ನ್ಯಾಯಾಧೀಶರ ಮೇಲೆ ಹಲ್ಲೆ ಮತ್ತು ವಕೀಲರ ಕೊಲೆ ಖಂಡಿಸಿ ಮನವಿ

ಸಿರುಗುಪ್ಪ, ಆ.2 : ತಾಲೂಕು ವಕೀಲರ ಸಂಘದಿಂದ ರಾಯಚೂರು ಜಿಲ್ಲೆ ಲಿಂಗಸೂಗೂರು ಜೆ.ಎಂ.ಎಫ್.ಸಿ. ನ್ಯಾಯಾಧೀಶರ ಮೇಲೆ ಹಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಹಿರಿಯ ವಕೀಲ ಅಜೀತ್ ನಾಯಕ್ ಕೊಲೆ ಖಂಡಿಸಿ ಬೈಕ್ ಱ್ಯಾಲಿ ನಡೆಸಿ ತಹಸೀಲ್ದಾರ್ ಎಂ.ಸುನೀತಾರಿಗೆ ಬುಧವಾರ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಶ್ರೀನಿವಾಡ ಮಾತನಾಡಿ, ನ್ಯಾಯಾದೀಶರ ಮೇಲೆ ಡಾ.ಎಂ.ಎಸ್.ಕನಕರೆಡ್ಡಿ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು, ಅತ್ಯಂತ ಖಂಡನೀಯ ಮತ್ತು ವಿಷಾಧಕರ ಸಂಗತಿಯಾಗಿದ್ದು, ಹಲ್ಲೆ ನಡೆಸಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ನ್ಯಾಯಾದೀಶರಿಗೆ ಸೂಕ್ತ ಭದ್ರತೆ ಒದಗಿಸಬೇಕು.
ದಾಂಡೇಲಿಯಲ್ಲಿ ಹಿರಿಯ ವಕೀಲ ಅಜಿತ್‍ನಾಯಕ್‍ರನ್ನು ಕೊಲೆಮಾಡಿದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲು ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವ ನ್ಯಾಯಾದೀಶರಿಗೆ ಮತ್ತು ನ್ಯಾಯವಾದಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು. ನಗರದ ನ್ಯಾಯಾಲಯದ ಆವರಣದಿಂದ ತಾಲೂಕು ಕಚೇರಿವರೆಗೆ ಬೈಕ್ ಱ್ಯಾಲಿ ನಡೆಯಿತು.

ಕಾರ್ಯದರ್ಶಿ ಎಸ್.ಮಂಜುನಾಥಗೌಡ, ಜಂಟಿಕಾರ್ಯದರ್ಶಿ ರಾಜಶೇಖರ್‍ಸ್ವಾಮಿ, ಖಜಾಂಚಿ ಜಿ.ವಸಂತಕುಮಾರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ನಾಗರಾಜ, ದಿಗಂಬರಸ್ವಾಮಿ, ರಾಜಭಕ್ಷಿ, ಹಿರಿಯ ವಕೀಲರಾದ ಎ.ಶಿವರುದ್ರಗೌಡ, ಜಿ.ಸುಧಾಕರರೆಡ್ಡಿ, ಎನ್.ಅಬ್ದುಲ್, ಮಲ್ಲಿಗೌಡ, ರಾಮನಾಯಕ, ತಿರುಮಲ, ಸುರೇಶ್‍ಸ್ವಾಮಿ, ವಿಶ್ವನಾಥಶೆಟ್ಟಿ ಇದ್ದರು.

Leave a Comment