ಪಂಚಮಸಾಲಿ-ತರಳಬಾಳು ಪೀಠಗಳು ಎರಡು ಕಣ್ಣು!

ಹರಪನಹಳ್ಳಿ.ಸೆ.10; ಹರ ಮತ್ತು ಶಿವ ಎಂದರೆ ಬೇರೆಯಲ್ಲ, ನಾವು ಬೇರೆ ಅಲ್ಲ. ಪಂಡಿತಾರಾಧ್ಯ ಪೂಜ್ಯರ ಸಂಗವನ್ನು ನಾವು ಮಾಡಿ ಪಾವನರಾಗಿದ್ದೇವೆ. ಪಂಚಮಸಾಲಿ ಮತ್ತು ತರಳಬಾಳು ಪೀಠಗಳು ನಾಡಿನ ಎರಡು ಕಣ್ಣುಗಳಾಗಿ ಕೆಲಸ ಮಾಡಲಿವೆ ಎಂದು ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹೇಳಿದರು. ಪಟ್ಟಣದ ಎಚ್‍ಪಿಎಸ್ ಕಾಲೇಜ್ ಆವರಣದಲ್ಲಿ ಸಾಣೇಹಳ್ಳಿ ಶಿವಾನುಭವ ಸಮಿತಿವತಿಯಿಂದ ಹಮ್ಮಿಕೊಂಡಿರುವ ವಚನಕಾರರ ತಾತ್ವಿಕ ಚಿಂತನಾಗೋಷ್ಠಿಯ ಶ್ರಾವಣ ಸಂಜೆ ಕಾರ್ಯಕ್ರಮದ ಸಾಮರೋಪ ಸಮಾರಂಭದಲ್ಲಿ ಅವರು ಅಶೀರ್ವಚನ ನೀಡಿದರು. ದೇಶದ ಪ್ರಧಾನಿಗಳ ಕನಸು `ಸಬ್ ಕೆ ಸಾಥ್, ಸಬ್ ಕೆ ವಿಕಾಸ್’ ಎನ್ನುವುದಾದರೆ; ಸಾಣೇಹಳ್ಳಿ ಶ್ರೀಗಳು `ಹಮಾರೆ ಸಾಥ್ ಸ್ವಾಸ್ಥ್ಯ ಕೆ ಸಾಥ್’ ಎನ್ನುವ ಚಳುವಳಿಯನ್ನು ಹಳ್ಳಿ ಹಳ್ಳಿಗಳಲ್ಲಿ ಆರಂಭಿಸಿದ್ದಾರೆ. ಸ್ವಚ್ಛತೆ ಕೇವಲ ಸರ್ಕಾರದ ಕೆಲಸವಲ್ಲ; ಮಠಮಾನ್ಯಗಳ ಕೆಲಸವೂ ಹೌದು ಎನ್ನುವುದನ್ನು ಶ್ರಾವಣ ಸಂಜೆಯ ಕಾರ್ಯಕ್ರಮ ತೋರಿಸಿಕೊಟ್ಟಿದೆ. ನಮಗೂ ಸಾಣೇಹಳ್ಳಿಯ ಶ್ರೀಗಳಿಗೂ ಅವಿನಾಭಾವ ಸಂಬಂಧವಿದೆ. ಸರಿಯಾದ ವ್ಯಕ್ತಿಗಳ ಜೊತೆ ಸರಿಯಾಗಿ ಕನೆಕ್ಟ್ ಮಾಡುವವರು ಪಂಡಿತಾರಾಧ್ಯ ಸ್ವಾಮೀಜಿಗಳು ಎಂದು ಸ್ಮರಿಸಿದರು. ಯೋಗ ಮೊದಲು ರೋಗವನ್ನು ನಿಯಂತ್ರಿಸುತ್ತದೆ, ಕ್ರಮೇಣ ರೋಗವನ್ನು ನಿವಾರಿಸುತ್ತದೆ. ಮನೆಗೆ ಗ್ಯಾಸ ಬಂದು; ಮನುಷ್ಯರಿಗೆ ಗ್ಯಾಸ್ಟ್ರಿಕ್ ಆಗಿದೆ. ಯೋಗವನ್ನು ನಂಬುವವರ ಬದುಕಿನಲ್ಲಿಯೂ ಯೋಗ ಬರುವುದು. ಕ್ಷೌರಿಕರನ್ನು ನೋಡಿದರೆ ಒಳ್ಳೆಯದಾಗುವುದಿಲ್ಲ ಎನ್ನುವ ಮೂಢನಂಬಿಕೆ ಇನ್ನೂ ಇದೆ. ಆದರೆ ಬಸವಣ್ಣ ಹಡಪದ ಅಪ್ಪಣ್ಣನನ್ನೇ ತನ್ನ ಆಪ್ತ ಸಹಾಯಕನನ್ನಾಗಿ ನೇಮಿಸಿಕೊಂಡಿದ್ದರು ಎಂದು ತಿಳಿಸಿದರು.

 

Leave a Comment