ಪಂಚಭಾಷೆಗಳ ಚಿತ್ರ  “ಕಾಲವೇ ಮೋಸಗಾರ”

ಕಲಬುರಗಿ ಫೆ 16: ಕನ್ನಡ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾದ ಕಾಲವೇ ಮೋಸಗಾರ ಚಲನಚಿತ್ರ ಮಾರ್ಚ 27 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಭರತ್ ಸಾಗರ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಪ್ರೀತಿಪ್ರೇಮ, ಥ್ರಿಲ್ಲರ್ , ಆ್ಯಕ್ಷನ್ ಕಥಾನಕದ ಈ ಚಿತ್ರಕ್ಕೆ  ಕಿರುತೆರೆಯ ಖ್ಯಾತನಟಿ ಯಶಸ್ವಿನಿ ರವೀಂದ್ರ ನಾಯಕಿಯಾಗಿದ್ದಾರೆ. ಕುರಿ ಪ್ರತಾಪ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ಶಂಕರಮೂರ್ತಿ, ರಾಜಾ ಚಂಡೂರು ಸೇರಿದಂತೆ ಅನೇಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ.ಬೆಂಗಳೂರು ಸೇರಿದಂತೆ ಅನೇಕ ರಮ್ಯ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ.ಭರವಸೆಯ ಹಿನ್ನೆಲೆಗಾಯಕ ಸಂಜಿತ ಹೆಗಡೆ ಮತ್ತು ಅನುರಾಧ ಭಟ್ ಮತ್ತು ಅನೇಕ ಖ್ಯಾತ ಗಾಯಕರು ಐದು ಹಾಡುಗಳನ್ನು ಹಾಡಿದ್ದಾರೆ. ರಜತ್ ದುರ್ಗೋಜಿ ಸಾಲಂಕೆ ಚಿತ್ರ ನಿರ್ಮಿಸಿದ್ದು, ಸಂಜಯ ವದತ್ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ ರಾಘವೇಂದ್ರ ಚಿಂಚನಸೂರ ಉಪಸ್ಥಿತರಿದ್ದರು..

Leave a Comment