ನೋವು- ನಲಿವು

ಮರೆಯಾದ ಅಂಬಿ

ಕನ್ನಡ ಚಿತ್ರರಂಗದ ಬೆನ್ನೆಲುಬಾಗಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಎನ್ನುವ ಅನರ್ಘ ಮಾಣಿಕ್ಯ ಮರೆಯಾಗಿದೆ, ಇದು ಕುಟುಂಬಕ್ಕಷ್ಟೇ ಅಲ್ಲ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅಂಬಿರೀಷ್ ಅಗಲಿಗೆಯಿಂದ  ಬಣ್ಣದ ಬದುಕಿನಲ್ಲಿ ಅನಾಥ ಭಾವ ಕಾಡುವಂತೆ ಮಾಡಿದೆ.

ದರ್ಶನ್ ಕಾರು ಅಪಘಾತ

ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ದರ್ಶನ್ ಅವರ ಕಾರು ಅಪಘಾತಕ್ಕೀಡಾಗಿ ಚಿತ್ರರಂಗ ಆತಂಕಕ್ಕೆ ಒಳಗಾಗಿತ್ತು. ಒಂದು ತಿಂಗಳಿಗೂ ಹೆಚ್ಚು ಕಾಲ ವಿಶ್ರಾಂತಿಯ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಂಬರೀಷ್ ಅವರ ಸಾವು ಅವರನ್ನು ಮತ್ತಷ್ಟು ಭರ್ಜರಿತರನ್ನಾಗಿಸಿದೆ.

ಐತಿಹಾಸಿಕ ಪ್ರೀತಿ

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಐತಿಹಾಸಿಕ ಚಿತ್ರಗಳ  ಪ್ರೀತಿ ಹೆಚ್ಚಾಗಿದೆ. ಮದಕರಿ ನಾಯಕ ಚಿತ್ರ ಮಾಡುವ ಕುರಿತಂತೆ ನಟ ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಗಲ್ಲಿ ಶೀತಲ ಸಮರ ನಡೆದಿತ್ತು. ಒಂದೇ ವ್ಯಕ್ತಿಯ ಎರಡು ಚಿತ್ರಗಳನ್ನು ಇಬ್ಬರು ನಟರು ಮಾಡಬೇಕೆಂದೇನು ಇಲ್ಲ ಎನ್ನುವ ವಾದವೂ ಕೇಳಿ ಬಂದಿತ್ತು. ಈ ನಡುವೆ ಮತ್ತೊಂದು ಐತಿಹಾಸಿಕ ಚಿತ್ರ ಬಿಚ್ಚುಗತ್ತಿ ಸದ್ದಿಲ್ಲದೆ ಆರಂಭಗೊಂಡಿದೆ.

ಸ್ಟಾರ್ ಪುತ್ರರ ಆಗಮನ

ಬಣ್ಣದ ಬದುಕಿಗೆ ಈ ವರ್ಷ ಹಲವು ಸ್ಟಾರ್ ನಟರ ಪುತ್ರರ ಆಗಮನವಾಗಿದೆ.ಅದರಲ್ಲಿ ಅಂಬರೀಷ್ ಪುತ್ರ ಅಭಿಷೇಕ್, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ, ಕೆ. ಮಂಜು ಪುತ್ರ ಶ್ರೇಯಸ್ ಸೇರಿದಂತೆ ಹಲವು ನಟ,ನಟಿಯರ ಆಗಮನವಾಗಿದೆ.

film-raghavendra-rajukumarಮರಳಿ ಬಂದ ರಾಘಣ್ಣ

ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಮರಳಿ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿ, ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಬಡ್ತಿ ಪಡೆದ ನಟರು

ನಟ ಯಶ್ ಮತ್ತು ರಾಧಿಕಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಅಪ್ಪ-ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಅದೇ ರೀತಿ ನಾಯಕ ಅಜಯ್ ರಾವ್ ಕೂಡ.

ದುನಿಯಾ ಸುತ್ತ ವಿವಾದ

ನಟ ದುನಿಯಾ ವಿಜಯ್ ಸುತ್ತ ವಿವಾದದಳೇ ಸುತ್ತಿಕೊಂಡಿದೆ. ಅದರಲ್ಲಿಯೂ ಪತ್ನಿ ಮತ್ತು ಮಕ್ಕಳ ಪದೇ ಪದೇ ಜಗಳ, ಪೋಲೀಸ್ ಠಾಣೆಯ ಮೆಟ್ಟಿಲೇರಿ,ಪೊಲೀಸರಿಗೇ ಕಿರಿಕಿರಿ ಉಂಟು ಮಾಡಿತ್ತು. ಕೊನೆಗೆ ಬೇಸತ್ತ ಪೋಲೀಸರು ದುನಿಯಾ ವಿಜಯ್ ಕುಟುಂಬಕ್ಕೆ ಮತ್ತೊಮ್ಮೆ ಠಾಣೆ ಮೆಟ್ಟಿಲೇರಿದರೆ ಪರಿಣಾಮ ನೆಟ್ಟಗಿರಲ್ಲ ಎನ್ನುವ ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಬ್ರೇಕ್ ಅಪ್

ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಇನ್ನೇನು ಮದುವೆಯಾದರೂ ಎನ್ನುವಾಗಲೇ ಬೇರೆ ಬೇರೆಯಾಗಿ ಚಿತ್ರರಂಗದಲ್ಲಿ  ದೊಡ್ಡ ಸಂಚಲನ ಸೃಷ್ಠಿ ಮಾಡಿದ್ದರು.

ಮದುವೆ ಸಂಭ್ರಮ

ನಟ ಧ್ರವ ಸರ್ಜಾ ಮತ್ತು ನಟಿ ಮೇಘನಾ ರಾಜ್, ನಟ ದಿಗಂತ್ ಮತ್ತು ನಟಿ ಐಂದ್ರಿತಾ ಹೊಸ ಬಾಳಿಗೆ ಅಡಿಇಟ್ಟರು. ಮತ್ತೊಂದೆಡೆ ನಟ ಧ್ರವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ವಿವಾಹ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ

film-arjun-shruthiಮೀಟೂ ಕಿರಿಕ್

ನಟ ಅರ್ಜುನ್ ಸರ್ಜಾ ವಿರುದ್ದ ನಟಿ ಶೃತಿ ಹರಿಹರನ್ ಮಾಡಿದ ಮೀಟೂ ಕಿರಿಕ್ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಹ ಸೃಷ್ಠಿ ಮಾಡಿತ್ತು. ಪ್ರತಿಷ್ಟೇಗೆ ಬಿದ್ದು ನ್ಯಾಯಾಲಯದ ಮೆಟ್ಟಿಲೇರಿ ಚಿತ್ರರಂಗದ ಮಾನವನ್ನು ಬೀದಿಗೆ ತಂದು ನಿಲ್ಲಿಸಿದ್ದರು.

ಕಲಾವಿದರ ಸಂಘ ಉದ್ಘಾಟನೆ

ಹಿರಿಯ ನಟ ಅಂಬರೀಷ್ ಅವರ ಒತ್ತಾಸೆ ಮತ್ತು ಮತುವರ್ಜಿಯಿಂದಾಗಿ ಚಾಮರಾಜಪೇಟೆಯಲ್ಲಿ ಕಲಾವಿದರ ಸಂಘದ ಕಛೇರಿ ಉದ್ಘಾಟಿಸಲಾಯಿತು. ಅದಕ್ಕೆ ಡಾ.ರಾಜ್ ಕುಮಾರ್ ಅವರ ಹೆಸರಿಡುವಂತೆ ಸ್ವತಃ ಅಂಬರೀಷ್ ಅವರೇ ಸೂಚಿಸಿ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಳಿ ಸಂಘದ ಕಟ್ಟಡ ಉದ್ಘಾಟಿಸಿದ್ದರು.

Leave a Comment