ಪಕ್ಷದ ಹಿತದೃಷ್ಟಿಯಿಂದ ಆದಷ್ಟು ಬೇಗ ಅಧ್ಯಕ್ಷರ ನೇಮಕ ಮಾಡಲಿ:ಜಿ.ಪರಮೇಶ್ವರ್

ಬೆಂಗಳೂರು, ಜ 20 – ಮುಂಬರುವ ಸ್ಥಳೀಯ ಸಂಸ್ಥೆ, ಸಾರ್ವತ್ರಿಕ ಚುನಾಚಣೆಗಳನ್ನು ಎದುರಿಸಲು ಈಗಿನಿಂದಲೇ ಪಕ್ಷ ಸಂಘಟಎ ಮಾಡುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎದ್ದಿರುವ ಗೊಂದಲವನ್ನು ಸರಿಪಡಿಸಲು ಹೈಕಮಾಂಡ್ ಆದಷ್ಟು ಬೇಗ ಕೆಪಿಸಿಸಿಗೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆದಷ್ಟು ಬೇಗ ಪಕ್ಷಕ್ಕೆ ನೂತನ ಸಾರಥಿ ನೇಮಿಸಬೇಕಿದೆ. ಆದರೆ ಕೆಪಿಸಿಸಿ ಆಯ್ಕೆ ಗೊಂದಲ ಸಂಬಂಧ ತಾವು ಹೈಕಮಾಂಡ್‌ಗೆ ಯಾವುದೇ ಪತ್ರವನ್ನಾಗಲೀ ಈಮೇಲ್ ಆಗಲೀ ಮಾಡಿಲ್ಲ. ತಮ್ಮ  ನಿವಾಸದಲ್ಲಿ ಹಿರಿಯ ನಾಯಕರೊಂದಿಗೆ ನಡೆದ ಸಭೆ ಬಗ್ಗೆ ಪ್ರಧಾನ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದ್ದೆ. ಈ ಕುರಿತು ಹೈಕಮಾಂಡ್ ನಾಯಕರು ಸಭೆ ಕರೆದು ಚರ್ಚಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ಇರುವುದಂತೂ ನಿಜ. ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ ಬಳಿಕ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ತಟಸ್ಥವಾಗಿಯೇ ಉಳಿದಿದ್ದಾರೆ. ಹೈಕಮಾಂಡ್ ಕೆಪಿಸಿಸಿಗೆ ಅಧ್ಯಕ್ಷರನ್ನು ನೇಮಕ ಮಾಡುವುದೇ ಆದರೆ ಆದಷ್ಟು ಬೇಗ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ಕೆಪಿಸಿಸಿಗೆ ಡಿ.ಕೆ ಶಿವಕುಮಾರ್  ಹಾಗೂ ಎಂ ಬಿ ಪಾಟೀಲ್ ಅವರ ಹೆಸರುಗಳು ಮಾಧ್ಯಮಗಳಲ್ಲಿ ಓಡಾಡುತ್ತಿರುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಪಕ್ಷದಲ್ಲಿ ಒಬ್ಬರೇ ಅಧ್ಯಕ್ಷರಿರಬೇಕು. ವಿಭಾಗವಾರು ನಾಲ್ಕು ಕಾರ್ಯಾಧ್ಯಕ್ಷರಿರುವುದಾಗಲೀ ಉಪಾಧ್ಯಕ್ಷರಿರುವುದಾಗಲಿ ಒಳ್ಳೆಯದಲ್ಲ‌. ಹೀಗಾದರೆ ಪಕ್ಷದಲ್ಲಿ ಗುಂಪುಗಾರಿಗೆ ಪ್ರಾರಂಭವಾಗುತ್ತದೆ ಎಂದು ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

Leave a Comment