2018 ಗೆಲುವಿಗಿಂತ ನೋವೇ ಹೆಚ್ಚು

  • ಚಿಕ್ಕನೆಟಕುಂಟೆ ಜಿ.ರಮೇಶ್

ಸೋಲು ಗೆಲುವು, ನಿರೀಕ್ಷೆ,ನಿರಾಸೆ,ಅಬ್ಬರ,ಆರ್ಭಟ, ಸಾವು, ನೋವು, ನಲಿವು ಸೇರಿದಂತೆ ಎಳು ಬೀಳುಗಳ ನಡುವೆ ೨೦೧೮ಕ್ಕೆ ವಿದಾಯ ಹೇಳಲು ಚಿತ್ರರಂಗ ಸಜ್ಜಾಗಿದೆ. ಗೆಲುವಿಗಿಂತ ಸೋಲೋ ಅಧಿಕ ಕಂಡ ವರ್ಷದಲ್ಲಿ ಹೊಸ ಹುರುಪು ಮತ್ತು ವಿಶ್ವಾಸದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಕೂಡ ಅಣಿಯಾಗಿದೆ.

ಕಳೆದ ವರ್ಷ ೧೯೦ ಚಿತ್ರಗಳು ಬಿಡುಗಡೆಯಾಗಿ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಈ ವರ್ಷ ಅದನ್ನು ಮೀರಿ ೨೩೦ರ ಸನಿಹಕ್ಕೆ ಬಂದು ನಿಂತು ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದೂ ಗೆಲುವು ಮಾತ್ರ ಬೆರಳಣಿಕೆಯಷ್ಟು ಮಾತ್ರ.

ವರ್ಷದ ಕೊನೆಯಲ್ಲಿ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿದ್ದುದು ಚಿತ್ರರಂಕ್ಕೆ ಬರಸಿಡಿಲು ಬಡಿದಂತಾಗಿದೆ. ಸಿನಿಮಾದ ಎಲ್ಲಾ ಸಮಸ್ಯೆಗಳಿಗೆ ಪರಿಹಾರದಂತಿದ್ದ ಅಂಬರೀಷ್ ಅವರ ಅಗಲಿಕೆ ಚಿತ್ರರಂಗದ ಮಂದಿಯಲ್ಲಿ ಅನಾಥ ಬಾವ ಮೂಡುವಂತಾಗಿದ್ದು ಅಂತಹ ಗಟ್ಟಿಗ ಮತ್ತು ಧೀಮಂತ ವ್ಯಕ್ತಿ ಮತ್ತಿನ್ಯಾರು ಎನ್ನುವ ನಿರೀಕ್ಷೆಯಲ್ಲಿ ಚಿತ್ರರಂಗದ ಮಂದಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ವರ್ಷದ ಆರಂಭದ ಜನವರಿಯಲ್ಲಿ ೧೩ ಚಿತ್ರಗಳು ತೆರೆಗೆ ಬಂದರೆ, ಫೆಬ್ರವರಿಯಲ್ಲಿ ಅದರ ಸಂಖ್ಯೆ ದುಪ್ಪಾಟ್ಟಾಗಿತ್ತು ಅಂದರೆ ಬಿಡುಗಡೆಐಆದ ಚಿತ್ರಗಳು ೨೫, ಮಾರ್ಚ್ ತಿಂಗಳಲ್ಲಿ ೧೯. ಏಪ್ರಿಲ್‌ನಲ್ಲಿ ೨೨, ಮೇನಲ್ಲಿ ೧೨, ಜೂನ್‌ನಲ್ಲಿ ೨೪, ಜುಲೈ ೨೩, ಆಗಸ್ಟ್ ೩೪, ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ತಲಾ ೯, ನವಂಬರ್‌ನಲ್ಲಿ ೨೬, ಡಿಸೆಂಬರ್‌ನಲ್ಲಿ ೧೦ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬಂದಿವೆ. ಕನ್ನಡದ ಜೊತೆ ಜೊತೆಗೆ  ಕೊಡವ, ತುಳು ಛಾಷೆಯಲ್ಲಿ ಚಿತ್ರಗಳು ಬಿಡುಗಡೆಯಾಗಿವೆ, ಈ ಬಗ್ಗ ಲಭ್ಯವಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಒಂದಷ್ಟು ವಿಶ್ಲೇಷಿಸುವ ಪ್ರಯತ್ನ. ಅಷ್ಟೇ.

ಸ್ಟಾರ್ ನಟರ ಜೊತೆಗೆ ಹೊಸಬರ ಚಿತ್ರಗಳೂ ಗಮನ ಸೆಳೆದಿವೆ. ಬಿಡುಗಡೆಯಾದ ಬಹುತೇಕ ಚಿತ್ರಗಳಲ್ಲಿ ಹೊಸಬರ ಚಿತ್ರಗಳೇ ಅಧಿಕ. ಅಲ್ಲೊಂದು ಇಲ್ಲೊಂದು ಎನ್ನುವಂತೆ ಸ್ಟಾರ್‌ಗಳ ಸಿನಿಮಾಗಳೂ ಬಿಡುಗಡೆಯಾಗಿದ್ದು ನಾವೂ ಇದ್ದೇವೆ ಎನ್ನುವುದನ್ನು ನಿರೂಪಿಸುತ್ತಲೇ ಗೆಲುವು ಕಂಡಿದ್ದಾರೆ. ಅವರ ಪೈಕಿ ಶಿವರಾಜ್ ಕುಮಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಮತ್ತೆ ಕೆಲವರ ಸಿನಿಮಾಗಳು ಬಂದಷ್ಟೇ ಚಿತ್ರರಂಗದಿಂದು ಜಾಗ ಖಾಲಿ ಮಾಡಿವೆ.

ಜೊತೆಗೆ ಅನೇಕ ಸ್ಟಾರ್‌ಗಳ ಸಿನಿಮಾಗಳು ಈ ವರ್ಷ ಬಿಡುಗಡೆಯಾಗಿಲ್ಲ ಕೂಡ. ಜೊತೆಗೆ ಮಕ್ಕಳ ಚಿತ್ರ ಎಂದು ಬಿಂಬಿತವಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ‘ರ್‍ಯಾಂಬೋ-೨’, ‘ಗುಳ್ಟು-’, ‘ಅಯೋಗ್ಯ’ ಚಿತ್ರಗಳು ಕೂಡಾ ಈ ವರ್ಷದ ಹಿಟ್‌ಲಿಸ್ಟ್‌ನಲ್ಲಿ ಸಿಗುತ್ತವೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಕೆ.ಜಿಎಫ್ ಚಿತ್ರರಂಗದಲ್ಲಿ ದಾಖಲೆ ಬರೆದಿದೆ.

ಚಿತ್ರರಂಗದಲ್ಲಿ ನಟ, ನಟಿಯರು ಒಬ್ಬರ ಹಿಂದೆ ಒಬ್ಬರು ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅದರಲ್ಲಿ ಚಿರಂಜೀವಿ ಸರ್ಜಾ, ಮೇಘನಾ ರಾಜ್, ದಿಗಂತ್ ಮತ್ತು ಐಂದ್ರಿತಾ, ಜೊತೆಗೆ ದ್ರವ ಸರ್ಜಾ ಬಾಲ್ಯಗ ಗೆಳತಿ ಪ್ರೇರಣಾ ಅವರೊಂದಿಗೆ ವಿವಾಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇವೆಲ್ಲದುರ ನಡುವೆ ಸಾಕಷ್ಟು ಸುದ್ದಿ ಮಾಡಿದ ವಿಷಯ ಮೀಟೂ ಪ್ರಕರಣ. ನಟಿ  ಶೃತಿ ಹರಿಹರನ್, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ದ ಮಾಡಿದ್ದ ಆರೋಪ ಚಿತ್ರರಂಗದಲ್ಲಿ ಅಲ್ಲೋಲ ಕಲೋಲ ವಾತಾರಣವನ್ನೇ ಸೃಷ್ಠಿ ಮಾಡಿತ್ತು. ಇದರಿಂದ ಒಂದರ್ಥದಲ್ಲಿ ಚಿತ್ರರಂಗ ಬೆಚ್ಚಿ ಬಿದ್ದದ್ದಂತೂ ಸುಳ್ಳಲ್ಲ. ಚಿತ್ರರಂಗಕ್ಕೆ ಕಳಂಕ ಪ್ರಾಯವಗಿದ್ದ ಮೀಟೂ ಪ್ರಕರಣವನ್ನು ಇತ್ಯರ್ಥ ಪಡಿಸಲು ಹಿರಿಯ ನಟ ಅಂಬರೀಷ್ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಫಲ ಸಿಗಲಿಲ್ಲ. ನಟಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ತಮ್ಮದೇ ನಿಲುವಿಗೆ ಅಂಟಿಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಂಬರೀಷ್ ಅವರೂ ನೀವೇ ಬಗೆಹರಿಸಿಕೊಳ್ಳಿ ಎಂದು ಸಮ್ಮನಾದರು. ಒಂದು ರೀತಿ ಈ ಇಬ್ಬರೂ ಅಂಬರೀಷ್ ಅವರ ಮಾತಿಗೆ ಬೆಲೆ ನೀಡಲಿಲ್ಲ.

ಮೀಟೂ ಪ್ರಕರಣದಿಂದ ಶೃತಿ ಹರಿಹರನ್‌ಗೆ ಕೆಲ ಚಿತ್ರಗಳಿಂದ ಗೇಟ್ ಪಾಸ್ ಕೂಡ ನೀಡಲಾಗಿತ್ತು. ಇನ್ನು ಮುಂದೆ ಅವಕಾಶ ಸಿಗುವುದಿಲ್ಲ ಎನ್ನುವ ಬೇಸರವನ್ನೂ ಅವರು ಹೊರಹಾಕಿದ್ದೂ ಉಂಟು. ಆರಂಭದಲ್ಲಿ ಅಬ್ಬರ ಮೂಡಿಸಿ, ನಿರೀಕ್ಷೆಯ ನೊಗ ಬಾರ ಹೆಚ್ಚು ಮಾಡಿದ್ದ ಚಿತ್ರಗಳು ನೆಲ ಕಚ್ಚಿವೆ.

Leave a Comment