ಪಕ್ಷಾಂತರಕ್ಕೆ ಪ್ರಧಾನಿ ಕುಮ್ಮಕ್ಕು : ಮಾನ್ಪಡೆ

 

ಕಲಬುರಗಿ,ಮೇ.15-ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಪಕ್ಷಾಂತರಕ್ಕೆ ಕುಮ್ಮಕ್ಕು ನೀಡುವುದರ ಮೂಲಕ ಈ ಕಾಯ್ದೆಯನ್ನು ಉಲ್ಲಂಘಿಸುತ್ತ ನಡೆದಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ ಆರೋಪಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸುವುದರ ಮೂಲಕ ಅಲ್ಲಿನ ಮತದಾರರ ಮೇಲೆ ಚುನಾವಣೆಯನ್ನು ಹೇರಲಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಪಕ್ಷಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯದಲ್ಲಿ ಸರ್ಕಾರ ಇಲ್ಲದ ಪರಿಸ್ಥಿತಿ ಸೃಷ್ಟಿ ಮಾಡಲು ಹೊರಟಿದೆ. ಶಾಸಕರಿಗೆ ಹಣದ ಆಮಿಷ ಒಡ್ಡಿ ರಾಜೀನಾಮೆ ಕೊಡಿಸುವುದರ ಮೂಲಕ ಅಲ್ಲಿನ ಮತದಾರರ ಮೇಲೆ ಚುನಾವಣೆಯನ್ನು ಹೇರಲಾಗುತ್ತಿದೆ ಎಂದು ದೂರಿದರು.

ಚಿಂಚೋಳಿ ಮತಕ್ಷೇತ್ರದಲ್ಲಿ ಸುಮಾರು 20 ಸಾವಿರ ಜನ ಅರಣ್ಯಭೂಮಿ ಸಾಗುವಳಿದಾದರಿದ್ದಾರೆ. ಅದರಲ್ಲೂ ವಿಶೇಷವಾಗಿ ಶೇ.15 ರಷ್ಟು ಜನ ಲಂಬಾಣಿ ಸಮುದಾಯದವರೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಡಾ.ಉಮೇಶ ಜಾಧವ ಅವರು ಐದುವರ್ಷಗಳಾ ಕಾಲ ಶಾಸಕರಾಗಿದ್ದರೂ ಅರಣ್ಯಭೂಮಿ ಸಾಗುವಳಿದಾರರಿಗೆ ಅರಣ್ಯ ಭೂಮಿ ಸಾಗುವಳಿ ಹಕ್ಕು ಕೊಡಿಸಲಿಲ್ಲ. ಮಕ್ಕಳ ಮಾರಾಟ ಪ್ರಕರಣ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಂದು ಒಳ್ಳೆಯ ಯೋಜನೆ ಜಾರಿಗೆ ತರಲು ಪ್ರಯತ್ನಿಸಲಿಲ್ಲ. ಸಕ್ಕರೆ ಕಾರ್ಖಾನೆ ಆರಂಭ ಮಾಡಲಿಲ್ಲ. ಮುಲ್ಲಾಮಾರಿ ಕೆಳದಂಡೆ ಯೋಜನೆಯಡಿ ಒಂದು ಎಕರೆ ಭೂಮಿಗೂ ನೀರು ಕೊಡಿಸಲಿಲ್ಲ ಎಂದು ಹೇಳಿದರು. ಚಿಂಚೋಳಿ ಕ್ಷೇತ್ರದಲ್ಲಿ ಮಾನವ ಅಭಿವೃದ್ಧಿಗೆ ಜಾಧವ ನೀಡಿದ ಕೊಡುವೆ ಏನು  ಎಂದು ಮಾನ್ಪಡೆ ಪ್ರಶ್ನಿಸಿದರು.

ಈ ಚುನಾವಣೆಯನ್ನು ಬಿಜೆಪಿ ಅಲ್ಲಿನ ಮತದಾರರ ಮೇಲೆ ಬಲವಂತವಾಗಿ ಹೇರುವುದರ ಮೂಲಕ ಮತದಾರರಿಗೆ ಅವಮಾನ ಮಾಡಿದ್ದು, ಮತದರಾರರು ತಕ್ಕಪಾಠ ಕಲಿಬಸೇಕು ಎಂದು ಕೋರಿದರು.

ಪಕ್ಷದ ಮುಖಂಡರಾದ ಅಶೋಕ ಮ್ಯಾಗೇರಿ, ಗಂಗಮ್ಮ ಬಿರಾದಾರ, ಪಾಂಡುರಂಗ ಮಾವಿನ, ಶರಣಬಸಪ್ಪ ಮಮಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment