ಪತಿ ಬೇಕು ಡಾಟ್ ಕಾಮ್

ಮನುಷ್ಯನ ಜೀವನದ ಪ್ರಮುಖ ಘಟ್ಟ ಮದುವೆ ಕೆಲವರಿಗೆ ವಿವಾಹ ಅತಿ ಶೀರ್ಘರವಾಗಿ ನಡೆದರೆ ಮತ್ತೆ ಕೆಲವರಿಗೆ ವಿಳಂಬವಾಗಬಹುದು  ಗಂಡಿಗೆ ಹೆಣ್ಣು,ಹೆಣ್ಣಿಗೆಗಂಡು ಹುಡುಕುವ ಕಷ್ಟ ಅನುಭವಿಸಿದವರಿಗೆ ಗೊತ್ತು.!

ಗಂಡು ಹೆಣ್ಣು ಸಿಗುವುದು ಕಷ್ಟವಾದಾಗ ಇಬ್ಬರಿಗೂ ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದಿಲ್ಲ.  ಇಂತಹುದೆ ಘಟನೆಗಳನ್ನು ಒಳಗೊಂಡ ಹಾಸ್ಯಪ್ರಧಾಣ ಪತಿಬೇಕು . ಕಾಮ್ ಎನ್ನುವ  ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ.

ಹೆಸರೇ ಹೇಳುವಂತೆ ಮಧ್ಯಮ ವರ್ಗದ ಹುಡುಗಿಗೆ ಪೋಷಕರು ಹುಡುಗನನ್ನು ಹುಡುಕುವ ಪ್ರಸಂಗಗಳು. ಮನೆಗೆ ಹುಡುಗಿ ನೋಡಲು ಬರುತ್ತಾರೆಂದು ತಿಳಿದಾಗ ಆಕೆಯ ಅಪ್ಪ-ಅಮ್ಮ ಏನು ಮಾಡ್ತಾರೆ, ಸಂಭಂದಿಕರು ಯಾವ ರೀತಿ ಚರ್ಚೆ ನಡೆಸುತ್ತಾರೆ. ಇವೆಲ್ಲಾವನ್ನು ಹಾಸ್ಯದ ಮೂಲಕ  ತೋರಿಸುವ ಪ್ರಯತ್ನ ಮಾಡಲಾಗಿದೆ.  ಸೆಂಟಿಮೆಂಟ್ ಕತೆಯಾದರೂ ನೋಡುಗನಿಗೆ  ಮನರಂಜನೆ ಕೊಡುತ್ತದೆ.

ಹುಡುಗಿಯ  ವೃತ್ತಿ, ಕ್ಲೈಮಾಕ್ಸ್‌ನಲ್ಲಿ ಮದುವೆಯಾಗುತ್ತದಾ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕಂತೆ ಎಂದು ಅವಲತ್ತು ಮಾಡಿಕೊಳ್ಳುತ್ತಾರೆ ನಿರ್ದೇಶಕ ರಾಕೇಶ್. ಒಂದು ಹಾಡಿಗೆ ಕೌಶಿಕ್‌ಹರ್ಷ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಚಿತ್ರದಲ್ಲಿ ಶೀತಲ್‌ಶೆಟ್ಟಿ ನಾಯಕಿಯಾಗಿದ್ದು ಅವರ ಸುತ್ತ ಕತೆ ತಿರುಗುತ್ತದೆ ಇವರ ತಂದೆ-ತಾಯಿಯಾಗಿ ಕೃಷ್ಣಹರಡಿಗ, ಹರಿಣಿ  ಕಾಣಿಸಿಕೊಂಡಿದ್ದಾರೆ.

ಟ್ರೈಲರ್‌ನ್ನು ಸುದೀಪ್ ಬಿಡುಗಡೆ ಮಾಡಿ  ಶುಭ ಹಾರೈಸಿರುವುದು ತಂಡಕ್ಕೆ ಆನೆ ಬಲ ಬಂದಿದೆಯಂತೆ. ಅಲ್ಲದೆ ಸೆನ್ಸಾರ್‌ನವರು ಯಾವುದೇ ದೃಶ್ಯವನ್ನು ಕಟ್ ಮಾಡದೆ ಯುಎ ಪ್ರಮಾಣಪತ್ರ ನೀಡಿದ್ದಾರೆ. ಛಾಯಗ್ರಹಣ ಯೋಗಿ, ಸಂಕಲನ ವಿಜಯ್.ಎಂ.ಕುಮಾರ್,. ಹಿನ್ನಲೆ ಸಂಗೀತ ಹರ್ಷವರ್ಧನ್‌ರಾಜ್ ಅವರದಾಗಿದೆ.  ನಿರ್ದೇಶಕರ ಜೊತೆಗೆ ಗ್ರಾಮೀಣ ಭಾಗದ ಮಂಜುನಾಥ್, ಶ್ರೀನಿವಾಸ್ ನಿರ್ಮಾಣದಲ್ಲಿ ಪಾಲುದಾರರು. ೧.೫೭ ಗಂಟೆಯ ಸಿನಿಮಾವನ್ನು ವಿತರಕ ಕುಮಾರ್  ವರಮಹಾಲಕ್ಷೀ ಹಬ್ಬದಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Leave a Comment