ನ.29 ರಂದು ಮುಂದಿನ ನಿಲ್ದಾಣ ಚಿತ್ರ ಬಿಡುಗಡೆ

ದಾವಣಗೆರೆ.ನ.22; ಹೊಸ ಛಾಪಿನೊಂದಿಗೆ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಸೃಷ್ಠಿಸುತ್ತಿರುವ
ಮುಂದಿನ ನಿಲ್ದಾಣ ಚಲನಚಿತ್ರ ಇದೇ ನ.29 ರಂದು ಬಿಡುಗಡೆಯಾಗಲಿದೆ ಎಂದು ನಿದೇರ್ಶಕ ವಿನಯ್ ಭಾರದ್ವಾಜ್ ಹೇಲಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಂದರವಾದ ವರ್ಣ ವಿನ್ಯಾಸ, ಆಕರ್ಷಕ ವಸ್ತ್ರ ವಿನ್ಯಾಸ, ಮನಮೋಹಕ ತಾಣಗಳೊಂದಿಗೆ ಉತ್ತಮ ಕಥೆಯೊಂದಿದೆ. ಸೊಗಸಾದ ಹಾಡುಗಳೊಂದಿಗೆ ಚಿತ್ರ ಮೂಡಿಬಂದಿದೆ. ಮುಂದಿನ ನಿಲ್ದಾಣ ಚಿತ್ರ ಕುತೂಹಲ ಮೂಡಿಸುವಂತಿದೆ. ನಾಯಕ ಪ್ರವೀಣ್ ತೇಜ್ ಹಾಗೂ ನಾಯಕಿಯಾಗಿ ರಾಧಿಕ ನಾರಾಯಣ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಏಳು ವೈವಿಧ್ಯಪೂರ್ಣ ಹಾಡುಗಳು ಚಿತ್ರದಲ್ಲಿವೆ.ಅನನ್ಯಾ ಕಶ್ಯಪ್, ಹಿರಿಯ ನಟ ದತ್ತಣ್ಣ,ನಂಜುಂಡ, ಅಜಯ್‍ರಾಜ್ ಮುಂತಾದ ಕಲಾವಿದರು ನಟಿಸಿದ್ದಾರೆ.ಮಸಾಲಾ ಕಾಫಿ ತಂಡ ಸಂಗೀತ ನಿರ್ದೇಶಿಸಿರುವ ಮನಸೇ ಮಾಯಾ ಹಾಗೂ ವಾಸುಕಿ ವೈಭವ್ ಹಾಡಿರುವ ಇನ್ನೂನು ಬೇಕಾಗಿದೆ ಹಾಡುಗಳು ಜನರ ಮನ ಗೆದ್ದಿವೆ.ಕನ್ನಡ ಚಿತ್ರರಂಗಕ್ಕೆ ಮೊದಲಬಾರಿಗೆ ಪಾದಾರ್ಪಣೆ ಮಾಡಿರುವ ನಟ ಶಾರುಖ್‍ಖಾನ್ ಒಡೆತನದ ರೆಡ್ ಚಿಲ್ಲಿಸ್ ಮುಂದಿನ ನಿಲ್ದಾಣಕ್ಕೆ ಬಣ್ಣ ವಿನ್ಯಾಸ ಮಾಡಿದ್ದಾರೆ.ಹಲವು ವಿಶೇಷಗಳನ್ನು ಚಿತ್ರಹೊಂದಿದೆ.ಜನರು ನಮ್ಮ ಚಿತ್ರ ವಿಕ್ಷೀಸಿ ಹಾರೈಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ನಟ ಪ್ರವೀಣ್ ತೇಜ್, ನಟಿ ರಾಧಿಕ ನಾರಾಯಣ್,ಅನನ್ಯಾ ಕಶ್ಯಪ್ ಇತರರಿದ್ದರು.

Leave a Comment