ಪಂಟನಿಗೆ ಎರಡೇ ಹಾಡು

ಲಕ್ಷ್ಮಣದಲ್ಲಿ ನಾಯಕನಾಗಿ ಗಮನಸೆಳೆದಿದ್ದ ಶಾಸಕ ಹೆಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ನಾಯಕನಾಗಿರುವ ಮತ್ತೊಂದು ಸಿನೆಮಾ ’ನಾ ಪಂಟ ಕಣೊ’ ಚಿತ್ರೀಕರಣ ಮುಗಿದಿದೆ ಬರೋಬರಿ ಮೂರು ವರ್ಷಗಳ ನಂತರ ’ನಾ ಪಂಟ ಕಣೊ’ ಚಿತ್ರಕ್ಕೆ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅಕ್ಷನ್ ಕಟ್ ಹೇಳಿದ್ದಾರೆ.

ಕಳೆದ ಶುಕ್ರವಾರ ನಡೆದ ’ನಾ ಪಂಟ ಕಣೊ’ ಚಿತ್ರದ ಹಾಡುಗಳ ಬಿಡುಗಡೆಯಲ್ಲಿ ಮಾತನಾಡಿದ ಎಸ್.ನಾರಾಯಣ್ ಸುದೀಪ್ ಬ್ಯುಸಿ ಇದ್ದರೂ  ಬಿಡುವು ಮಾಡಿಕೊಂಡು ಗೆಳೆತನದ ಸಲುವಾಗಿ ಹಾಡಿರುವುದು ಉಂಟು. ಅದೇ ರೀತಿ ’ನಾ ಪಂಟ ಕಣೊ’ ಚಿತ್ರಕ್ಕೆ ಮಾಂಟೇಜ್ ಹಾಡಿಗೆ ಕಂಠದಾನ ಮಾಡಿದ್ದಾರೆ. ಎನ್ನುತಾರೆ.

ಮೂರು ವರ್ಷ ಅಜ್ಞಾತವಾಸದಲ್ಲಿ ಇದ್ದಾಗ ನಟ ಅಭಿಜಿತ್ ವಿಜಯವಾಡದ ನಿರ್ಮಾಪಕರಿಂದ ಸಿನಿಮಾ ಮಾಡಲು ಅವಕಾಶ ಮಾಡಿಕೊಟ್ಟರು. ಮುಂದೆ ಎರಡನೆ ಚಿತ್ರ ರಾಕ್‌ಲೈನ್ ಸಂಸ್ಥೆರವರು ನೀಡಿದ್ದಾರೆ. ಪಂಟ ಚಿತ್ರವು ಫೆಬ್ರವರಿ ೧೧ ರಂದು ಬಿಡುಗಡೆ, ಮತ್ತು ಮನಸುಮಲ್ಲಿಗೆ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರಲಿದೆ. ಫೆಬ್ರವರಿ ೧೧ ವಿಶೇಷದಿನ ಎನ್ನಬಹುದು. ಚೈತ್ರದ ಪ್ರೇಮಾಂಜಲಿ ಬಿಡುಗಡೆಯಾಗಿ ಅಂದಿಗೆ ೨೫ ವರ್ಷ ಆಗುತ್ತದೆ ಎಂದು ಖುಷಿ ಹಂಚಿಕೊಂಡರು.

ಅವಕಾಶವಿಲ್ಲದೆ ಕೆಲಸವಿಲ್ಲದಂತಾಗಿದ್ದ ನನಗೆ ಇವೆರಡು ಚಿತ್ರಗಳು ಸಿಕ್ಕಿರುವುದು ಇನ್ನೂ ೨೫ ವರ್ಷಗಳ ಕಾಲ ನಿರ್ದೇಶನ ಮಾಡುವ ಉತ್ಸಾಹ ತಂದಿದೆ ಚಿತ್ರದಲ್ಲಿನ ಎರಡು ಹಾಡುಗಳನ್ನು ನಾನೇ ಬರೆದು ಸಂಗೀತ ನೀಡಿದ್ದೇನೆ ಒಂದನ್ನು ಸುದೀಪ್ ಮತ್ತೊಂದನ್ನು ಶ್ರೇಯಾಘೋಶಾಲ್ ಶಾನ್ ಹಾಡಿದ್ದಾರೆ ಎಂದು ವಿವರ ನೀಡಿದರು. ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ನನಗೆ  ಚಿತ್ರರಂಗ ಹೂಸತು ಪತ್ನಿ,ಮಗನ ಸಲುವಾಗಿ ಲಕ್ಷ್ಮಣ ನಿರ್ಮಾಣ ಮಾಡಲಾಗಿತ್ತು. ರಾಕ್‌ಲೈನ್‌ರವರ ಡಕೋಟ ಎಕ್ಸ್‌ಪ್ರೆಸ್ ತುಂಬಾ ಚೆನ್ನಾಗಿದೆ. ಎಲ್ಲರನ್ನು ಪ್ರೋತ್ಸಾಹಿಸಿದಂತೆ ಕನ್ನಡದ ಜನರು ಇವನಿಗೂ ಸಹಕಾರ ನೀಡುತ್ತಾರೆ ಅಂತ ನಂಬಿದ್ದೇನೆ ಎಂದು ಹೇಳಿಕೊಂಡರು.

ಶೀರ್ಷಿಕೆ ಕೇಳಿದರೆ ಜಾಡಿಸಿ ಎದೆಗೆ ಒದೆಯೋಣ ಎನ್ನುವ ಹಾಗಿದ್ದು, ಆಕರ್ಷಣೆಯಿಂದ ಕೂಡಿದೆ. ಪ್ರತಿಭಾವಂತ ಯುವಕರು ಚಿತ್ರರಂಗಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ. ಬಂದವರೆಲ್ಲ ದೊಡ್ಡ ಮಟ್ಟದ ಹಂತಕ್ಕೆ ಬರುತ್ತಿದ್ದಾರೆ. ಅದೇ ಸಾಲಿಗೆ ಇವರು ಸೇರಲಿ. ನಾರಾಯಣ್‌ರವರು ಅಜ್ಞಾತವಾಸ ಅಂತ ಹೇಳಿಕೊಂಡಿರುವುದು ಸರಿ ಅನಿಸುವುದಿಲ್ಲ ಎಂದರು ರಾಕ್‌ಲೈನ್ ವೆಂಕಟೇಶ್. ಭಗವಂತ ವಿಶ್ರಾಂತಿ ಪಡೆಯಲಿ ಎಂದು ಬಿಡುವು ಮಾಡಿಕೊಟ್ಟಿದ್ದಾನೆ. ತಾವು ಬಳಸಿರುವ ಪದವನ್ನು ಮನಸ್ಸಿನಿಂದ ತೆಗೆದುಹಾಕಿ.

ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ  ನೀವು. ಎಲ್ಲ  ಜವಾಬ್ದಾರಿ ತೆಗೆದುಕೊಂಡು ನಿರ್ಮಾಪಕರಿಗೆ ಎಲ್ಲೂ ಚ್ಯುತಿ ಬಾರದ ಹಾಗೆ ನೋಡಿಕೊಳ್ಳುವ ನಿಮ್ಮ ವ್ಯಕ್ತಿತ್ವ  ಹೊಸಪೀಳಿಗೆಯ ನಿರ್ದೇಶಕರಿಗೆ ಮಾದರಿಯಾಗಿದೆಎಂದು ಹೊಗಳಿದರು.ಶಾಸಕ ಶ್ರೀನಿವಾಸ ಮೂರ್ತಿ ಮೊದಲಬಾರಿ ನಾಯಕನಿಗೆ ಸೆಡ್ಡು ಹೊಡೆಯುವ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು.

ತೆಲುಗು ಸ್ಟಾರ್ ನಟ ಮಹೇಶ್‌ಬಾಬು ಸಂಬಂಧಿಯಾಗಿರುವ  ಸುಬ್ರಮಣ್ಯಂ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಅಧ್ಯಕ್ಷ ಹೆಚ್.ಡಿ.ಗಂಗರಾಜು ಚಿತ್ರಕ್ಕೆ ಶುಭ ಕೋರಿದರು.  ನಾಯಕ ಅನೂಪ್, ಕೋಲಾರದ ನಾಯಕಿ ರತೀಕ್ಷ ಅವರು ಪಾಲ್ಗೊಂಡಿದ್ದರು.

Leave a Comment