ಪತಿ ಕಿರುಕುಳ: ಪತ್ನಿ ನೇಣಿಗೆ ಶರಣು

ಮೈಸೂರು, ನ.9- ಪತಿಯ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಜಯಪುರ ಹೋಬಳಿಯಲ್ಲಿ ನಡೆದಿದೆ. ಮೃತರನ್ನು ಮೈಸೂರು ತಾಲೂಕಿನ ಜಯಪುರ ಹೋಬಳಿಯ ರಾಮನ ಹುಂಡಿ ಗ್ರಾಮದ ನಿವಾಸಿ ರವಿ ಎಂಬವರ ಪತ್ನಿ ಲತಾ (35) ಎಂದು ಗುರುತಿಸಲಾಗಿದೆ.
ಮೃತ ಲತಾ ಪತಿ ಕುಡಿದು ಬಂದು ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಲತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ರವಿಗೆ ಲತಾ ಎರಡನೇ ಪತ್ನಿಯಾಗಿದ್ದು, ಮೊದಲ ಪತ್ನಿ ಕೂಡ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು ಎಂದು ಲತಾ ಪೋಷಕರು ದೂರಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರವಿಯನ್ನು ಬಂಧಿಸಲಾಗಿದೆ.

Leave a Comment