ಪಕ್ಷದ ಪ್ರಾಮಾಣಿಕ ಅಭ್ಯರ್ಥಿಯನ್ನು ಗೆಲ್ಲಿಸಿ : ಎಚ್.ಡಿ.ಕೆ

ಕೆ.ಆರ್.ಪೇಟೆ. ನ.3- ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಸಮಾವಶಕ್ಕೆ ಬರಲಾಗದೆ ಮೊಬೈಲ್ ಮೂಲಕ ಕಾರ್ಯಕರ್ತರಿನ ಉದ್ದೇಶಿಸಿ ಮಾತನಾಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಆವರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಮತಯಾಚಿನೆಯ ಬಹಿರಂಗ ಸಮಾವೇಶಕ್ಕೆ ಮಾಜಿ ಸಿಎಂ ಎಚ್.ಡಿ.ಕೆ ಮೊಬೈಲ್ ಮೂಲಕ ಮಾತನಾಡಿದರು.
ಹವಾಮಾನದ ವೈಪರೀತ್ಯದಿಂದ ಬರಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರಿಗೆ ಕ್ಷಮೆ ಕೋರುತ್ತೇನೆ. ನಿಮ್ಮನ್ನು ನಂಬಿದ್ದೇನೆ, ಕೈ ಬಿಡಬೇಡಿ. ಪಕ್ಷದ ಪ್ರಾಮಾಣಿಕ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ನಿಮ್ಮ ಎಲ್ಲಾ ಸಮಸ್ಯೆ ನೀಗಿಸಲು ನಾನು ಸದಾ ಸಿದ್ದನಿದ್ದೇನೆ. ನಿಮ್ಮ ಪರ ಹೋರಾಟಕ್ಕೆ ನನಗೆ ನೀವು ಶಕ್ತಿ ತುಂಬಿ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ಇಂತಹ ವ್ಯಕ್ತಿಗೆ ತಕ್ಕಪಾಠ ಕಲಿಸಿ. ಬೆಳಗಾವಿಯಲ್ಲಿ ನಮ್ಮ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ. ಅದಕ್ಕಾಗಿ ಸಿಎಂ ಯಡಿಯೂರಪ್ಪ ಇಲ್ಲಿ ಬಂದು ಕುಳಿತಿದ್ದಾರೆ. ಕ್ಷೇತ್ರದ ಚುನಾವಣೆ ನಮ್ಮ ಸತ್ವ ಪರೀಕ್ಷೆ ಆಗಿದೆ. ನೀವು ನಮ್ಮ ಕುಟುಂಬದ ಕೈ ಹಿಡಿಯಬೇಕು. ನಮ್ಮ ಪಕ್ಷದ ಕಾರ್ಯಕರ್ತರನ್ನು ಬೆದರಿಸಲು ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಬರಲಿಲ್ಲವಿಲ್ಲವೆಂದು ಆಕ್ರೋಶ ಹೊರ ಹಾಕಬೇಡಿ ಎಂದು ಮನವಿ ಮಾಡಿ ಮಾತು ಮುಗಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ ನಿನಗೆ ಏನಾದ್ರೂ ಯೋಗ್ಯತೆ ಇದಿಯಾ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆಣ್ಣಿಗೆ ಗೌರವ ಕೊಟ್ಟು, ಪೂಜ್ಯ ಭಾವನೆಯಿಂದ ಕಂಡು ರಾಜಕೀಯ ಮಾಡುತ್ತಿದ್ದೀನಿ. ನ.5 ರ ಸಂಜೆ 6 ಗಂಟೆಗೆ ನನ್ನ ತಾಕತ್ತು ತೋರಿಸತ್ತೀನಿ. ನೀನು ಅದೇ ಸೀರೆ ಹುಟ್ಟುಕೊಂಡು ಕೆ.ಆರ್. ಪೇಟೆ ಖಾಲಿ ಮಾಡಬೇಕು. ನೀನು ನನ್ನ ಗುರು ಅನ್ನದೆ, ಪುಕ್ಕಟ್ಟೆ ಅಂತೀಯಾ? ನಿನಗೆ ಟಿಕೆಟ್ ಕೊಡಿಸಿದ್ದು ನಾನು. ನನ್ನ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ನಿನಗೆ ತಾಕತ್ತು ಬಂದಿದೆ. ಅಂದರೆ ನಿನಗೆ ನನ್ನ ತಾಕತ್ ಏನು ಅನ್ನೋದನ್ನ ತೋರಿಸತ್ತೀನಿ ಎಂದು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡರು.
ಪುಟ್ಟರಾಜು ಸಚಿವರಾಗಿದ್ದಾಗ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಅನುದಾನ ಕೊಟ್ರು. ನಾನು ಸೀರೆ ಹುಟ್ಟಿ ಬಂದಿದ್ರೆ ನನಗೂ ಅನುದಾನ ಕೊಡ್ತಿದ್ರು ಎಂಬ ನಾರಾಯಣಗೌಡ ಹೇಳಿದ್ದಾರೆ. ಡಿ.ಸಿ.ತಮ್ಮಣ್ಣ ಕಾಮಾಟಿಪುರ ಅಂದರೆ ಬಾಂಬೆಯವರು ಕೆ.ಆರ್.ಪೇಟೆಗೆ ಬಂದು ಸುದ್ದಿಗೋಷ್ಟಿ ಮಾಡುತ್ತಾರೆ. ನಾರಾಯಣಗೌಡರು ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದರೆ, ಅದು ಅವಮಾನ ಅಲ್ವಾ ಎಂದು ಮುಂಬೈ ಕನ್ನಡಿಗರಿಗೆ ತಿರುಗೇಟು ನೀಡಿದರು.
ಕುಮಾರಸ್ವಾಮಿ, ದೇವೇಗೌಡರ ಕಾಲಿಡಿದು ನಾರಾಯಣಗೌಡರಿಗೆ ಟಿಕೆಟ್ ಕೊಡಿಸಿದೆ. ಈಗ ನನ್ನ ಬಗ್ಗೆ ಆ ಅಯೋಗ್ಯ ಮಾತಾಡ್ತಾನೆ. ನನ್ನ ತಾಕತ್ತು ಏನೆಂಬುದನ್ನು ನಾರಾಯಣಗೌಡನಿಗೆ ತೋರಿಸತ್ತೀನಿ ಎಂದು ಪದೇ ಪದೇ ಕಿಡಿಕಾರಿದರು.
ನಾಗಮಂಗಲ ಶಾಸಕ ಕೆ.ಸುರೇಶ್ ಗೌಡ ಮಾತನಾಡಿ,  ಬಿಜೆಪಿಗೆ 4ರ ಅಂಕಿ ಆಗಿ ಬರಲ್ಲ. ಯಡಿಯೂರಪ್ಪ ನಾಲ್ಕು ತಿಂಗಳು ಸಿಎಂ ಆಗಿರುತ್ತಾರೆ. ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದರು.
ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ, ವ್ಯಭಿಚಾರಿ ಎಂದರೆ ತಲುಹಿಡುಕ ಅಂತಾ, ಆತ ಓರ್ವ ತಲೆಹಿಡುಕ. ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಯಡಿಯೂರಪ್ಪ ಜೊತೆ ಇರುತ್ತಾರೆ. ಈಗ ಮದ್ಯರಾತ್ರಿಯಲ್ಲಿ ವಿಜಯೇಂದ್ರ ಜತೆ ಇದ್ದರು ಇರಬಹುದು. ಪಾಪ ಕೆ.ಬಿ.ಚಂದ್ರಶೇಖರ್ ನಿಲ್ಲಿಸಿ ಸೋಲಿಸಲು ಬಿಜೆಪಿ ಜತೆ ಕೈ ಜೋಡಿಸಿದ್ದಾನೆ. ಆತ ಓರ್ವ ದುಷ್ಟ, ಅಧಿಕಾರ ಇಲ್ದೆ ಆತ ನಮ್ಮ ಬೈಯ್ದು ರಾಜ್ಯ ನಾಯಕನಾಗಲು ಹೊರಟಿದ್ದಾನೆ ಎಂದು ಚಲುವರಾಯಸ್ವಾಮಿ ವಿರುದ್ದ ಹಿಗ್ಗಾಮುಗ್ಗಾ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಜೆಡಿಎಸ್ ಸಮಾವೇಶದಲ್ಲಿ ನಾರಾಯಣಗೌಡ ವಿತರಿಸಿದ್ದಾರೆ ಎನ್ನಲಾದ ಸೀರೆಯನ್ನು ಬ್ಯಾಲದಕೆರೆ ನಂಜಪ್ಪ ಕಾರ್ಯಕರ್ತರಿಗೆ ಪ್ರದರ್ಶನ ಮಾಡಿದರು. ಬಳಿಕ ಮಾತನಾಡಿ ಹರಕಲು ಸೀರೆ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು. ಈ ಸೀರೆ ನಾರಾಯಣಗೌಡ ಕೊಟ್ಟಿದ್ದಾನೆ ಮರಳಾಗದಂತೆ ಕಾರ್ಯಕರ್ತರಿಗೆ ಕರೆ ನೀಡಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಅಧ್ಯಕ್ಷರ ಹೆಚ್ ಕೆ ಕುಮಾರಸ್ವಾಮಿ, ಶಾಸಕರಾದ ಎಂ.ಶ್ರೀನಿವಾಸ್, ಡಿಸಿ ತಮ್ಮಣ್ಣ, ಸಿಎಸ್ ಪುಟ್ಟರಾಜು, ಸುರೇಶಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ, ಬಾಲಕೃಷ್ಣ, ಶಿವಲಿಂಗೇಗೌಡ, ಮಾಜಿ ಸಂಸದ  ಎಲ್ ಆರ್ ಶಿವರಾಮೇಗೌಡ, ಮಾಜಿ ಶಾಸಕರುಗಳಾದ ಜಿಬಿ ಶಿವಕುಮಾರ್, ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಜಾನಕಿರಾಮ್, ಯುವ ಘಟಕದ ಅಧ್ಯಕ್ಷ ಕೆ.ಎಸ್.ಸಂತೋಷ್ ಕುಮಾರ್, ಉಪಾಧ್ಯಕ್ಷ ಸಂಗಾಪುರ ಪುಟ್ಟಸ್ವಾಮಿಗೌಡ, ಜಿಪಂ ಸದಸ್ಯ ಎಚ್ ಟಿ ಮಂಜು, ರಾಮದಾಸ್, ಮುಖಂಡರಾದ ಎ.ಆರ್.ರಘು ಬಸ್ ಕೃಷ್ಣೇಗೌಡ,

Leave a Comment