ಪಕ್ಷ ಸಂಘಟನೆಗೆ ಮುಂದಾಗಲು ಕರೆ

ನವಲಗುಂದ,.ಅ12: ಪಕ್ಷದ ಸಂಘಟನೆ ಬಲವರ್ಧನೆಗಾಗಿ ನೂತನವಾಗಿ ಪಕ್ಷ ಅಸ್ತಿತ್ವಕ್ಕೆ ತಂದ “ಶಕ್ತಿ” ಸಂಘಟನೆಯ ಮೂಲಕ ಯುವಕರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ನವಲಗುಂದ ವಿಧಾನಸಭಾ ಉಸ್ತುವಾರಿ ಪ್ರಕಾಶಗೌಡ ಪಾಟೀಲ್ ಹೇಳಿದರು.
ಬುಧವಾರ ಇಲ್ಲಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿಧಾನಸಬಾ ಕ್ಷೇತ್ರದ “ಶಕ್ತಿ” ಸಂಘಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಬರಲಿರುವ ಲಫಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಹೊಂದುವ ನಿಟ್ಟಿನಲ್ಲಿ “ಶಕ್ತಿ” ಸಂಘಟನೆ ಸಹಕಾರಿಯಾಗಲಿದ್ದು, ವೋಟರ್ ಐಡಿ ಕಾರ್ಡನ ನಂಬರನ್ನು ಪಕ್ಷದ ಮೊಬೈಲ್ ನಂಬರಗೆ ಎಸ್,ಎಮ್,ಎಸ್ ಮಾಡುವ ಮೂಲಕ ಸದಸ್ಯತ್ವ ನೊಂದಣೆ ನಡೆಸಲಿದೆ ಎಂದರು.
ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಅಸೂಟಿ ಮಾತನಾಡಿ ತಾಲೂಕಿನ ಪ್ರತಿಯೊಂದು ಬೂತ್‍ಗೆ ತೆರಳಿ “ಶಕ್ತಿ”ಸಂಘಟನೆ ಕುರಿತಾಗಿ ಮಾಹಿತಿ ನೀಡುವುದರೊಂದಿಗೆ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದೆಂದರು.
ಜಿಲ್ಲಾ ಶಕ್ತಿ ಸಂಘಟನೆಯ ಸಂಚಾಲಕ ಬಂಗಾರೇಶ್ ಹಿರೇಮಠ, ತಾಪಂ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ,ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು ಜಾಧವ್,ಹನಮಂತಪ್ಪಇಬ್ರಾಹಿಂಪೂರ,ಎಮ್.ಎಮ್.ಮುಲ್ಲಾ,ಡಿ.ಎಚ್.ಖುದ್ದಣ್ಣವರ, ಸಂಜು ರಾಯರಡ್ಡಿ, ವೀರಣ್ಣ ಶಿಡಗಂಟಿ, ಸದುಗೌಡ ಪಾಟೀಲ್, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಮಾಯಣ್ಣವರ ಮತ್ತಿತರರಿದ್ದರು. ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

Leave a Comment