ನ.23 ಮಕ್ಕಳ ಬೆಳಗುಸಿರಿ ಸಾಂಸ್ಕೃತಿಕ ಕಾರ್ಯಕ್ರಮ

ರಾಯಚೂರು.ನ.13- ನ. 23 ರಂದು ಡಾನ್ ಬೊಸ್ಕೋ ಸಮಾಜ ಸೇವಾ ಸಂಸ್ಥೆ ವತಿಯಿಂದ ಮಕ್ಕಳ ಬೆಳಗುಸಿರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೇವದುರ್ಗ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆಂದು ಮಕ್ಕಳ ಹಕ್ಕುಗಳ ಕ್ಲಬ್ ಒಕ್ಕೂಟದ ಉಪಾಧ್ಯಾಕ್ಷ ಅಕ್ಷತಾ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ನ.20 ಕ್ಕೆ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯ 30 ನೇ ವರ್ಷಾಚರಣೆ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಾಥಾವನ್ನು ಜಹೀರುದ್ದಿನ ಬಾಷಾ ವೃತ್ತದಿಂದ ಪ್ರಾರಂಭಗೊಂಡು ಜಾಥಾವು ಮಿನಿ ವಿಧಾನಸೌಧ ಮಂಭಾಗದಿಂದ ಡಾನ್ ಬೊಸ್ಕೋ ಸಂಸ್ಥೆ ಮೈದಾನದಲ್ಲಿ ಸೇರಲಿದೆ. ಜಾಥಾ ಕಾರ್ಯಕ್ರಮದಲ್ಲಿ 18 ಸರ್ಕಾರಿ ಶಾಲೆಗಳಿಂದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 30 ಕ್ಕಿಂತ ಹೆಚ್ಚು ಸಿಬ್ಬಂದಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಜಯಶ್ರೀ ಚೆನ್ನಾಳ ಅವರು ಉದ್ಘಾಟಿಸುವರು. ಡಿಡಿಪಿಐ ಬಿ.ಕೆ.ನಂದನೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕು ಪಠ್ಯ ಪುಸ್ತಕ ಪ್ರತ್ಯೇಕವಾಗಿ ಶಾಲೆಗಳಲ್ಲಿ ಜಾರಿಗೆ ತರಬೇಕು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ವ್ಯವಸ್ಥಿತವಾಗಿ ಮಕ್ಕಳ ಗ್ರಾಮ ಸಭೆ ಆಯೋಜಿಸಿ ಮಕ್ಕಳ ಬೇಡಿಕೆ ಪೂರೈಸಬೇಕು. ಪಂಚಾಯತಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಕಡ್ಡಾಯಗೊಳಿಸಬೇಕು. ಆಯ್ಕೆಗೊಂಡ ಪಿಡಿಓ ಕನಿಷ್ಟ 5 ವರ್ಷದವರೆಗೆ ಅದೇ ಪಂಚಾಯತಿಯಲ್ಲಿ ಸೇವೆ ಸಲ್ಲಿಸಬೇಕು ಸೇರಿದಂತೆ ಇನ್ನಿತರ ಹಕ್ಕೋತ್ತಾಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರೇಶ, ಫಾ.ಕುರಿಯಾಕೋಸ್, ಉಷಾ, ಭೀಮಮ್ಮ, ರಂಜಿತ, ಅಮರೇಶ, ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment