ಪಚ್ಚಿ ಬಾಯ್ಸ್ ತಂಡದಿಂದ ವಿಜಯೋತ್ಸವ

ಚಳ್ಳಕೆರೆ.ಮೇ.16; ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 5 ಸ್ಥಾನಗಳನ್ನು ಗಳಿಸುವ ಮೂಲಕ ಜಿಲ್ಲೆಯಲ್ಲಿ ಹೊಸ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಜೊತೆಗೆ ಕಾಂಗ್ರೆಸ್‍ನ ಭದ್ರ ಕೋಟೆಯನ್ನು ಛಿದ್ರ ಛಿದ್ರ ಮಾಡಿದೆ ಎಂದು ಪಚ್ಚಿ ಬಾಯ್ಸ್ ತಂಡ ನಾಯಕ ಎಚ್.ಪ್ರಶಾಂತ(ಪಚ್ಚಿ) ಹೇಳಿದರು.
ಅವರು ಇಲ್ಲಿನ ವಿಠಲನಗರದಲ್ಲಿ ಬಿಜೆಪಿ ಜಿಲ್ಲೆಯಲ್ಲಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಂಡದ ನೂರಾರು ಸದಸ್ಯರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮ ಆಚರಣೆ ಕುರಿತು ಮಾತನಾಡಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಿತ್ರದುರ್ಗ ಕ್ಷೇತ್ರದಿಂದಲೂ, ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದಲೂ, ಎಂ.ಚಂದ್ರಪ್ಪ ಹೊಳಲ್ಕೆರೆ ಕ್ಷೇತ್ರದಿಂದಲೂ, ಗೂಳಿಹಟ್ಟಿ ಶೇಖರ್ ಹೊಸದುರ್ಗದಿಂದಲೂ, ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ಕ್ಷೇತ್ರದಿಂದಲೂಆಯ್ಕೆಯಾಗಿದ್ದು ಇವರೆಲ್ಲರನ್ನೂ ಪಚ್ಚಿ ಬಾಯ್ಸ್ ತಂಡದ ವತಿಯಿಂದ ಅಭಿನಂದಿಸುವುದಾಗಿ ಅವರು ತಿಳಿಸಿದರು.
ವಿನಯ್, ಜಿಗ್ಗಿ, ಪ್ರಶಾಂತ್, ಶಾಂತರಾಜು, ವಿನಯ್, ನವೀನ್, ನಿರಂಜನ್, ಕಿರಣ್, ಸಮೀವುಲ್ಲಾ, ಕೋಟ್ರೇಶ್, ಸಚಿನ್, ಮನೋಜ್, ಇ.ಪ್ರಶಾಂತ್ ಮುಂತಾದವರು ಇದ್ದರು.

Leave a Comment