ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ಹೇಳಿದ ವ್ಯಕ್ತಿಗೆ ಕಠಿಣ ಶಿಕ್ಷೆ

ಕಲಬುರಗಿ,ಫೆ.15- ಬೇರೆ ವ್ಯಕ್ತಿಯ ಹೆಸರಿನಲ್ಲಿ ಸುಳ್ಳು ಸಾಕ್ಷಿಯನ್ನು ಹೇಳುವ ಮೂಲಕ ನ್ಯಾಯಾಲಯಕ್ಕೆ ದಾರಿ ತಪ್ಪಿಸಿ ವಂಚಿಸಿದ ಆರೋಪಿಗೆ ಎರಡು ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ.ಗಳ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ನಗರದ ಮಹಿಳಾ ಪೊಲೀಸ ಠಾಣೆಯ ಪ್ರಕರಣವೊಂದರಲ್ಲಿ ಎರಡನೇ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಲಯಾಲಯದಲ್ಲಿ ತಾಹೇರ ಅಲಿ ರಾಜಮೊಹ್ಮದ ಸಾಬ ಕಿರ್ಮಾನಿ ಹೆಸರಿನಲ್ಲಿ ಸುಳ್ಳು ಸಾಕ್ಷಿ ಹೇಳಿದ ಬಷೀರ ಪಟೇಲ ಮದರ ಪಟೇಲ ಮಾಲಗತ್ತಿ ಎಂಬ ಆರೋಪಿಗೆ ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯ ಎರಡು ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.

ಬೇರೆ ವ್ಯಕ್ತಿಯ ಹೆಸರಿನಲ್ಲಿ ಸುಳ್ಳು ಸಾಕ್ಷಿ ಹೇಳಿದ ಆರೋಪಿ ಬಷಿರ ಪಟೇಲ ಮದರ ಪಟೇಲ ಸಾ.ಮಾಲಗತ್ತಿ ಎಂಬುವವರ ವಿರುದ್ಧ ಸ್ಟೇಷನ ಬಜಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ತನಿಖಾಧಿಕಾರಿ ಜೆ.ಎಚ್.ಇನಾಮದಾರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭೀಯೋಜಕ ವೈ.ಜಿ.ತುಂಗಳ ಅವರು ವಾದ ಮಂಡಿಸಿದ್ದರು, ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಅರವಿಂದ ಎನ್.ವ್ಹಿ. ಅವರು, ಆರೋಪಿಗೆ ಫೆ.7, 2020ರಂದು 2 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ..

Leave a Comment