ನ.20 ಕ್ಕೆ ಪುಸ್ತಕಪಂಚಮಿ

ದಾವಣಗೆರೆ.ನ.18; ಡಾ.ಎಚ್.ಎಫ್ ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನದ ವತಿಯಿಂದ ನ.20 ರಂದು ಮಧ್ಯಾಹ್ನ 3ಕ್ಕೆ ನಗರದ ಪಿ.ಜೆ ಬಡಾವಣೆಯಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪುಸ್ತಕ ಪಂಚಮಿ 11 ನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಸಹಸಂಚಾಲಕರಾದ ಡಾ.ಸಿ.ಆರ್ ಬಾಣಾಪುರಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕಳೆದ 2008 ರಿಂದಲೂ ನಿರಂತರವಾಗಿ ಪ್ರತಿವರ್ಷ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ.ಈ ಬಾರಿ 11 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಪ್ರತಿ ಶಾಲೆಯ 2 ಮಕ್ಕಳಂತೆ 50 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ.ದತ್ತಿದಾನಿಗಳ ಸಹಾಯದಿಂದ ಪುಸ್ತಕ ಪಂಚಮಿ ಕಾರ್ಯಕ್ರಮ ಸಾಗುತ್ತಾ ಬಂದಿದೆ. ಓರ್ವ ವಿದ್ಯಾರ್ಥಿಗೆ 8ರಿಂದ 10 ಪಠ್ಯೇತರ ಪುಸ್ತಕ ನೀಡಲಾಗುವುದು ಎಂದರು. ಅಂದು ನಡೆಯುವ ಸಮಾರಂಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಜೆ.ಎಸ್ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ಎಸ್ ಹಿರೇಮಠ್, ಶಕುಂತಲ ಗುರುಸಿದ್ದಯ್ಯ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಡಯಟ್ ಪ್ರಾಚಾರ್ಯರಾದ ಹೆಚ್.ಕೆ ಲಿಂಗರಾಜ್,ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ಆಗಮಿಸಲಿದ್ದಾರೆಂದರು.
ಸಂಚಾಲಕ ಪ್ರಕಾಶ್ ಬೂಸ್ನೂರು ಮಾತನಾಡಿ 2017 ರಲ್ಲಿ 30 ವಿದ್ಯಾರ್ಥಿಗಳಿಗೆ,18 ರಲ್ಲಿ 40 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಲಾಗಿದೆ 2019 ರಲ್ಲಿ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಶಬ್ದಕೋಶ,ಅಟ್ಲಾಸ್,ವ್ಯಾಕರಣ ಪುಸ್ತಕ,ನುಡಿಮುತ್ತುಗಳ ಸಂಗ್ರಹ,ಆರೋಗ್ಯದ ಮಾಹಿತಿಯ ಪುಸ್ತಕ, ಮಂಕುತಿಮ್ಮನ ಕಗ್ಗ,ಅಬ್ದುಲ್ ಕಲಾಂ ಅವರ ಜೀವನ ಸಾಧನೆ ಸೇರಿದಂತೆ ವಿವಿಧ ಪುಸ್ತಕಗಳನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿ.ಸಿ ಪುರಾಣಿಕ್‍ಮಠ,ಸೋಮಶೇಖರ ಎಂ.ಹಿರೇಮಠ,ಶಾಂತಕುಮಾರ್ ಪುರಾಣಿಕ್ ಮಠ ಇದ್ದರು.

Leave a Comment