ಪಂಜಕುಸ್ತಿಯಲ್ಲಿ ಸಮಗ್ರ ತಂಡ ಪ್ರಶಸ್ತಿ

ಹರಿಹರ, ಫೆ. 12 – ಕರ್ನಾಟಕ ಪಂಜ ಕುಸ್ತಿ ಸಂಘ ಹಾಗೂ ಉಡುಪಿ ಜಿಲ್ಲಾ ಪಂಜಾಕುಸ್ತಿ ಅಸೋಸಿಯೇಷನ್ ನಿಂದ ಉಡುಪಿಯಲ್ಲಿ ನಡೆದ 7ನೇ ರಾಜ್ಯ ಮಟ್ಟದ ಪಂಜಾಕುಸ್ತಿ ಸ್ಪರ್ಧೆಯಲ್ಲಿ ನಗರದ ಬ್ರದರ್ಸ್ ಜಿಮ್ ಕ್ರೀಡಾಪಟುಗಳ ತಂಡ ಸತತವಾಗಿ 7ನೇ ಬಾರಿ ಸಮಗ್ರ ತಂಡ-2019 ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದೆ.
ರಾಜ್ಯದ 13 ಜಿಲ್ಲೆಗಳ 582 ಕ್ರೀಡಾಪಟುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಬ್ರದರ್ಸ್ ಜಿಮ್‍ನ 63 ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ಹಂತದ ಸ್ಪರ್ಧೆಗಳಲ್ಲಿ ಈ ಜಿಮ್‍ನ ಕ್ರೀಡಾಪಟುಗಳು 14 ಚಿನ್ನ, 14 ಬೆಳ್ಳಿ, 4 ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಈ ಪ್ರಶಸ್ತಿಯ ಜೊತೆಗೆ ತಂಡಕ್ಕೆ ಕರ್ನಾಟಕ ಅರ್ಜುನ-2019, ಕರ್ನಾಟಕ ಯುವಶ್ರೀ-2019, ಕರ್ನಾಟಕ ಉಷಾಕಿರಣ-2019, ಉತ್ತಮ ತಂಡ-2019 ಪ್ರಶಸ್ತಿಯನ್ನು ಪಡೆದಿದೆ. ಕ್ರೀಡಾಪಟುಗಳ ಸಾಧನೆಗೆ ಶಾಸಕ ಎಸ್.ರಾಮಪ್ಪ, ಬ್ರದರ್ಸ್ ಜಿಮ್‍ನ ಸಂಚಾಲಕ ಅಂತರಾಷ್ಟ್ರೀಯ ದೇಹದಾಢ್ರ್ಯ ಕ್ರೀಡಾಪಟು ಅಕ್ರಂಬಾಷಾ, ತರಬೇತುದಾರರಾದ ಮೊಹಮ್ಮದ್ ರಫೀಕ್, ನಗರಸಭಾ ಸದಸ್ಯ ಎಸ್.ಎಂ.ವಸಂತ್ ಕುಮಾರ್, ಜುಬೇರ್ ಅಹ್ಮದ್ ಖಾಜಿ, ತೌಫೀಕ್ ಅಹ್ಮದ್ ಶುಭ ಕೋರಿದ್ದಾರೆ.

Leave a Comment