ನ್ಯಾಟ್ ಗ್ರಿಡ್‌ ಸದ್ಯದಲ್ಲೆ ಕಾರ್ಯಾರಂಭ!

ನವದೆಹಲಿಸೆ.23.ಆಂತರಿಕ ಸುರಕ್ಷತೆ ಕುರಿತಾದ ಮಹತ್ವದ ಯೋಜನೆ ನ್ಯಾಟ್‌ಗ್ರಿಡ್‌(ಗುಪ್ತಚರ ಮಾಹಿತಿ ಸಂಗ್ರಹಣೆ ವ್ಯವಸ್ಥೆ) 2020ರ ಜನೆವರಿಯಿಂದ ಕಾರ್ಯಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಂಕಿಂಗ್‌, ವಲಸೆ, ತೆರಿಗೆದಾರನ ಮಾಹಿತಿ, ಬಸ್‌ , ವಿಮಾನ ಹಾಗೂ ರೈಲ್ವೇ ಪ್ರಯಾಣದ ಕುರಿತಾದ ಎಲ್ಲಾ ಮಾಹಿತಿ ಸಂಗ್ರಹಿಸುವ ಈ ಇಂಟೆಲಿಜೆನ್ಸ್‌ ವ್ಯವಸ್ಥೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಮುಂಬೈ ದಾಳಿಯ ನಂತರ ದೇಶದಲ್ಲಿ ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲು ಆರಂಭವಾದ ಈ ನ್ಯಾಟ್‌ಗ್ರಿಡ್‌ ವ್ಯವಸ್ಥೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತೊಮ್ಮೆ ಕೈಗೆತ್ತುಕೊಂಡು ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ಬರುವ ವರ್ಷದ ಮೊದಲ ತಿಂಗಳಿನಿಂದ ತನ್ನ ಚಟುವಟಿಕೆ ಆರಂಭಿಸಲಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಈ ನ್ಯಾಟ್‌ಗ್ರಿಡ್‌ ಇಂಟೆಲಿಜೆನ್ಸ್‌ ವ್ಯವಸ್ಥೆಯಲ್ಲಿ ವಲಸೆ ಬರುವ ಎಲ್ಲರ ಆಗಮನ ಮತ್ತು ನಿರ್ಗಮನದ ದಾಖಲು, ಕ್ರೆಡಿಟ್‌ ಕಾರ್ಡ್‌ ಖರೀದಿ, ಟೆಲಿಕಾಂ,ವಿಮಾನ ಪ್ರಯಾಣ, ಟ್ರೈನ್‌ ಪ್ರಯಾಣಿಕರು ಹೀಗೆ ವಿವಿಧ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ. ಸದ್ಯ ಮೊದಲ ಹಂತದಲ್ಲಿ 10 ಬಳಕೆದಾರರ ಏಜೆನ್ಸಿ ಮತ್ತು 21 ಸೇವೆ ಒದಗಿಸುವ ಏಜೆನನ್ಸಿಗಳು ನ್ಯಾಟ್‌ಗ್ರಿಡ್‌ ಜೊತೆ ಕೈಜೋಡಿಸಿದ್ದಾರೆ.

ಈ ನ್ಯಾಟ್‌ ಗ್ರಿಡ್‌ ಇಂಟೆಲಿಜೆನ್ಸ್‌ ವ್ಯವಸ್ಥೆಯಲ್ಲಿ ವಲಸೆ ಬರುವ ಎಲ್ಲರ ಆಗಮನ ಮತ್ತು ನಿರ್ಗಮನದ ದಾಖಲು, ಕ್ರೆಡಿಟ್‌ ಕಾರ್ಡ್‌ ಖರೀದಿ, ಟೆಲಿಕಾಂ,ವಿಮಾನ ಪ್ರಯಾಣ, ಟ್ರೈನ್‌ ಪ್ರಯಾಣಿಕರು ಹೀಗೆ ವಿವಿಧ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ. ಸದ್ಯ ಮೊದಲ ಹಂತದಲ್ಲಿ 10 ಬಳಕೆದಾರರ ಏಜೆನ್ಸಿ ಮತ್ತು 21 ಸೇವೆ ಒದಗಿಸುವ ಏಜೆನನ್ಸಿಗಳು ನ್ಯಾಟ್‌ಗ್ರಿಡ್‌ ಜೊತೆ ಕೈಜೋಡಿಸಿದ್ದಾರೆ.

Leave a Comment