್ಲಿಸಿದ್ದೆವು. ಆದರೆ, ಕೆಳ ಹಂತದ
ಅಧಿಕಾರಿಗಳು ಮೇಲಧಿಕಾರಿಗಳಿಗೆ
ಖಡತವನ್ನು ಕಳುಹಿಸಲಿಲ್ಲ ಎಂದು
ಆರೋಪಿಸಿದರು.
ಫೆ. ೨೮ ರಂದು ಪ್ರತಿಮೆ ಸ್ಥಾಪಿಸಲು
ಸಿದ್ಧವಾಗಿದ್ದೆವು. ಆದರೆ, ಏಕಾಏಕಿ
ಅಧಿಕಾರಿಗಳು ಬಿಬಿಎಂಪಿ ಕಸದ
ಲಾರಿಯಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು
ಕೊಂಡೊಯ್ದು ಅವಮಾನವೆಸಗಿದ್ದಾರೆ
ಎಂದು ದೂರಿದರು.
ಅಂಬೇಡ್ಕರ್ ಪ್ರತಿಮೆಯನ್ನು ಕೊಂಡೊಯ್ದ
ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು
ಒತ್ತಾಯಿಸಿದರು.
ಅಂಬೇಡ್ಕರ್‌ಗೆ ಅವಮಾನ
ಖಂಡಿಸಿ ಪ್ರತಿಭಟನೆ
ಇಣಕು ನೋಟ

Leave a Comment