ಪಂಚಾಯತ್ ರಾಜ್ ಎಇ‌ಇರ ಮೇಲೆ ಎಸಿಬಿ ದಾಳಿ

ರಾಯಚೂರು.ಸೆ.04- ಬೆಳ್ಳಂ ಬೆಳಿಗ್ಗೆ ನಗರದಲ್ಲಿ ಎಸಿಬಿ ದಾಳಿ ನಡೆದಿದೆ. ಪಂಚಾಯತ ರಾಜ್ ಇಲಾಖೆಯ ಉಪ ವಿಭಾಗ ಕಛೇರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಂಕರ ನಾಯಕ ಅವರ ಮೇಲೆ ದಾಳಿ ನಡೆದಿದೆ.
ಎಸಿಬಿಯ ಡಿಎಸ್ಪಿ ಪಿ.ಬಷೀರುದ್ದೀನ್, ಅರುಣ್‌ಕುಮಾರ, ಪಿ.ಐ.ರವಿನಾಥ, ಶ್ರೀಧರ್ ದೊಡ್ಡಿ ಇವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಅಕ್ರಮ ಆಸ್ತಿ ಆರೋಪದ ಹಿನ್ನೆಲೆಯಲ್ಲಿ ಡ್ಯಾಡಿ ಕಾಲೋನಿಯಲ್ಲಿರುವ ಅವರ ನಿವಾಸ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು 25ಕ್ಕೂ ಅಧಿಕ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಶಂಕರ ನಾಯಕ ಅವರಿಗೆ ಸೇರಿದ 3 ಅಂತಸ್ತಿನ ಮನೆಯಲ್ಲಿ ಎಸಿಬಿ ಅಧಿಕಾರಿಗಳು ತೀವ್ರ ತಪಾಸಣೆ ಕಾರ್ಯ ನಡೆಸಿದರು. ತಪಾಸಣೆಗೆ ಸಂಬಂಧಿಸಿ ಮುಂಜಾನೆ 11 ಗಂಟೆವರೆಗೂ ಯಾವುದೇ ಮಾಹಿತಿ ನೀಡರಲಿಲ್ಲ. ದಾಳಿ ಸಂದರ್ಭದಲ್ಲಿ ಅನೇಕ ಮಾಹಿತಿ ಲಭ್ಯವಾಗಿವೆಂದು ಹೇಳಲಾಗುತ್ತಿದೆ. ದಾಳಿ ಮುಂಚೆ ಶಂಕರ ನಾಯಕ ಮತ್ತು ಅವರ ಆಸ್ತಿಗೆ ಸಂಬಂಧಿಸಿ ಎಸಿಬಿ ಮಾಹಿತಿ ಸಂಗ್ರಹಿಸಿ, ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿತು.

Leave a Comment