ಪಂಪ್‌ವೆಲ್‌ನಲ್ಲಿ ನಂದಿನಿ ಕಾರ್ನರ್ ಶುಭಾರಂಭ

ಮಂಗಳೂರು, ಅ.೧೨- ನಗರದ ಪಂಪ್‌ವೆಲ್ ಜಂಕ್ಷನ್ ಬಳಿಯ ಮುಗಿಲ್ಯ ಕಾಂಪ್ಲೆಕ್ಸ್‌ನಲ್ಲಿ ರಾಜ್ಯದ ಮೊದಲ ನಂದಿನಿ ಉತ್ಪನ್ನಗಳ ಮಳಿಗೆ ‘ನಂದಿನಿ ಕಾರ್ನರ್’ ಶುಭಾರಂಭಗೊಂಡಿದೆ. ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ದೀಪ ಬೆಳಗಿಸುವುದರ ಮೂಲಕ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ‘ಮಂಗಳೂರಿಗರಿಗೆ ನಂದಿನಿಯ ಎಲ್ಲ ಉತ್ಪನ್ನಗಳನ್ನು ಒಂದೆಡೆ ಮಾರಾಟ ಮಾಡುವ ಇಂಥ ಕಾರ್ನರ್‌ಗಳ ಪ್ರಯೋಜವನ್ನು ನಗರವಾಸಿಗಳು ಪಡೆದುಕೊಳ್ಳಬೇಕು’ ಎಂದರು. ಕೇಂದ್ರ ಸರಕಾರದ ಎಂಎಸ್‌ಎಂಐ ಇದರ ಸಾಕ್ರಟೀಸ್, ಕಾರ್ಪೊರೇಟರ್ ಆಶಾ ಡಿ’ಸಿಲ್ವ, ಮಾಲಕ ಜೆಕೆ ಶಿವಾನಂದ ರಾವ್, ನಂದಿನಿ ಮಾರ್ಕೆಟಿಂಗ್ ಮೆನೇಜರ್ … ಉಪಸ್ಥಿತರಿದ್ದರು. ನಂದಿನಿ ಹಾಲು, ತುಪ್ಪ, ಸಿಹಿತಿನಿಸು ಮಾತ್ರವಲ್ಲದೆ ಎಲ್ಲಾ ಉತ್ಪನ್ನಗಳು ನಂದಿನಿ ಕಾರ್ನರ್‌ನಲ್ಲಿ ಗ್ರಾಹಕರಿಗೆ ದೊರಕಲಿದೆ.

Leave a Comment