ಪಂಚವಟಿ ವೃಕ್ಷ ಬೆಳೆದು ಪುಣ್ಯ ಕಟ್ಟಿಕೊಳ್ಳೋಣ

ಹುಬ್ಬಳ್ಳಿ,ಸೆ.9- ಭೂಮಿ, ನೀರು, ಗಾಳಿ, ಗಿಡಳೆಲ್ಲವನ್ನು ಭಗವಂತನು ನಮ್ಮೆಲ್ಲರಿಗಾಗಿ ಉಚಿತವಾಗಿ ನೀಡಿದರೂ ನಾವು ಭಗವಂತನಿಗಾಗಿ ಧನ್ಯವಾದಗಳನ್ನು ಹೇಳಲು ಅಸಮರ್ಥರು, ಆದರೆ ನಮ್ಮ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಕಾಯ್ದುಕೊಂಡು ನಾಡನ್ನು ಸದಾ ಹಸಿರಾಗಿಟ್ಟು ನಮ್ಮ ಸಮಾಜಕ್ಕಾದರೂ ಒಳಿತನ್ನು ಮಾಡೋಣ ಎಂಬ ಹೆಬ್ಬಯಕೆಯಿಂದ ಪಂಚವಟಿ ವೃಕ್ಷಗಳನ್ನು ಬೆಳೆದು ಪುಣ್ಯ ಕಟ್ಟಿಕೊಳ್ಳೋಣ ಎಂದು ಕುಂದಗೋಳದ ಪೂಜ್ಯ ಶ್ರೀ ಕಲ್ಯಾಣಪುರ  ಬಸವಣ್ಣಜ್ಜನವರು ತಮ್ಮ ಶೂಭಾಶೀರ್ವಚನ ಹಾರೈಕೆ ನೀಡಿದರು.
ಆಮಂತ್ರಂ ಅಕ್ಷರಂ ನಾಸ್ತಿ, ನಾಸ್ತಿ ಮೂಲಂ ಅನೌಷಧಂ ಎಂದರೆ ಔಷಧವಿಲ್ಲದ ಸಸ್ಯಗಳೆಲ್ಲ ಎನ್ನುವ ಉಕ್ತಿಯಾಗಿದೆ.
ರಾಮಯಣದ ಕಥಾ ರೂಪದಲ್ಲಿಯೂ ಕೂಡ ಪಂಚವಟಿ ಎಂಬ ಶಬ್ದವು ಪರಿಚಿತವಾಗಿದೆ. ಐದು ಪವಿತ್ರ ಔಷಧಿಗಳ ಪರಿಸರ ಪೂರಕ ವೃಕ್ಷ ಸಮೂಹವೇ ಪಂಚವಟಿ ನಮ್ಮ ಧಾರವಾಡ ಜಿಲ್ಲೆಯ 108 ಪಂಚವಟಿ ಘಟಕಗಳನ್ನು ನಿರ್ಮಿಸುವ ಮಹಾ ಹಂಬಲವಾಗಿದೆ. ಈ ಯೋಜನೆಯನ್ನು ಲಿಂಗರಾಜ ನಿಡುವಣಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ.

ಉದ್ಯಾನಗಳು, ಸರಕಾರಿ ಜಾಗೆಗಳು ಶಾಲಾ ಕಾಲೇಜುಗಳು, ಧಾರ್ಮಿಕ ಸ್ಥಳಗಳುಲ್ಲಿ ಈ ಐದು ವೃಕ್ಷಗಳನ್ನು ಅಂದರೆ ಪತ್ರಿ , ಬೇವು, ಅತ್ತಿ, ಅರಳಿ ಹಾಗೂ ಬನ್ನಿ ಗಿಡಗಳ ಸಮೂಹವನ್ನು ಬೆಳಸಿ, ಶುದ್ಧ ಪರಿಸರ ಅಮ್ಲಜನ ಸೃಷ್ಠಿಸಿ ಆರೋಗ್ಯವಂತ ಸಮಾಜವನ್ನು ರೂಪಿಸುವ ಯೋಜನೆ ನಮ್ಮದಾಗಿದೆ ಎಂದು ಅಧ್ಯಕ್ಷರಾದ ಮೇಘರಾಜ ಕೆರೂರ ತಿಳಸಿದರು. ಇಂದು ವನಮಹೋತ್ಸವ ಕಾರ್ಯಕ್ರಮದಂಗವಾಗಿ ಹಾಗೂ 108 ಪಂZವಟಿ ಘಟಕ ನಿರ್ಮಾಣದ ಉದ್ದೇಶಕ್ಕಾಗಿ ಹುಬ್ಬಳ್ಳಿ ಗೋಪನಕೊಪ್ಪ ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಪೂಜ್ಯ ಶ್ರೀಗಳ ಅಮೃತ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭಧಲ್ಲಿ   ಬೀರಪ್ಪ ಖಂಡೇಕರ ಪಾಲಿಕೆ ಸದಸ್ಯರು. ರಾಜೇಂದ್ರ ಬಿಜಾಪೂರ, ಶಶಿಧರ ಹಿರೇಮಠ, ವಸಂತ ಅಗಸಿಮನಿ, ನಾಗರಾಜ ಯಂಡಿಗೇರಿ,  ಎಸ್. ಆರ್. ಬಸರಗಿ, ಜಗದೀಶ ಎಲ್.ಎಮ್. ನಾಗರಾಜ ಕಮಡೊಳ್ಳಿ, ಅತಿಥಿಗಳು ಉಪಸ್ಥಿತರಿದ್ದು ಹೊಂಗೆ, ಬಸವನ ಪಾದ, ಕಾಡು ಬಾದಾಮಿ, ಬೆಂಗಾಲಿ, ಶಿಸೋಡಿಯಾ, ನಾಗಲಿಂಗಪುಷ್ಟ ಗುಲ್‍ಮಹಾರಗಳಂತಹ ವಿವಿಧ ಜಾತಿಯ 50ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

Leave a Comment