ಪಕ್ಷ ವಿರೋಧಿ ಚಟುವಟಿಕೆ: ನಜೀರ್ ಪಂಜಾಬಿರಿಗೆ- ಆಹ್ವಾನ

ರಾಯಚೂರು.ಆ.10- ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಈ. ಅಂಜಿನೇಯ ಅವರಿಗೆ ಚುನಾವಣಾ ಪ್ರಚಾರ ಮಾಡಿದ ನಜೀರ್ ಪಂಜಾಬಿ ಅವರು ನಿನ್ನೆ ಕಾಂಗ್ರೆಸ್‌ನ ಕ್ವಿಟ್ ಇಂಡಿಯಾ ಚಳುವಳಿ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವುದನ್ನು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹ್ಮದ್ ಉಮರ್ ಫಾರುಕ್ ಅವರು ಪ್ರಶ್ನಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಅವರು ನಜೀರ್ ಪಂಜಾಬಿ ಅಂತವರಿಗೆ ಪಕ್ಷದ ಕ್ವಿಟ್ ಇಂಡಿಯಾ ಚಳುವಳಿಯ ಕಾರ್ಯಕ್ರಮದಲ್ಲಿ ವೇದಿಕೆ ಕಲ್ಪಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ನಜೀರ್ ಪಂಜಾಬಿ ಅವರು ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಕಾರ್ಯಕರ್ತರಲ್ಲಿ ಪಕ್ಷದ ಸಂಘಟನೆ ಕುರಿತು ವಿಶ್ವಾಸ ಉಳಿಯಲು ಸಾಧ್ಯವೇ?
ನಗರಸಭೆ ಚುನಾವಣೆಗೆ ಅನೇಕರು ಅರ್ಜಿಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿ ಮೂರು ತಿಂಗಳು ಕಳೆಯದ ವ್ಯಕ್ತಿಗಳು ಅರ್ಜಿ ನೀಡುತ್ತಿರುವುದು ಇಂತಹವರಿಗೆ ಟಿಕೇಟ್ ನೀಡುವ ಮುನ್ನ ಪರಿಶೀಲಿಸಬೇಕೆಂದು ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

Leave a Comment