ನ್ಯಾಯಾಲಯದಲ್ಲಿ ಕೊರೊನಾ ಪತ್ತೆ  ಕಾರ್ಯ ಆರಂಭ

ಬಳ್ಳಾರಿ, ಮಾ.23: ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬರುವ ನ್ಯಾಯಾಧೀಶರು, ಸಿಬ್ಬಂದಿ, ವಕೀಲರು, ಕಕ್ಷಿದಾರರಿಗೆ ಕೊರೊನಾ ಸೋಂಕು ಇರುವ ಬಗ್ಗೆ ಪತ್ತೆ ಹಚ್ಚುವ (ಸ್ಕ್ರೀನಿಂಗ್) ಕಾರ್ಯ ಇಂದಿನಿಂದ ಆರಂಭಗೊಂಡಿದೆ.

ನ್ಯಾಯಾಲಯದ ಮುಖ್ಯದ್ವಾರದಲ್ಲಿ ಆರೋಗ್ಯ ಇಲಾಖೆ ಥರ್ಮಾ ಮೀಟರ್ ನ್ನು ಹಿಡಿದು ನ್ಯಾಯಾಲಯಕ್ಕೆ ಬಂದವರ ಹಣೆಮೇಲೆ ಅದನ್ನು ಇರಿಸಿ ಪರೀಕ್ಷಿಸುವ ಕಾರ್ಯ ನಡೆಯಿತು. ಇದರಲ್ಲಿ ಜಿಲ್ಲಾ ನ್ಯಾಯಾಧೀಶರಾಧಿಯಾಗಿ ನ್ಯಾಯಾಲಯದ ಎಲ್ಲಾ ಸಿಬ್ಬಂದಿ ಪಾಲ್ಗೊಂಡಿತು. ಅಲ್ಲದೆ ಸಿಬ್ಬಂದಿಗೆ ಮಾಸ್ಕ್ ಗಳನ್ನು ಸಹ ಈ ಸಂದರ್ಭದಲ್ಲಿ ವಿತರಿಸಲಾಯಿತು.

ಇನ್ನು ಮುಂದೆ ಯಾರೇ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಬೇಕಾದರೆ ಈ ಸ್ಕ್ರೀನಿಂಗ್ ಪರೀಕ್ಷೆಗೆ ಒಳಗಾಗಿಯೇ ತೆರಳಬೇಕಿದೆ.

Leave a Comment